ಐಪಿಎಲ್: ಝಹೀರ್ ಖಾನ್ ಹಿಂದಿಕ್ಕಿ ದಾಖಲೆ ಬರೆದ ಸಂದೀಪ್ ಶರ್ಮಾ

ಶಾರ್ಜಾ: ಸನ್ ರೈಸರ್ಸ್ ಹೈದರಾಬಾದ್‌ನ ವೇಗಿ ಸಂದೀಪ್ ಶರ್ಮಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ ಪವರ್‌ಪ್ಲೇನಲ್ಲಿ ಅತೀ ಯಶಸ್ವಿ ವೇಗಿಯಾಗಿ ಗುರುತಿಸಿಕೊಂಡಿರುವ ಸಂದೀಪ್ ಶರ್ಮಾ, ಭಾರತದ ಮಾಜಿ ವೇಗಿ ಝಹೀರ್ ಖಾನ್ ಹಿಂದಿಕ್ಕಿ ದಾಖಲೆ ಬರೆದಿದ್ದಾರೆ.
ಮಂಗಳವಾರ (ನವೆಂಬರ್ 3) ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಂದೀಪ್ ಶರ್ಮಾ ಈ ಸಾಧನೆ ಮಾಡಿದ್ದಾರೆ. ಆ ಪಂದ್ಯದಲ್ಲಿ ಶರ್ಮಾಗೆ 3 ವಿಕೆಟ್ ಲಭಿಸಿತ್ತು. ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಸನ್ ರೈಸರ್ಸ್ ಹೈದರಾಬಾದ್ ಜಯ ಕಂಡಿತ್ತು. ಈ ಗೆಲುವಿನೊಂದಿಗೆ ಎಸ್‌ಆರ್‌ಎಚ್ ಪ್ಲೇ ಆಫ್‌ಗೂ ಪ್ರವೇಶಿಸಿತ್ತು.
ಐಪಿಎಲ್‌ನಲ್ಲಿ ಪವರ್‌ಪ್ಲೇನಲ್ಲಿ ಹೆಚ್ಚು ವಿಕೆಟ್ ಪಡೆದ ವೇಗಿಯಾಗಿ ಸಂದೀಪ್ ಶರ್ಮಾ ಮೊದಲ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಝಹೀರ್ ಖಾನ್ ಹೆಸರಿನಲ್ಲಿ ಈ ದಾಖಲೆಯಿತ್ತು. ಪವರ್ ಪ್ಲೇನಲ್ಲಿ 52 ವಿಕೆಟ್ ಪಡೆದಿದ್ದ ಝಹೀರ್ ಈ ದಾಖಲೆ ಉಳಿಸಿಕೊಂಡಿದ್ದರು. ಈಗ ಸಂದೀಪ್ ಶರ್ಮಾ 53 ವಿಕೆಟ್‌ಗಳಿಂದ ಝಹೀರ್ ಮೀರಿಸಿದ್ದಾರೆ.
ಐಪಿಎಲ್ ನಲ್ಲಿ ಮೊದಲ ಆರು ಓವರ್‌ಗಳಲ್ಲಿ ಹೆಚ್ಚು ವಿಕೆಟ್ ಪಡೆದ ವೇಗಿಗಳ ಸಾಲಿನಲ್ಲಿ ಈಗ ಸಂದೀಪ್ ಶರ್ಮಾ (53 ವಿಕೆಟ್‌ಗಳು), ಝಹೀರ್ ಖಾನ್ (52), ಭುವನೇಶ್ವರ್ ಕುಮಾರ್ (48), ಉಮೇಶ್ ಯಾದವ್ (45), ಧವಳ್ ಕುಲಕರ್ಣಿ (44) ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications