For Quick Alerts
ALLOW NOTIFICATIONS  
For Daily Alerts
 

ಈ 3 ಐಪಿಎಲ್ ಸ್ಟಾರ್ ಆಟಗಾರರು ಒಮ್ಮೆ ಹರಾಜಾಗದೆ ಉಳಿದಿದ್ದರು ಎಂಬ ಅಚ್ಚರಿಯ ಸಂಗತಿ ಗೊತ್ತಿದೆಯಾ?

IPL 2020: star IPL players once went unsold

ಕೊರೊನಾ ವೈರಸ್‌ನ ಕಾರಣದಿಂದಾಗಿ ಐಪಿಎಲ್ ನಡೆಯುತ್ತೋ ನಡೆಯಲ್ವೋ ಎನ್ನುವ ಆತಂಕ ಈಗ ಕಡಿಮೆಯಾಗಿದ್ದು ಟೂರ್ನಮೆಂಟ್‌ಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ವಿದೇಶದಲ್ಲಿ ಐಪಿಎಲ್ ನಡೆಸಲು ತೀರ್ಮಾನಿಸಲಾಗಿದೆ.

ಮತ್ತೊಂದೆಡೆ ಕ್ರಿಕೆಟ್ ಆಟಗಾರರು ಕೂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿದ್ದಾರೆ. ಕ್ರಿಕೆಟ್ ಲೋಕದ ಶ್ರೀಮಂತ ಕ್ರಿಕೆಟ್ ಟೂರ್ನಿಯಾಗಿರುವ ಐಪಿಎಲ್‌ನಲ್ಲಿ ಅಬ್ಬರಿಸಿ ಅಭಿಮಾನಿಗಳ ಮನಗೆಲ್ಲಬೇಕು ಹಾಗು ಫ್ರಾಂಚೈಸಿಗಳ ಮೆಚ್ಚುಗೆ ಪಡೆಯಬೇಕೆಂದು ಎಲ್ಲಾ ಆಟಗಾರರು ಅಂದುಕೊಳ್ಳುತ್ತಿರುತ್ತಾರೆ.

ಆದರೆ ಐಪಿಎಲ್‌ನಲ್ಲಿ ಅಬ್ಬರಿಸಿ ತಮ್ಮದೇ ಚಾಪು ಮೂಡಿಸಿದ ಕೆಲ ಆಟಗಾರರು ಒಂದು ಬಾರಿ ಹರಾಜಾಗದೆಯೇ ಉಳಿದುಕೊಂಡಿದ್ದರು ಎಂಬ ಅಚ್ಚರಿಯ ಸಂಗತಿ ನಿಮಗೆ ಗೊತ್ತಿದೆಯಾ. ಅ ಕುತೂಹಲಕಾರಿ ಸಂಗತಿಯ ಸಂಪೂರ್ಣ ವಿವರ ನಿಮಗಾಗಿ

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್

ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ಅದ್ಭುತ ಆಟಗಾರ. ಪ್ರಸಕ್ತ ಆಸ್ಟ್ರೇಲಿಯಾ ತಂಡದ ಅತ್ಯುತ್ತಮ ಆಟಗಾರ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೂರೂ ಫಾರ್ಮ್ಯಾಟ್‌ಗಳಲ್ಲೂ ಆಯಾ ಮಾದರಿಗೆ ತಕ್ಕಂತೆ ಆಟವಾಡಿ ತಂಡವನ್ನು ಗೆಲ್ಲಿಸುವ ಚಾಕಚಕ್ಯತೆ ಸ್ಟೀವ್ ಸ್ಮಿತ್‌ಗಿದೆ.

ಹರಾಜಾಗದೆ ಉಳಿದಿದ್ದರು ಸ್ಮಿತ್

ಹರಾಜಾಗದೆ ಉಳಿದಿದ್ದರು ಸ್ಮಿತ್

ಆದರೆ 2012 ರ ಹರಾಜು ಪ್ರಕ್ರಿಯೆಯಲ್ಲಿ ಸ್ಮಿತ್ ಹರಾಜಾಗದೆ ಉಳಿದಿದ್ದರು. ಹರಾಜು ಸಂದರ್ಭದಲ್ಲಿ ಸ್ಮಿತ್ ಆವರನ್ನು ಯಾವ ತಂಡವೂ ಕೊಳ್ಳಲು ಬಯಸಿರಲಿಲ್ಲ. ಬಳಿಕ ಪುಣೆ ವಾರಿಯರ್ಸ್ ತಂಡದಲ್ಲಿದ್ದ ಆಟಗಾರ ಮಿಚೆಲ್ ಮಾರ್ಶ್ ಗಾಯಗೊಂಡ ಕಾರಣ ಟೂರ್ನಿಯಿಂದ ಹೊರಬಿದ್ದರು. ಈ ಸ್ಥಾನಕ್ಕೆ ಪುಣೆ ತಂಡ ಸ್ಮಿತ್ ಅವರನ್ನು ಬದಲಿ ಆಟಗಾರನನ್ನಾಗಿ ಸೇರ್ಪಡೆಗೊಳಿಸಿಕೊಂಡಿತು.

ಕ್ರಿಸ್ ಗೇಲ್

ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಟಿ20 ಆದರಿಗೆ ಹೇಳಿ ಮಾಡಿಸಿದ ಆಟಗಾರ. ಸ್ಪೋಟಕ ಆಟದಿಂದಾಗಿ ಅಭಿಮಾನಿಗಳ ಮನಗೆಲ್ಲುವಲ್ಲಿ ಕ್ರಿಸ್ ಗೇಲ್ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ಪೈಕಿ ಡೇವಿಡ್ ವಾರ್ನರ್ ಮಾತ್ರ ರನ್ ಗಳಿಕೆಯಲ್ಲಿ ಕ್ರಿಸ್ ಗೇಲ್‌ಗಿಂತ ಮುಂದಿದ್ದಾರೆ. ಇಂತಾ ಆಟಗಾರ ಕೂಡ ಐಪಿಎಲ್‌ನಲ್ಲಿ ಹರಾಜಾಗದೆ ಉಳಿದುಕೊಂಡಿದ್ದರು ಎನ್ನುವ ವಿಚಾರ ನೆನಪಿದ್ಯಾ!

ರಾಷ್ಟ್ರೀಯ ತಂಡದಲ್ಲಿ ಗೇಲ್ ಕಳಪೆ ಪ್ರದರ್ಶನ

ರಾಷ್ಟ್ರೀಯ ತಂಡದಲ್ಲಿ ಗೇಲ್ ಕಳಪೆ ಪ್ರದರ್ಶನ

2011ರ ಹರಾಜು ಪ್ರಕ್ರಿಯೆಯಲ್ಲಿ ಗೇಲ್ ಭಾಗಿಯಾಗಿದ್ದರಾದರೂ ಅನ್ ಸೋಲ್ಡ್ ಆಗಿ ಉಳಿದುಕೊಂಡಿದ್ದರು. ವೆಸ್ಟ್‌ ಇಂಡೀಸ್‌ಅನ್ನು ಪ್ರತಿನಿಧಿಸುವ ಗೇಲ್ ರಾಷ್ಟ್ರೀಯ ತಂಡದ ಪರವಾಗಿ ನಿರಂತರ ಕಳಪೆ ಪ್ರದರ್ಶನ ನೀಡುತ್ತಿದ್ದರು.ಹೀಗಾಗಿ ಐಪಿಎಲ್ ಪ್ರಾಂಚೈಸಿಗಳು ಗೇಲ್ ಅವರನ್ನು ನಿರ್ಲಕ್ಷಿಸಿದ್ದವು. ಆದರೆ 2011ರ ಟೂರ್ನಿಯ ಮಧ್ಯದಲ್ಲಿ ಗಾಯಗೊಂಡ ಆಟಗಾರನ ಬದಲಿಗೆ ಗೇಲ್ ಅವರನ್ನು ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಂಡು ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ.

ಕಿರಾನ್ ಪೊಲಾರ್ಡ್

ಕಿರಾನ್ ಪೊಲಾರ್ಡ್

ಕಿರಾನ್ ಪೊಲಾರ್ಡ್ ಸದ್ಯ ವೆಸ್ಟ್‌ ಇಂಡೀಸ್ ತಂಡದ ನಿಗದಿತ ಓವರ್‌ಗಳ ಫಾರ್ಮ್ಯಾಟ್‌ನ ನಾಯಕರಾಗಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಬಲ್ಲ ಸಾಮರ್ಥ್ಯ ಹೊಂದಿರುವ ಪೊಲಾರ್ಡ್ ಟಿ20ಗೆ ಸೂಕ್ತವಾದ ಆಟಗಾರ ಎನಿಸಿದ್ದಾರೆ. ಇಂತಾ ಆಟಗಾರ ಹರಾಜಾಗದೆ ಉಳಿದುಕೊಂಡಿದ್ದು 2009ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ.

ಪೊಲಾರ್ಡ್ ಸಾಮರ್ಥ್ಯದ ಅರಿವಿರಲಿಲ್ಲ

ಪೊಲಾರ್ಡ್ ಸಾಮರ್ಥ್ಯದ ಅರಿವಿರಲಿಲ್ಲ

ಆ ಸಂದರ್ಭದಲ್ಲಿ ಪೊಲಾರ್ಡ್‌ ಸಾಮರ್ಥ್ಯದ ಬಗ್ಗೆ ಯಾರಿಗೂ ಹೆಚ್ಚಿನ ಅರಿವಿರಲಿಲ್ಲ. ಹೀಗಾಗಿ ಪೊಲಾರ್ಡ್ ಅವರನ್ನು ಕೇಳುವವರೇ ಇರಲಿಲ್ಲ. ಆದರೆ ಅದೇ ವರ್ಷ ನಡೆದ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಮುಂದಿನ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪೊಲಾರ್ಡ್ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ವಿದೇಶದಲ್ಲಿ ಐಪಿಎಲ್ 2020

ವಿದೇಶದಲ್ಲಿ ಐಪಿಎಲ್ 2020

ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಲ್ಪಟ್ಟ ಐಪಿಎಲ್ ಟೂರ್ನಿಯನ್ನು ಟಿ20 ವಿಶ್ವಕಪ್ ಮುಂದೂಡಿರುವ ಕಾರಣ ಆ ಸಂದರ್ಭದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ ನವೆಂಬರ್ ತಿಂಗಳಿನಲ್ಲಿ ಯುಎಇನ ಮೂರು ಕ್ರೀಡಾಂಗಣದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ಆಯೋಜನೆಯಾಗಲಿದೆ. ಇದರ ಅಂತಿಮ ವೇಳಾಪಟ್ಟಿ ಇನ್ನಷ್ಟೇ ಹೊರಬೀಳಬೇಕಾಗಿದೆ.

Story first published: Tuesday, July 28, 2020, 19:26 [IST]
Other articles published on Jul 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+