ಐಪಿಎಲ್ ಆಟಗಾರರಿಗೆ ಇನ್ನೂ ಉದ್ದೀಪನ ಮದ್ದು ಪರೀಕ್ಷೆಗಳು ನಡೆದಿಲ್ಲ

ನವದೆಹಲಿ: ಪ್ರತೀ ಪ್ರಮುಖ ಕ್ರೀಡಾಕೂಟಗಳು ನಡೆದಾಗಲೂ ಅಲ್ಲಿ ಉದ್ದೀಪನ ಮದ್ದು ಪರೀಕ್ಷೆ ನಡೆಯಬೇಕು. ಇಲ್ಲದಿದ್ದರೆ ಗೆಲ್ಲುವ ತಂಡ, ಸೃಷ್ಠಿಯಾಗುವ ದಾಖಲೆಗಳ ಒಳಗೆಲ್ಲ ಸಣ್ಣ ಅನುಮಾನ ಉಳಿದುಬಿಡುತ್ತದೆ. ಆದರೆ ಭಾರತದ ನಗದು ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇನ್ನೂ ಉದ್ದೀಪನ ಮದ್ದು ಪರೀಕ್ಷೆಗಳು ನಡೆದಿಲ್ಲ.
ಈ ಬಾರಿಯ ಐಪಿಎಲ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ 19ರಂದೇ ಐಪಿಎಲ್ ಶುರುವಾಗಿದೆ. ಆದರೆ ಆಟಗಾರರಿಗೆ ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆಸಬೇಕಾದ ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ನಾಡಾ) ಅಧಿಕಾರಿಗಳು ಇನ್ನೂ ಯುಎಇ ತಲುಪಿಲ್ಲ.
ಉದ್ದೀಪನ ಪರೀಕ್ಷೆ ನಡೆಸುವುದಕ್ಕಾಗಿ ಯುಎಇಗೆ ತೆರಳಲು ನಾಡಾ ಅಧಿಕಾರಿಗಳಿಗೆ ಇನ್ನೂ ಸರ್ಕಾರದಿಂದ ಅನುಮತಿ ಲಭಿಸಿಲ್ಲ. ಸರ್ಕಾರದ ಅನುಮತಿ ದೊರೆತರೆ ಉದ್ದೀಪನಾ ನಿಗ್ರಹ ಅಧಿಕಾರಿಗಳಾಗಿ ನಾಡಾ ಅಧಿಕಾರಿಗಳು ಮರುಭೂಮಿಯ ದೇಶ ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ.
ಸೆಪ್ಟೆಂಬರ್ 19ರಿಂದ ಆರಂಭವಾಗಿರುವ ಐಪಿಎಲ್ ಪಂದ್ಯಗಳು ಯುಎಇಯ ಶಾರ್ಜಾ, ದುಬೈ ಮತ್ತು ಅದುಧಾಬಿ ತಾಣಗಳಲ್ಲಿ ನಡೆಯುತ್ತಿದೆ. ಒಟ್ಟು 22 ಪಂದ್ಯಗಳು ಈಗಾಗಲೇ ಮುಗಿದಿದ್ದು ಸದ್ಯದ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಅಗ್ರ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications