For Quick Alerts
ALLOW NOTIFICATIONS  
For Daily Alerts
 

ಕ್ವಾರಂಟೈನ್ ರ್‍ಯಾಪ್ ಸಾಂಗ್ ಹಾಡಿದ ಸುರೇಶ್ ರೈನಾ: ವೈರಲ್ ವೀಡಿಯೊ

IPL 2020: Suresh Raina impresses with quarantine rap song

ಅಬುಧಾಬಿ: ಮುಂದಿನ ತಿಂಗಳು ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಕಳೆದ ವಾರ ಎಂಟು ಫ್ರಾಂಚೈಸಿಗಳ ಆಟಗಾರರು ಮತ್ತು ಸಿಬ್ಬಂದಿ ಸದಸ್ಯರು ಯುನೈಟೆಡ್ ಅರಬ್ ಎಮಿರೇಟ್ಸ್‌ ತಲುಪಿದ್ದಾರೆ.

ಆಟಗಾರರು ಸದ್ಯ ಯುಎಇಯಲ್ಲಿ 6 ದಿನಗಳ ಕ್ವಾರಂಟೈನ್ ಪಾಲಿಸುತ್ತಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ ಭಾರತ ಆಲ್ ರೌಂಡರ್, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಸುರೇಶ್ ರೈನಾ ಕ್ವಾರಂಟೈನ್ ರ್‍ಯಾಪ್ ಸಾಂಗ್ ಮೂಲಕ ಗಮನ ಸೆಳೆದಿದ್ದಾರೆ.

ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ರೈನಾ ಈ ರ್‍ಯಾಪ್‌ ಸಾಂಗಿನ ವೀಡಿಯೋ ಹಾಕಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ, 'ಕ್ವಾರಂಟೈನ್‌ನಲ್ಲಿ ಏನು ಮಾಡೋದು? ವೀಡಿಯೊ ಚಿತ್ರೀಕರಿಸೋದು, ಎಲ್ಲರನ್ನೂ ರಂಜಿಸೋದು. ನಿಮ್ಮ ಆಯೋಚನೆಯನ್ನು ನನಗೆ ತಿಳಿಸಿ. ಆ ವೀಡಿಯೊ ಸಾಂಗ್ ಹೀಗಿದೆ,' ಎಂದು ಬರೆದುಕೊಳ್ಳಲಾಗಿದೆ.

ಅದರ ಕೆಳಗೆ, "Quarantine ho chahe 4 din, ya chahe ek poora week, Main hoon andar par nikalta bahar mera fitness freak. Workout aur Netflix se guzra poora din mera, Ab to Burj Khalifa kal se lagraha hai aur Bada..." ಎಂದು ರೈನಾ ಬರೆದುಕೊಂಡಿದ್ದಾರೆ. ಇದನ್ನೇ ರೈನಾ ವೀಡಿಯೊದಲ್ಲಿ ಹಾಡಿದ್ದಾರೆ.

Story first published: Wednesday, August 26, 2020, 20:46 [IST]
Other articles published on Aug 26, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+