Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈ ಸೂಪರ್ ಕಿಂಗ್ಸ್ ವಾಟ್ಸ್‌ಆಪ್ ಗ್ರೂಪ್‌ನಿಂದ ಸುರೇಶ್ ರೈನಾ ರಿಮೂವ್

IPL 2020: Suresh Raina removed from CSK’s WhatsApp group

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ ಪರ ಅತ್ಯಧಿಕ ರನ್ ಗಳಿಸಿರುವ ಸುರೇಶ್ ರೈನಾ ಅವರನ್ನು ಸಿಎಸ್‌ಕೆ ತನ್ನ ವಾಟ್ಸ್‌ಆಪ್ ಗ್ರೂಪಿನಿಂದ ರಿಮೂವ್ ಮಾಡಿದೆ. ಸಿಎಸ್‌ಕೆ ಮತ್ತು ರೈನಾ ನಡುವಿನ ಮನಸ್ತಾಪವೂ ಇದಕ್ಕೆ ಕಾರಣ ಎನ್ನಲಾಗಿದೆ.

ಕಳೆದ ವಾರದಿಂದಲೂ ಸಿಎಸ್‌ಕೆ ಮತ್ತು ಸುರೇಶ್ ರೈನಾ ಮಧ್ಯೆ ನಾಟಕೀಯ ಬೆಳವಣಿಗೆಗಳು ನಡೆಯುತ್ತಲೇ ಇವೆ. ಐಪಿಎಲ್‌ಗಾಗಿ ಯುಎಇಗೆ ಹೋಗಿದ್ದ ರೈನಾ, ಏಕಾಏಕಿ ಅಲ್ಲಿಂದ ಭಾರತಕ್ಕೆ ವಾಪಸ್ಸಾಗಿದ್ದರು. ವೈಯಕ್ತಿಕ ಕಾರಣದಿಂದ ತಾನು ಐಪಿಎಲ್‌ನಿಂದ ದೂರ ಉಳಿಯುತ್ತಿರುವುದಾಗಿ ರೈನಾ ಆಗ ಹೇಳಿಕೊಂಡಿದ್ದರು.

ಅದಾಗಿ ಕೆಲವೇ ದಿನಗಳ ಬಳಿಕ, ರೈನಾ ಭಾರತಕ್ಕೆ ವಾಪಸ್ಸಾಗಲು ಕಾರಣ ರೈನಾ ಕುಟುಂಬದಲ್ಲಿ ನಡೆದಿರುವ ದುರ್ಘಟನೆ ಎನ್ನಲಾಗಿತ್ತು. ಡಕಾಯಿತರ ದಾಳಿಗೆ ರೈನಾರ ಮಾವ-ಅತ್ತೆ ಬಲಿಯಾದ ಸಂಗತಿಯೂ ಬಹಿರಂಗಗೊಂಡಿತ್ತು. ಅದರ ಜೊತೆಗೆ ರೈನಾ ರೂಮ್ ವಿಚಾರದಲ್ಲಿ ಸಿಎಸ್‌ಕೆ ಜೊತೆಗೆ ಕ್ಯಾತೆ ತೆಗೆದಿದ್ದಾರೆ ಎಂಬ ಮಾತುಗಳೂ ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿತ್ತು.

'ಒಮ್ಮೆ ರೈನಾ ತಂಡ ತೊರೆದಾಗ ಅವರನ್ನು ತಂಡದ ವಾಟ್ಸ್‌ಆಪ್ ಗ್ರೂಪ್‌ನಿಂದ ತೆಗೆದು ಹಾಕಲಾಗಿತ್ತು. ಈಗ ಅವರು ಸಿಎಸ್‌ಕೆ ಸಿಇಒ, ಎಂಎಸ್ ಧೋನಿ ಮತ್ತು ಕೋಚ್ ಫ್ಲೆಮಿಂಗ್ ಸೇರಿದಂತೆ ಟೀಮ್ ಮ್ಯಾನೇಜ್ಮೆಂಟನ್ನು ಸಂಪರ್ಕಿಸಿದ್ದಾರೆ; ತಂಡಕ್ಕೆ ವಾಪಸ್ಸಾಗಲು ಎದುರು ನೋಡುತ್ತಿದ್ದಾರೆ,' ಎಂದು ಸಿಎಸ್‌ಕೆ ಹೇಳಿರುವುದಾಗಿ ಇನ್‌ಸೈಡ್ ಸ್ಪೋರ್ಟ್‌ ವರದಿ ಮಾಡಿದೆ.

Story first published: Friday, September 4, 2020, 9:56 [IST]
Other articles published on Sep 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+