ಟೀಮ್ ಇಂಡಿಯಾಗೆ ಆಯ್ಕೆಯಾಗದ್ದಕ್ಕೆ ಸೂರ್ಯಕುಮಾರ್ ಅಸಮಾಧಾನಗೊಂಡಿದ್ದಾರೆ: ಕಿರಾನ್ ಪೊಲಾರ್ಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್‌ಗಳ ಭರ್ಜರಿ ಜಯವನ್ನು ದಾಖಲಿಸಿದೆ. ಈ ಗೆಲುವಿನಲ್ಲಿ ಮುಂಬೈ ತಂಡದ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಪಾತ್ರ ದೊಡ್ಡದಿತ್ತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಆರ್‌ಸಿಬಿ ವಿರುದ್ಧದವೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಈ ಅದ್ಭುತ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಪ್ರತಿಕ್ರಿಯಿಸಿದ್ದಾರೆ.
ಮುಂಬೈ ಇಂಡಿಯನ್ಸ್ ನಾಯಕ ಕಿರಾನ್ ಪೊಲಾರ್ಡ್ ಪಂದ್ಯದ ಬಳಿಕದ ಸಮಾರಂಭದಲ್ಲಿ ಸೂರ್ಯಕುಮಾರ್ ಯಾದವ್ ಬಗ್ಗೆ ಪ್ರತಿಕ್ರಿಯತಿಸಿದರು. ಟೀಮ್ ಇಂಡಿಯಾಗೆ ಆಯ್ಕೆಯಾಗದಿರುವ ಬಗ್ಗೆ ಸೂರ್ಯಕುಮಾರ್ ಯಾದವ್ ಅಸಮಾಧಾನಗೊಂಡಿದ್ದಾರೆ ಎಂದು ಕಿರಾನ್ ಪೊಲಾರ್ಡ್ ಹೇಳಿದ್ದಾರೆ.
ನಾವು ಆರಂಭದಲ್ಲಿ ಕೆಲ ವಿಕೆಟ್‌ಗಳನ್ನು ಕಳೆದುಕೊಂಡೆವು. ಆದರೆ ಸೂರ್ಯ ಪಂದ್ಯವನ್ನು ನಮ್ಮತ್ತ ಎಳೆದು ತಂದರು. ಆ ಕ್ರಮಾಂಕದಲ್ಲಿ ಕಣಕ್ಕಿಳಿದು ವಿಕೆಟ್ ಉರುಳಿತ್ತಿದ್ದರೂ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಲ್ಲ. ಅದರೆ ಸೂರ್ಯಕುಮಾರ್ ಯಾದವ್ ನಮ್ಮ ತಂಡಕ್ಕಾಗಿ ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಪೊಲಾರ್ಡ್ ಹೇಳಿದ್ದಾರೆ.
"ತಂಡ ಏನನ್ನು ಬಯಸುತ್ತದೇ ಅದನ್ನು ಮಾಡಲು ನಾನು ಯಾವಾಗಲೂ ಸಿದ್ದನಿದ್ದೇನೆ. ತಂಡ ಅದ್ಭುತ ಪ್ರದರ್ಶನ ನೀಡಿದರೆ ನಾನು ಸಂತಸ ಪಡುತ್ತೇನೆ. ಆದರೆ ನನ್ನ ಮನಸು ಹೇಳುತ್ತಿದೆ, ಭಾರತ ತಂಡಕ್ಕೆ ಸೂರ್ಯ ಕುಮಾರ್ ಆಯ್ಕೆಯಾಗದಿರುವುದಕ್ಕೆ ಅವರು ತುಂಬಾ ಅಸಮಾಧಾನಗೊಂದಿದ್ದಾರೆ" ಎಂದು ಪೊಲಾರ್ಡ್ ಹೇಳಿದರು.
ಮುಂಬೈ ಇಂಡಿಯನ್ಸ್ ಅಕ್ಟೋಬರ್ 31ರ ಶನಿವಾರ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದು ನಂಬರ್ 1 ತಂಡವಾಗಿ ಪ್ಲೇ ಆಫ್ ಹಂತಕ್ಕೇರಲು ಮುಂಬೈ ಉತ್ಸುಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications