For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್-ಕೊಹ್ಲಿ ಸಿಡುಕಿನ ಬಳಿಕ ಏನಾಯ್ತು?!: ಯಾದವ್ ವಿವರಣೆ

IPL 2020: Suryakumar Yadav Reveals What Virat Kohli Told Him After Controversial Staredown Episode

ನವದೆಹಲಿ: ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಮಧ್ಯೆ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ವೇಳೆ ಬಿಗುವಿನ ವಾತಾವರಣ ಉಂಟಾಗಿತ್ತು. ಆ ಬಳಿಕ ಏನಾಯ್ತು ಅನ್ನೋದನ್ನು ಸೂರ್ಯಕುಮಾರ್ ಬಾಯ್ಬಿಟ್ಟಿದ್ದಾರೆ.

ಕೊಹ್ಲಿ ಮತ್ತು ಸೂರ್ಯಕುಮಾರ್ ಮುಖಾಮುಖಿಯಾಗಿದ್ದು ಅಬುಧಾಬಿಯಲ್ಲಿ ಅಕ್ಟೋಬರ್ 28ರಂದು ನಡೆದಿದ್ದ ಐಪಿಎಲ್ 48ನೇ ಪಂದ್ಯದಲ್ಲಿ. ಮುಂಬೈ ಇನ್ನಿಂಗ್ಸ್‌ನಲ್ಲಿ ಸೂರ್ಯಕುಮಾರ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕೊಹ್ಲಿ, ಯಾದವ್ ಅವರನ್ನು ಗುರಾಯಿಸಿದ್ದರು. ಇದಕ್ಕೆ ಯಾದವ್ ಮುಖದಲ್ಲೂ ಸಿಟ್ಟು ಕಾಣಿಸಿಕೊಂಡಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.

ಕೊಹ್ಲಿ ಕೆಣಕಿದ್ದರ ಪರಿಣಾಮ ಆವತ್ತು ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. 43 ಎಸೆತಗಳಲ್ಲಿ 79 ರನ್ ಬಾರಿಸಿದ್ದರು. ಅಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 5 ವಿಕೆಟ್ ಗೆಲುವಾಚರಿಸಿತ್ತಲ್ಲದೆ ಸೂರ್ಯಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಆವತ್ತಿನ ಪಂದ್ಯ ಮುಗಿದ ಮೇಲೆ ಏನಾಯ್ತು ಅನ್ನೋದನ್ನು ಯಾದವ್ ಹೇಳಿಕೊಂಡಿದ್ದಾರೆ.

'ಪಂದ್ಯದ ಬಳಿಕ ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಬಂದಿದ್ದೆವು. ನನ್ನ ಬಳಿ ಬಂದ ಕೊಹ್ಲಿ, 'ಚೆನ್ನಾಗಿ ಆಡಿದ್ದೀ. ಒಳ್ಳೆಯ ಹೊಡೆತಗಳು' ಎಂದು ಹೇಳಿದರಲ್ಲದೆ, ನಾನು 60-65 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ನಿಂತಿದ್ದನ್ನು ಎಂಜಾಯ್ ಮಾಡಿದ್ದಾಗಿ ಮತ್ತು ಆ ವೇಳೆ ತಾನು ತುಂಬಾ ಒತ್ತಡದಲ್ಲಿ ಇದ್ದಿದ್ದಾಗಿ ತಿಳಿಸಿದರು,' ಎಂದು ಸ್ಪೋರ್ಟ್ಸ್ ಟಾಕ್‌ನಲ್ಲಿ ಮಾತನಾಡಿದ ಯಾದವ್ ಹೇಳಿದ್ದಾರೆ.

Story first published: Saturday, November 21, 2020, 13:54 [IST]
Other articles published on Nov 21, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+