ಐಪಿಎಲ್‌ನಲ್ಲಿ ಚೇಸಿಂಗ್ ಯಾಕೆ ಸುಲಭವಾಗುತ್ತಿದೆ?: ರಹಸ್ಯ ಬೇಧಿಸಿದ ಸಚಿನ್ ತೆಂಡೂಲ್ಕರ್

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಅಂತಿಮ ಹಂತಕ್ಕೆ ಬಂದು ತಲುಪಿದೆ. ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳು ಮಾತ್ರವೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಯುಎಇನಲ್ಲಿ ರನ್ ಬೆನ್ನಟ್ಟುವ ತಂಡ ಸುಲಭವಾಗಿ ಗೆಲುವು ಕಾಣುತ್ತಿರುವ ಹಿಂದಿನ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಿಕ ಹಂತದಲ್ಲಿ ಇದಕ್ಕೆ ವಿರುದ್ಧವಾದ ಸ್ಥಿತಿಯಿತ್ತು. ಎಲ್ಲಾ ತಂಡಗಳು ಕೂಡ ಮೊದಲಿಗೆ ಬ್ಯಾಟಿಂಗ್ ಮಾಡಲು ಬಯಸುತ್ತಿದ್ದವು. ಅದರೆ ಬಳಿಕ ಪರಿಸ್ಥಿತಿ ಬದಲಾಗಳು ಆರಂಭಿಸಿತ್ತು. ಅಂಗಳದ ಆಯಾಮ ಹಾಗೂ ಪರಿಸ್ಥಿತಿಯನ್ನು ಮೀರಿ ಎಲ್ಲ ತಂಡಗಳು ರನ್ ಬೆನ್ನಟ್ಟುವುದನ್ನು ಆಯ್ಕೆ ಮಾಡಲು ಆರಂಭಿಸಿತ್ತು ಇದರಲ್ಲೇ ಯಶಸ್ಸು ಪಡೆಯಲು ಶುರುವಾಗಿತ್ತು.

ಹವಾಮಾನದಲ್ಲಿ ಬದಲಾವಣೆಯೇ ಕಾರಣ
ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ ಸಚಿನ್ ತೆಂಡೂಲ್ಕರ್. ಯುಎಇನ ಹವಾಮಾನದಲ್ಲಿ ಬದಲಾವಣೆಯಾಗುತ್ತಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಟೂರ್ನಮೆಂಟ್ ಆರಂಭವಾದ ಸಂದರ್ಭದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್‌ನ ಉಷ್ಣಾಂಶ ಕಡೆಯಾಗುತ್ತಿತ್ತು.

ಏಳೆಂಟು ದಿನಗಳಿಂದ ಬದಲಾವಣೆ
"ನೀವು ಗಮನಿಸಿರಬಹುದು, ಮೊದಲಾರ್ಧದಲ್ಲಿ ಚೇಸ್ ಮಾಡುವ ತಂಡಗಳು ವಿಶೇಷವಾಗಿ ದುಬೈ ಹಾಗೂ ಅಬುಧಾಬಿಯಲ್ಲಿ ರನ್ ಬೆನ್ನಟ್ಟುವಾಗ ವಿಫಲವಾಗುತ್ತಿತ್ತು. ಆದರೆ ಕಳೆದ ಏಳೆಂಟು ದಿನಗಳಿಂದ ನಿರಂತರವಾಗಿ ತಂಡಗಳು ರನ್ ಬೆನ್ನಟ್ಟುವುದನ್ನು ಬಯಸುತ್ತಿದೆ" ಎಂದು ತೆಂಡೂಲ್ಕರ್ ವಿವರಿಸಿದ್ದಾರೆ.

ಸೂರ್ಯಾಸ್ತದಲ್ಲಿ ಬದಲಾವಣೆ
ಈಗ ಸೂರ್ಯಾಸ್ತದಲ್ಲಿ ಬಲಾವಣೆಯಾಗಿದ್ದು ಸೂರ್ಯ ಬೇಗನೆ ಅಸ್ತಮಿಸುತ್ತಿದ್ದಾನೆ. ಹೀಗಾಗಿ ಟೂರ್ನಿಯಲ್ಲಿ ಮೊದಲಾರ್ಧದಲ್ಲಿ ದೊರೆಯದ ಸಹಾಯ ಬೌಲರ್‌ಗಳಿಗೆ ಈಗ ದೊರೆಯುತ್ತಿದೆ. ಮೊದಲು ಚೆಂಡನ್ನು ಬಾರಿಸಲು ಸುಲಭವಾಗಿ ಸಾಧ್ಯವಾಗುತ್ತಿತ್ತು. ತಾಪಮಾನ ತಂಪಾಗಿದ್ದು ಉತ್ತಮವಾಗಿರುವುದರಿಂದ ಪಿಚ್ ಮೇಲ್ಮೈ ಚಲನೆಯಿಂದ ಈಗ ಅದು ಸಾಧ್ಯವಾಗುತ್ತಿಲ್ಲ" ಎಂದು ಸಚಿನ್ ತೆಂಡೂಲ್ಕರ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ಪ್ಲೇಆಫ್‌ಗೆ ಚಾಲನೆ
ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇಆಫ್‌ಗೆ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಮುಂಬೈ ಹಾಗೂ ಡೆಲ್ಲಿ ಸೆಣೆಸಾಟ ನಡೆಸಲಿದ್ದು ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications