
ಐಪಿಎಲ್‌ನ 13ನೇ ಆವೃತ್ತಿಯ 30ನೇ ಪಂದ್ಯದಲ್ಲಿ ಮುಂಬೈ ಮಧ್ಯಮ ವೇಗಿ ತುಷಾರ್ ದೇಶಪಾಂಡೆ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಮಧ್ಯಮ ವೇಗಿ ಐಪಿಎಲ್ ಕ್ಯಾಪ್ ಪಡೆದಿದ್ದು, ಹರ್ಷಲ್ ಪಟೇಲ್ ಬದಲು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಫ್ರ್ಯಾಂಚೈಸಿ ದೇಶಪಾಂಡೆಯನ್ನು ಐಪಿಎಲ್ 2020ರ ಹರಾಜು ಪ್ರಕ್ರಿಯೆಯಲ್ಲಿ 20 ಲಕ್ಷ ರೂಪಾಯಿಗಳಿಗೆ ಹರಾಜಿನಲ್ಲಿ ಖರೀದಿಸಿತ್ತು. 25 ವರ್ಷದ ಹರ್ಷಲ್ ಪಟೇಲ್ ಮುಂಬೈ ಇಂಡಿಯನ್ಸ್ ವಿರುದ್ಧ ಸ್ವಲ್ಪ ದುಬಾರಿ ಎಂದು ಸಾಬೀತಾದ ಹಿನ್ನೆಲೆ, ಮುಂಬೈ ಆಟಗಾರನಿಗೆ ಅವಕಾಶ ನೀಡಲಾಗಿದೆ.
ಮುಂಬೈ ಪರ 20 ಟೆಸ್ಟ್ ಪಂದ್ಯಗಳಿಂದ 50 ವಿಕೆಟ್ ಪಡೆದ ದೇಶಪಾಂಡೆ, ಕೋವಿಡ್ -19 ಕ್ವಾರಂಟೈನ್ ವಿರಾಮದಿಂದ ಬಂದ ಬಳಿಕ ಐಒಸಿಸಿ ಅಕಾಡೆಮಿಯಲ್ಲಿ ನೆಟ್ಸ್ ಸೆಷನ್‌ನ ಭಾಗಿಯಾಗಿದ್ದರು. ಪಂದ್ಯ ಆರಂಭಕ್ಕೂ ಮುನ್ನ ತುಷಾರ್ ತಮ್ಮ ಸಂತೋಷ ವ್ಯಕ್ತಪಡಿಸಿದರು.
"ಇದು ನನ್ನ ಮೊದಲ ಐಪಿಎಲ್ ಆದ್ದರಿಂದ ಇದು ಯಾವಾಗಲೂ ವಿಶೇಷವಾಗಿದೆ. ಆದರೆ ನನಗೆ, ಇದು ವಿಶೇಷವಾದ ಸಂಗತಿಯೆಂದರೆ, ನಾನು ಹೆಚ್ಚು ಇಷ್ಟಪಡುವ ಕೆಲಸವನ್ನು ನಾನು ಪಡೆಯುತ್ತಿದ್ದೇನೆ, ಅದು ಬೌಲಿಂಗ್ ಆಗಿದೆ. ನಾನು ಸುಮಾರು ಆರು ತಿಂಗಳ ನಂತರ ಅಂತಿಮವಾಗಿ ಬೌಲಿಂಗ್ ಮಾಡುತ್ತಿದ್ದೇನೆ ಆದ್ದರಿಂದ ಇದು ವಿಭಿನ್ನ ಸವಾಲಾಗಿದೆ, "ಎಂದು ಅವರು ಹೇಳಿದರು.
"ಇಲ್ಲಿರುವ ಎಲ್ಲ ಬೌಲರ್‌ಗಳು ಮೊದಲಿನ ಐಪಿಎಲ್ ಅನುಭವ ಹೊಂದಿರುವ ನನ್ನ ಹಿರಿಯರು. ಇಶಾಂತ್ [ಶರ್ಮಾ] ಮತ್ತು [ಕಗಿಸೊ] ರಬಾಡ ಅವರಂತಹವರು ನನ್ನಂತಹ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವವರಿಗೆ ಸಹಾಯ ಮಾಡುತ್ತಾರೆ "ಎಂದು ದೇಶಪಾಂಡೆ ಈ ಹಿಂದೆ ಹೇಳಿಕೆ ನೀಡಿದ್ದರು.
ಕೂಚ್ ಬೆಹರ್ ಟ್ರೋಫಿಯಲ್ಲಿ ಪಂದ್ಯ ಗೆಲ್ಲುವ ಪ್ರದರ್ಶನ ತೋರಿದ್ದ ದೇಶಪಾಂಡೆ ಅವರು 2016-17ರ ಕ್ರೀಡಾ ಋತುವಿನಲ್ಲಿ ಮೊದಲ ರಣಜಿ ಟ್ರೋಫಿಯಲ್ಲಿ ಸ್ಥಾನ ಪಡೆದಿದ್ದರು.