ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಕೊಹ್ಲಿ 85 ರನ್ ಸಿಡಿಸಿದ್ರೆ, ಈ ಹೊಸ ದಾಖಲೆಯನ್ನೇ ಸೃಷ್ಟಿಸಲಿದ್ದಾನೆ

ಇಂದು ಎರಡು ಪವರ್‌ಹೌಸ್ ತಂಡಗಳು ಮುಖಾಮುಖಿಯಾಗ್ತಿವೆ. ಒಂದು ಕಡೆ ನಾಲ್ಕು ಬಾರಿ ಐಪಿಎಲ್ ಕಪ್ ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್, ಮತ್ತೊಂದೆಡೆ ಚೊಚ್ಚಲ ಕಪ್‌ಗಾಗಿ ಜಾತಕ ಪಕ್ಷಿಯಂತೆ ಕಾಯ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ).
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಐಪಿಎಲ್ ತಂಡಗಳ ಮುಖಾಮುಖಿ ಸಾಕಷ್ಟು ರೋಚಕತೆಗೆ ಕಾರಣವಾಗಿದೆ. ಇದರ ನಡುವೆ ಆರ್‌ಸಿಬಿ ಪರ ವಿರಾಟ್ ಕೊಹ್ಲಿ 85 ರನ್ ಸಿಡಿಸಿದ್ರೆ ಹೊಸ ದಾಖಲೆಯನ್ನೇ ಸೃಷ್ಟಿಸಲಿದ್ದಾನೆ.
ಹೌದು, ಇನ್ನು 85 ರನ್ ಗಳಿಸಿದರೆ ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಕೊಹ್ಲಿ ಬರೆಯಲಿದ್ದಾನೆ. ಸದ್ಯ ಕೊಹ್ಲಿ 283 ಪಂದ್ಯಗಳಿಂದ 8,915 ರನ್ ಗಳಿಸಿದ್ದಾರೆ.
ವಿಶ್ವಕ್ರಿಕೆಟ್ ನಲ್ಲಿ ಇದುವರೆಗೆ ಆರು ಮಂದಿ ಆಟಗಾರರು ಟಿ20 ಕ್ರಿಕೆಟ್ ನಲ್ಲಿ 9000 ರನ್ ಗಳಿಸಿದ್ದಾರೆ. ಅವರು ಯಾರು ಮತ್ತು ಎಷ್ಟು ರನ್‌ಗಳಿಸಿದ್ದಾರೆ ಎನ್ನುವುದನ್ನ ನೀವು ಈ ಕೆಳಗೆ ನೋಡಬಹುದು.
| ಆಟಗಾರ | ರನ್ |
| ಕ್ರಿಸ್‌ಗೇಲ್ | 13,296 |
| ಕಿರಾನ್ ಪೊಲಾರ್ಡ್ | 10,238 |
| ಬ್ರೆಂಡನ್ ಮೆಕಲಮ್ | 9,922 |
| ಶೋಯೆಬ್ ಮಲಿಕ್ | 9,906 |
| ಡೇವಿಡ್ ವಾರ್ನರ್ | 9,008 |
| ಆ್ಯರೋನ್ ಫಿಂಚ್ | 9,088 |
Story first published: Monday, September 28, 2020, 18:04 [IST]
Other articles published on Sep 28, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications