ವಿರಾಟ್ ಕೊಹ್ಲಿ ದಾಖಲೆ: ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ವಿಶೇಷವಾದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಯ ಸರದಾರನಾಗಿರುವ ಕಿಂಗ್ ಕೊಹ್ಲಿ ಐಪಿಎಲ್‌ನಲ್ಲೂ ಭಾರತದ ಪರ ವಿಶೇಷ ದಾಖಲೆ ಹೊಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 10 ರನ್ ದಾಖಲಿಸುತ್ತಿದ್ದಂತೆ ವಿರಾಟ್ ಹೊಸ ದಾಖಲೆಗೆ ಸಾಕ್ಷಿಯಾದ್ರು. ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಕೊಹ್ಲಿ ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. 286 ಪಂದ್ಯಗಳಲ್ಲಿ ವಿರಾಟ್ 9000 ರನ್ ದಾಖಲಿಸಿದ್ದಾರೆ.
ಈ ಪಂದ್ಯಕ್ಕೂ ಮೊದಲು ವಿರಾಟ್ ಈ ಮೈಲಿಗಲ್ಲನ್ನು ಸಾಧಿಸಲು 10 ರನ್‌ಗಳ ಅವಶ್ಯಕತೆ ಇತ್ತು. ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಜೇಯ 72ರನ್‌ಗಳಿಸಿದ್ದ ವಿರಾಟ್ ಈ ಸಾಧನೆಯನ್ನು ಪೂರೈಸಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲನೇ ಮತ್ತು ವಿಶ್ವದ ಏಳನೇ ಕ್ರಿಕೆಟಿಗನಾಗಿದ್ದಾನೆ.
ವಿಶ್ವಕ್ರಿಕೆಟ್ ನಲ್ಲಿ ಇದುವರೆಗೆ ವಿರಾಟ್‌ಗೂ ಮೊದಲು ಆರು ಮಂದಿ ಆಟಗಾರರು ಟಿ20 ಕ್ರಿಕೆಟ್ ನಲ್ಲಿ 9000 ರನ್ ಗಳಿಸಿದ್ದಾರೆ. ಅವರು ಯಾರು ಎನ್ನುವುದನ್ನ ನೀವು ಈ ಕೆಳಗೆ ನೋಡಬಹುದು.
ಆಟಗಾರರ ಹೆಸರು
ಕ್ರಿಸ್‌ಗೇಲ್
ಕಿರಾನ್ ಪೊಲಾರ್ಡ್
ಬ್ರೆಂಡನ್ ಮೆಕಲಮ್
ಶೋಯೆಬ್ ಮಲಿಕ್
ಡೇವಿಡ್ ವಾರ್ನರ್
ಆ್ಯರೋನ್ ಫಿಂಚ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications