ರೈನಾ ಸ್ಥಾನಕ್ಕೆ ನಂಬರ್ 1 ಬ್ಯಾಟ್ಸ್‌ಮನ್‌ನನ್ನು ಸೇರ್ಪಡೆಗೊಳಿಸಿತಾ ಸಿಎಸ್‌ಕೆ?: ಸಿಇಒ ಸ್ಪಷ್ಟನೆ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಅನುಭವಿ ಆಟಗಾರರು ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದಾರೆ. ಸುರೇಶ್ ರೈನಾ ಹಠಾತ್ ಆಗಿ ಭಾರತಕ್ಕೆ ವಾಪಾಸ್ ಮರಳಿದ್ದು ಈ ಬಾರಿಯ ಟೂರ್ನಿಗೆ ಸಂಪೂರ್ಣವಾಗಿ ಅಲಭ್ಯ ಎಂಬ ವಿಚಾರವನ್ನು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಮತ್ತೊಂದೆಡೆ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಈ ಬಾರಿಯ ಟೂರ್ನಿಗೆ ಅಲಭ್ಯರಾಗುತ್ತಿರುವ ಸಂಗತಿಯನ್ನು ತಿಳಿಸಿದ್ದರು. ಹೀಗಾಗಿ ಈ ಇಬ್ಬರು ಆಟಗಾರರ ಬದಲಿಗೆ ಯಾರನ್ನು ಚೆನ್ನೈ ಆಯ್ಕೆ ಮಾಡಿಕೊಳ್ಳುತ್ತೆ ಎಂಬುದು ಕುತೂಹಲ ಮೂಡಿಸಿದೆ.
ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಸದ್ಯ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಅವರನ್ನು ರೈನಾ ಸ್ಥಾನಕ್ಕೆ ಸೇರ್ಪಡೆಗೊಳಿಸಿದೆ ಎಂಬ ಸುದ್ದಿ ಇಂದು ಹಬ್ಬಿತ್ತು. ಸಿಎಸ್‌ಕೆ ಫ್ರಾಂಚೈಸಿಯಿಂದ ಈ ಬಗ್ಗೆ ಖಚಿತವಾದ ಮಾಹಿತಿ ಬಾರದಿದ್ದರೂ ಇದು ನಿಜ ಎನ್ನುವಂತಾ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೀಗ ಈ ಸುದ್ದಿಯ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಸಿ ವಿಶ್ವನಾಥನ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಸಿಎಸ್‌ಕೆ ತಂಡ ಈಗಲೂ ಬಲಿಷ್ಠ
ಇಬ್ಬರು ಪ್ರಮುಖ ಆಟಗಾರರು ಈ ಬಾರಿಯ ಐಪಿಎಲ್‌ನಿಂದ ಹಿಂದಕ್ಕೆ ಸರಿದಿರುವುದು ಚೆನ್ನೈ ಪಾಲಿಗೆ ಹಿನ್ನೆಡೆಯಾಗಿದೆ. ಆದರೆ ಚೆನ್ನೈ ತಂಡ ಈಗಲೂ ಕೂಡ ಇತರ ತಂಡಗಳಂತೆಯೇ ಸಾಕಷ್ಟು ಬಲಾಢ್ಯ ಆಟಗಾರರನ್ನು ಹೊಂದಿದೆ. ಕೊರೊನಾ ಪಾಸಿಟಿವ್ ಬಂದಿದ್ದ ದೀಪಕ್ ಚಾಹರ್ ಎರಡು ವರದಿಗಳು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರು ಕೂಡ ಈಗ ತಂಡವನ್ನು ಕೂಡಿಕೊಂಡಿದ್ದು ಚೆನ್ನೈ ತಂಡ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.

ಬದಲಿ ಆಟಗಾರರ ಬಗ್ಗೆ ಸಿಎಸ್‌ಕೆ ಸಿಇಒ ಪ್ರತಿಕ್ರಿಯೆ
ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಸ್ಥಾನಕ್ಕೆ ಬದಲಿ ಆಟಗಾರರನ್ನು ಸೇರ್ಪಡೆಗೊಳಿಸುವ ವಿಚಾರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ವಿಶ್ವನಾಥನ್ ಇಂಡಿಯಾ ಟುಡೇ ಜೊತೆಗೆ ಮಾತನಾಡುತ್ತಾ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಕ್ಷಣದವರೆಗೂ ಸಿಎಸ್‌ಕೆ ತಂಡಕ್ಕೆ ಬದಲಿ ಆಟಗಾರರನ್ನು ಸೇರ್ಪಡೆಗೊಳಿಸುವ ಆತುರವಿಲ್ಲ ಎಂಬ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಡೇವಿಡ್ ಮಲನ್ ಸಿಎಸ್‌ಕೆಗೆ?
ಸುರೇಶ್ ರೈನಾ ಸಿಎಸ್‌ಕೆ ತಂಡದ ಬ್ಯಾಟಿಂಗ್ ಆಧಾರ ಸ್ಥಂಬ. ಅವರ ಸ್ಥಾನಕ್ಕೆ ಬಲಿಷ್ಠ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂಬುದು ಚೆನ್ನೈ ಅಭಿಮಾನಿಗಳ ನಿರೀಕ್ಷೆಯಾಗಿದೆ. ಈ ಬೆನ್ನಲ್ಲೇ ಇಂಗ್ಲೆಂಡ್‌ನ ಡೇವಿಡ್ ಮಲನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರ್ಪಡೆಗೊಂಡೇಬಿಟ್ಟರು ಎಂಬುವಷ್ಟು ಸುದ್ದಿಗಳು ಕೂಡ ಹರಿದಾಡಿದೆ. ಆದರೆ ಈ ಬಗ್ಗೆ ಸಿಎಸ್‌ಕೆ ತಂಡ ಚಿಂತನೆ ನಡೆಸಿಲ್ಲ ಎಂಬುದು ವಿಶ್ವನಾಥನ್ ಮಾತುಗಳಲ್ಲಿ ಸ್ಪಷ್ಟವಾಗಿದೆ.

ಮಲನ್ ಸೇರ್ಪಡೆ ಬಗ್ಗೆ ಚೆನ್ನೈ ಸಿಇಒ ಮಾತು
ಡೇವಿಡ್ ಮಲನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರ್ಪಡೆಗೊಳಿಸುವ ವಿಚಾರವಾಗಿ ವಿಶ್ವನಾಥನ್ ಮಾತನಾಡಿ "ಸಿಎಸ್‌ಕೆ ತಂಡ ಸಮರ್ಥ ಬದಲಿ ಆಟಗಾರನ ಆಯ್ಕೆಗಾಗಿ ವಿದೇಶಿ ಆಟಗಾರನ್ನು ಸೇರ್ಪಡೆಗೊಳಿಸುವತ್ತ ಚಿತ್ತ ಹರಿಸಿಲ್ಲ. ಚೆನ್ನೈ ತಂಡದಲ್ಲಿ 8 ವಿದೇಶಿ ಆಟಗಾರಿದ್ದು ಗರಿಷ್ಠ ಮಿತಿಯಲ್ಲಿದೆ ಎಂದಿದ್ದಾರೆ.

ರೈನಾ ಬದಲಿ ಆಟಗಾರನ ಬಗ್ಗೆ ವಾಟ್ಸನ್ ಸುಳಿವು
ಸಿಎಸ್‌ಕೆ ತಂಡದ ಪ್ರಮುಖ ಆಟಗಾರ ಶೇನ್ ವಾಟ್ಸನ್ ಸುರೇಶ್ ರೈನಾ ಅಲಭ್ಯತೆಯ ಬಗ್ಗೆ ಮಾತನಾಡುತ್ತಾ ರೈನಾ ಬದಲಿ ಆಟಗಾರ ಬಗ್ಗೆ ಸುಳಿವನ್ನು ನೀಡಿದ್ದರು. ಶೇನ್ ವಾಟ್ಸನ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಸಿಎಸ್‌ಕೆ ತಂಡದಲ್ಲಿ ಮುರಳಿ ವಿಜಯ್ ಅವಕಾಶವನ್ನು ಪಡೆಯುವ ಸಾಧ್ಯತೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ತಂಡದ ಮ್ಯಾನೇಜ್‌ಮೆಂಟ್ ಯೋಚನೆಯೂ ಇದೇ ಆಗಿರುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications