
ಈ ಬಾರಿಯ ಪ್ಲೇಆಪ್ ಹಂತದಲ್ಲಿ ಆರ್‌ಸಿಬಿ ತಂಡ ಹೊರ ಬಿದ್ದಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯವನ್ನು 5 ವಿಕೆಟ್‌ಗಳಿಂದ ಕಲೆದುಕೊಲ್ಳುವ ಮೂಲಕ ಈ ಬಾರಿಯ ಟೂರ್ನಿಯನ್ನು ಕೊನೆಗೊಳಿಸಿತು. ಅದಾದ ಬಳಿಕ ಆರ್‌ಸಿಬಿ ಮುಖ್ಯ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಟ್ವಿಟ್ಟರ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಇದಕ್ಕೆ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಯುಜುವೇಂದ್ರ ಚಾಹಲ್ ಹಾಕಿದ ಫೋಟೋಗೆ ತಮಾಷೆಯಾಗಿ ಕಾಲೆಳೆದಿದ್ದಾರೆ. ಫೈನಲ್ ಪಂದ್ಯವನ್ನು ಎಲ್ಲಿ ನೋಡುತ್ತೀರ ಎಂದು ಪ್ರಶ್ನಿಸುತ್ತಾ ಯುವರಾಜ್ ಸಿಂಗ್ ಚಾಹಲ್ ಅವರನ್ನು ಆಡಿಕೊಂಡಿದ್ದಾರೆ.
ಯುಜುವೇಂದ್ರ ಚಾಹಲ್ ಸೂರ್ಯಾಸ್ತದ ಫೋಟೋವೊಂದನ್ನು ಹಂಚಿಕೊಂಡಿದ್ದರು. ಇದಕ್ಕೆ "ಭವ್ಯವಾದ ಸೂರ್ಯಾಸ್ತ. ನನ್ನ ಹೊಚ್ಚ ಹೊಸ ಗೊ ಪ್ರೊ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ" ಎಂದು ಚಾಹಲ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
ಈ ಟ್ವೀಟನ್ನು ಬಳಸಿಕೊಂಡು ಯುವರಾಜ್ ಸಿಂಗ್ ಚಾಹಲ್‌ಗೆ ಕೀಟಲೆ ಮಾಡಿದ್ದಾರೆ. "ನೀವು ಫೈನಲ್ ಪಂದ್ಯವನ್ನು 'ಗೊ ಪ್ರೊ'ದಲ್ಲಿ ವೀಕ್ಷಿಸುತ್ತೀರಾ ಅಥವಾ ಸ್ಟೇಡಿಯಮ್‌ನಲ್ಲಿ ವೀಕ್ಷಿಸುತ್ತೀರಾ?" ಎಂದು ಕೀಟಲೆಯ ಎಮೋಜಿಯನ್ನು ಬಳಸಿ ಕಾಲೆಳೆದಿದ್ದಾರೆ. ಇದಕ್ಕ ಅಭಿಮಾನಿಗಳು ಕೂಡ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಚಾಹಲ್ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. 15 ಪಂದ್ಯಗಳನ್ನಾಡಿದ ಚಾಹಲ್ ಸ್ಪಿನ್ನರ್‌ಗಳಲ್ಲಿ ಅತಿ ಹೆಚ್ಚಿನ ವಿಕೆಟ್ ಕಿತ್ತವರಾಗಿದ್ದಾರೆ. 7.08ರ ಎಕಾನಮಿಯಲ್ಲಿ ಚಾಹಲ್ 21 ವಿಕೆಟ್ ಪಡೆದಿದ್ದಾರೆ. 18 ರನ್ ನೀಡಿ 3 ವಿಕೆಟ್ ಪಡೆದಿರುವುದು ಚಾಹಲ್ ಅವರ ಈ ಟೂರ್ನಿಯ ಅತ್ಯುತ್ತಮ ಸ್ಪೆಲ್ ಆಗಿದೆ.