Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಫೈನಲ್ ತಂಡಗಳ ಹೆಸರಿಸಿದ ಯುವಿಗೆ ಚಾಹಲ್ ತರ್ಲೆ ಟ್ವೀಟ್

IPL 2020: Yuzvendral Chahal reacted hilariously to Yuvraj Singh’s final prediction

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹೆಚ್ಚು ತರ್ಲೆ ತಮಾಷೆಗೇನೆ ಫೇಮಸ್ಸು. ಇದೇ ಚಾಹಲ್ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್‌ ಟ್ವೀಟ್‌ಗೆ ತರ್ಲೆ ಪ್ರತಿಕ್ರಿಯೆ ನೀಡಿ ಸುದ್ದಿಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಂಬಂಧಿಸಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ದುಬೈನಲ್ಲಿ ನಡೆದಿದ್ದ ಐಪಿಎಲ್ 36ನೇ ಪಂದ್ಯದ ಟ್ವೀಟ್ ಇದು.

ಅಕ್ಟೋಬರ್ 18ರ ಭಾನುವಾರ ಕಿಂಗ್ಸ್ XI ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ರೋಚಕ ಕಾಳಗ ನಡೆದಿತ್ತು. ಪಂದ್ಯದಲ್ಲಿ ಎರಡೂ ತಂಡಗಳೂ 176 ರನ್ ಮಾಡಿಸಿ ಪಂದ್ಯ ಟೈ ಮಾಡಿಕೊಂಡಿದ್ದವು. ಆ ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಎನಿಸಿತ್ತು. ಮತ್ತೆ ಎರಡನೇ ಸೂಪರ್ ಓವರ್‌ನಲ್ಲಿ ಪಂಜಾಬ್ ಗೆದ್ದಿತ್ತು.

ಪಂದ್ಯಕ್ಕೆ ಸಂಬಂಧಿಸಿ ಯುವಿ ಮಾಡಿರುವ ಟ್ವೀಟ್ ಮತ್ತು ಯುವಿ-ಚಾಹಲ್ ನಡುವಿನ ಸಂಭಾಷಣೆಯ ಟ್ವೀಟ್‌ಗಳು ಕೆಳಗಿವೆ.

ಫೈನಲ್‌ಗೆ ಹೋಗುವ ತಂಡಗಳು

ಫೈನಲ್‌ಗೆ ಹೋಗುವ ತಂಡಗಳು

ಮುಂಬೈ ಮತ್ತು ಪಂಜಾಬ್ ತಂಡದ ಕದನ ನೋಡಿದ ಬಳಿಕ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದರು. 'ಇವತ್ತಿನ ಪಂದ್ಯ ನೋಡಿದರೆ ನಿಕೋಲಸ್ ಪೂರನ್ ಗೇಮ್ ಚೇಂಜರ್ ಆಗಿ ಕಾಣಿಸುತ್ತಾರೆ. ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ಅವರದ್ದು. ನೋಡೋಕೆ ತುಂಬಾ ಅದ್ಭುತವಾಗಿತ್ತು. ನಾನೇ ಆಡುತ್ತಿದ್ದಾಗಿನ ಕ್ಷಣವನ್ನು ಅದು ನೆನಪಿಸಿತು. ಆಟ ಚಾಲ್ತಿಯಲ್ಲಿದೆ. ನನಗನ್ನಿಸುತ್ತಿದೆ, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಕಿಂಗ್ಸ್ XI ಪಂಜಾಬ್‌ ಕೂಡ ಪ್ಲೇ ಆಫ್‌ಗೆ ಹೋಗುತ್ತದೆ' ಎಂದು ಬರೆದುಕೊಂಡಿದ್ದರು.

ಚಾಹಲ್ ತರ್ಲೆ ಟ್ವೀಟ್

ಚಾಹಲ್ ತರ್ಲೆ ಟ್ವೀಟ್

ಯುವಿ ಟ್ವೀಟ್‌ಗೆ ಯುಜುವೇಂದ್ರ ಚಾಹಲ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. 'ಭಯ್ಯ, ಹಂಮ್ ಇಂಡಿಯಾ ಆಯೇಂಗೆ ವಾಪಸ್? (ಹಾಗಾದ್ರೆ ಅಣ್ಣ, ನಾವು ಭಾರತಕ್ಕೆ ವಾಪಸ್ ಬರೋದಾ?) ಎಂದು ತಮಾಷೆಯಾಗಿ ಬರೆದಿದ್ದಾರೆ. ಮುಂಬೈ, ಡೆಲ್ಲಿ, ಪಂಜಾಬ್ ಪ್ಲೇ ಆಫ್‌ಗೆ ಹೋಗೋದಾದ್ರೆ ಆರ್‌ಸಿಬಿ ತಂಡ ಯುಎಇಯಲ್ಲಿದ್ದು ಮಾಡೋದೇನು ಎಂಬಂತೆ ಚಾಹಲ್ ಯುವಿಯ ಕಾಲೆಳೆದಿದ್ದಾರೆ.

ಯುವರಾಜ್ ತಿರುಗೇಟು!

ಯುವರಾಜ್ ತಿರುಗೇಟು!

ತರ್ಲೆ ಚಾಹಲ್ ಕಾಲೆಳೆದರೆ ಸಿಕ್ಸರ್ ಕಿಂಗ್ ಯುವಿ ಸುಮ್ಮನೆ ಬಿಡುತ್ತಾರೆಯೇ. ಚಾಹಲ್‌ಗೆ ಯುವಿ ಕೂಡ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಚಾಹಲ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಯುವಿ, 'ಬಿಲ್ಕುಲ್! ಫೈನಲ್‌ ಝರೂರ್ ದೇಖ್‌ ಕರ್ ಆನಾ' (ಖಂಡಿತಾ, ಫೈನಲ್ ಪಂದ್ಯ ನೋಡಿಕೊಂಡೇ ಬನ್ನಿ) ಎಂದು ತಮಾಷೆ ಮಾಡಿದ್ದಾರೆ.

ಹಲ್ಲು ಕಿಸಿದ ಪಠಾಣ್

ಹಲ್ಲು ಕಿಸಿದ ಪಠಾಣ್

ಯುವರಾಜ್-ಚಾಹಲ್ ತರ್ಲೆ ಟ್ವೀಟ್‌ಗಳಿಗೆ ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಕೂಡ ಪ್ರತಿಕ್ರಿಯಿಸಿದ್ದಾರೆ. ಯುಜುವೇಂದ್ರ ಚಾಹಲ್ ಮಾಡಿರುವ ಟ್ವೀಟ್‌ಗೆ ಪಠಾಣ್, ಹಲ್ಲು ಕಿಸಿಯುವ ಇಮೋಜಿ ಮೂಲಕ ರಿಪ್ಲೆ ಮಾಡಿದ್ದಾರೆ.

Story first published: Tuesday, October 20, 2020, 10:32 [IST]
Other articles published on Oct 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+