ಚೆನ್ನೈ vs ಪಂಜಾಬ್ ಕದನದಲ್ಲಿ ಮಹತ್ವದ ಮೈಲುಗಲ್ಲು ನೆಡಲಿದ್ದಾರೆ ಮೂವರು ಆಟಗಾರರು

ಮಹೇಂದ್ರ ಸಿಂಗ್ ಧೋನಿ ಹಾಗೂ ಕೆಎಲ್ ರಾಹುಲ್ ನೇತೃತ್ವದ ತಂಡಗಳು ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದೆ. ಅನುಭವಿ ಹಾಗೂ ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಎರಡು ತಂಡಗಳ ನಡುವಿನ ಸೆಣೆಸಾಟ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಮೂರು ಪ್ರಮುಖ ದಾಖಲೆಗಳು ಮುರಿಯುವ ಅವಕಾಶವಿದೆ.
500ನೇ ಬೌಂಡರಿಗೆ ರೈನಾ ಹತ್ತಿರ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಈ ಪಂದ್ಯದಲ್ಲಿ ಮಹತ್ವದ ಮೈಲಿಗಲ್ಲು ನೆಡುವ ಸಾಧ್ಯತೆಯಿದೆ. ಐಪಿಎಲ್‌ನಲ್ಲಿ 500ನೇ ಬೌಂಡರಿ ದಾಖಲಿಸುವ ಅವಕಾಶ ರೈನಾ ಮುಂದಿದೆ. ಇದಕ್ಕಾಗಿ ರೈನಾ ಕೇವಲ ನಾಲ್ಕು ಬೌಂಡರಿಗಳಷ್ಟೇ ಹಿಂದಿದ್ದಾರೆ.
50 ವಿಕೆಟ್ ಸಾಧನೆ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು 50 ವಿಕೆಟ್ ಪಡೆದ ಸಾಧನೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಶಾರ್ದೂಲ್ ಠಾಕೂರ್ ಈ ಸಾಧನೆಗೆ ಕೇವಲ ಎರಡು ವಿಕೆಟ್ ಮಾತ್ರವೇ ಹಿಂದಿದ್ದಾರೆ. ಇನ್ನೋರ್ವ ಚೆನ್ನೈ ವೇಗಿ ದೀಪಕ್ ಚಾಹರ್ ಕೂಡ ಈ ಸಾಧನೆಗೆ ಹತ್ತಿರದಲ್ಲಿದ್ದಾರೆ. ಆದರೆ ಅದಕ್ಕಾಗಿ ಅವರು ಐದು ವಿಕೆಟ್ ಪಡೆಯಬೇಕಿದೆ.
ಮೋಯ್ಸಿಸ್ ಹೆನ್ರಿಕ್ಯೂಸ್: ಪಂಜಾಬ್ ಕಿಂಗ್ಸ್ ತಂಡದ ಆಲ್‌ರೌಂಡರ್ ಮೋಯ್ಸಿಸ್ ಹೆನ್ರಿಕ್ಯೂಸ್ ಐಪಿಎಲ್‌ನಲ್ಲಿ 1000 ರನ್‌ಗಳಿಸುವ ಸಮೀಪದಲ್ಲಿದ್ದಾರೆ. ಬ್ಯಾಟ್ ಹಾಗೂ ಬೌಲಿಂಗ್‌ನಲ್ಲಿ ಸಮಾನವಾಗಿ ಅಬ್ಬರಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಈ ಆಲ್‌ರೌಂಡರ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಅವಕಾಶ ದೊರೆತರೆ ಈ ಮಹತ್ವದ ಮೈಲಿಗಲ್ಲು ದಾಟುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications