ಚೆನ್ನೈ ಸೂಪರ್ ಕಿಂಗ್ಸ್‌ನ ಮೂವರು ಸದಸ್ಯರಿಗೂ ಕೊರೊನಾ ವೈರಸ್, ಆಟಗಾರರೆಲ್ಲರೂ ಸುರಕ್ಷಿತ

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಗಟಾರರು ಕೊರೊನಾ ವೈರಸ್‌ಗೆ ತುತ್ತಾದ ನಂತರ ಈಗ ಚೆನ್ನೈ ಸೂಪರ್ ಕಿಂಗ್ಸ್ ತಮಡದಲ್ಲಿಯೂ ಆತಂಕವನ್ನು ಮೂಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಮೂವರು ಸದಸ್ಯರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಆದರೆ ಇದು ಆಟಗಾರರಿಗೆ ಅಲ್ಲ ಬದಲಾಗಿ ತಂಡದ ಸಿಬ್ಬಂದಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಕಾಸಿ ವಿಶ್ವನಾಥನ್, ಬೌಲಿಂಗ್ ಕೋಚ್ ಎಲ್ ಬಾಲಾಜಿ ಹಾಗೂ ತಂಡದ ಬಸ್ ಕ್ಲೀನರ್‌ಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಉಳಿದ ಎಲ್ಲಾ ಸದಸ್ಯರ ವರದಿ ಕೂಡ ನೆಗೆಟಿವ್ ಬಂದಿದೆ.

ಸೋಮವಾರ ಎರಡನೇ ಸುತ್ತಿನ ಪರೀಕ್ಷೆ
ಸೋಮವಾರ ಮುಂಜಾನೆ ಈ ಮೂವರು ಕೂಡ ಮತ್ತೊಂದು ಸುತ್ತಿನ ಪರೀಕ್ಷೆಗೆ ಒಳಗಾಗಿದ್ದಾರೆ. ಈ ವರದಿಯಲ್ಲಿಯೂ ಕೊರೊನಾ ವೈರಸ್ ದೃಢಪಟ್ಟರೆ ಮುಂದಿನ ಹತ್ತು ದಿನಗಳ ಕಾಲ ಇವರು ಪ್ರತ್ಯೇಕವಾಗಿರಲಿದ್ದು ಬಳಿಕ ಎರಡು ನೆಗೆಟಿವ್ ವರದಿಗಳೊಂದಿಗೆ ಮತ್ತೆ ತಂಡದ ಬಯೋಬಬಲ್‌ಅನ್ನು ಕೂಡಿಕೊಳ್ಳಲಿದ್ದಾರೆ.

ಆಟಗಾರರು ಆಟಗಾರರು ಸುರಕ್ಷಿತ
ಈ ವರದಿಯ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ಆಟಗಾರರು ಕೂಡ ಮತ್ತೊಂದು ಸುತ್ತಿನ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಆದರೆ ಎಲ್ಲಾ ಆಟಗಾರರು ಹಾಗೂ ಉಳಿದ ಸಿಬ್ಬಂದಿಗಳ ವರದಿ ಕೂಡ ನೆಗೆಟಿವ್ ಬಂದಿದೆ. ಹೀಗಾಗಿ ಚೆನ್ನೈ ಪಾಳಯ ಸದ್ಯ ನಿರಾಳವಾಗಿದೆ.

ಕೆಕೆಆರ್ ತಂಡದ ಆಟಗಾರರಲ್ಲಿ ಕೊರೊನಾ
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರು ಕೊರೊನಾ ವೈಸರ್‌ಗೆ ತುತ್ತಾದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿಯೂ ಕೊರೊನಾ ಸೋಂಕಿನ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಟೂರ್ನಿಯಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಟೂರ್ನಿಯ ಮೇಲೆ ಕರಿಛಾಯೆ
ಈ ಮಧ್ಯೆ ಐಪಿಎಲ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಬಯೋಬಬಲ್‌ನ ಒಳಗೆ ಕಂಡುಬರುತ್ತಿರುವುದು ಆಟಗಾರರು ಮಾತ್ರವಲ್ಲದೆ ಆಯೋಜಕರು ಹಾಗೂ ಫ್ರಾಂಚೈಸಿಗಳ ಚಿಂತೆಯನ್ನು ಹೆಚ್ಚಿಸಿದೆ. ಈಗಾಗಲೇ ಒಂದು ಪಂದ್ಯವನ್ನು ಮುಂದೂಡಿಕೆ ಮಾಡಲಾಗಿದ್ದು ಟೂರ್ನಿಯ ಭವಿಷ್ಯ ಕೂಡ ಈಗ ಆತಂಕದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications