ಐಪಿಎಲ್ 2021 : ಟೂರ್ನಿಯಲ್ಲಿ ಅತ್ಯುತ್ತಮ ಎಕಾನಮಿ ರೇಟ್ ಹೊಂದಿರುವ 5 ಬೌಲರ್‌ಗಳು
ಇದೇ ಏಪ್ರಿಲ್ 9ರಿಂದ 14ನೇ ಐಪಿಎಲ್ ಆವೃತ್ತಿ ಆರಂಭವಾಗುತ್ತಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಾಡಲಿವೆ.
ಹೊಡಿ ಬಡಿ ಆಟ ಆಡಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೌಲರ್ ಗಳು ಉತ್ತಮ ಎಕಾನಮಿ ರೇಟಿಂಗ್ ಹೊಂದುವುದು ತೀರಾ ಕಷ್ಟದ ಕೆಲಸ. ಟೂರ್ನಿಯಲ್ಲಿ ಸ್ಪೋಟಕ ಬ್ಯಾಟ್ಸ್‌ಮನ್‌ಗಳ ದಂಡೇ ಇರುವುದರಿಂದ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ ಒಳ್ಳೆಯ ಎಕಾನಮಿ ರೇಟಿಂಗ್ ಪಡೆದುಕೊಳ್ಳುವುದು ಸುಲಭದ ಮಾತಲ್ಲ. ಆದರೂ ಸಹ ಕೆಲವೊಂದಷ್ಟು ಬೌಲರ್‌ಗಳು ಉತ್ತಮ ಪ್ರದರ್ಶನವನ್ನು ನೀಡಿ ಒಳ್ಳೆಯ ಎಕಾನಮಿ ರೇಟಿಂಗ್ ಹೊಂದಿದ್ದಾರೆ. ಇವರಲ್ಲಿ ಕೆಲವರು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸದೇ ಇದ್ದರೂ ಸಹ ಉತ್ತಮ ಎಕಾನಮಿ ರೇಟಿಂಗ್ ಎಂದಾಗ ಅವರ ಹೆಸರು ಕೇಳಿಬರುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯುತ್ತಮ ಎಕಾನಮಿ ರೇಟಿಂಗ್ ಹೊಂದಿರುವ ಟಾಪ್ 5 ಬೌಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ.

5. ರೂಲೋಫ್ ವ್ಯಾನ್ ಡೆರ್ ಮೆರ್ವೆ
ರೂಲೋಫ್ ವ್ಯಾನ್ ಡೆರ್ ಮೆರ್ವೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯುತ್ತಮ ಎಕಾನಮಿ ರೇಟ್ ಹೊಂದಿರುವ ಬೌಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ನಿಲ್ಲುವ ಬೌಲರ್. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 21 ಪಂದ್ಯಗಳನ್ನು ಆಡಿರುವ ಎಡಗೈ ಸ್ಪಿನ್ನರ್ ಮೆರ್ವೆ 73.5 ಓವರ್‌ಗಳನ್ನು ಎಸೆದು 498 ರನ್ ನೀಡುವುದರ ಮೂಲಕ 6.74 ಎಕಾನಮಿ ರೇಟ್ ಹೊಂದಿದ್ದಾರೆ.

4. ಮುತ್ತಯ್ಯ ಮುರಳೀಧರನ್
ಶ್ರೀಲಂಕಾದ ಲೆಜಂಡರಿ ಬೌಲರ್ ಮುತ್ತಯ್ಯ ಮುರಳೀಧರನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯುತ್ತಮ ಎಕಾನಮಿ ರೇಟ್ ಹೊಂದಿರುವ ಬೌಲರ್‌ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತಾರೆ. 66 ಐಪಿಎಲ್ ಪಂದ್ಯಗಳನ್ನು ಆಡಿರುವ ಮುರಳೀಧರನ್ 254 ಓವರ್ ಎಸೆದು 1696 ರನ್ ನೀಡಿದ್ದಾರೆ. ಈ ಮೂಲಕ 6.67 ಮುರಳೀಧರನ್ ಎಕಾನಮಿ ರೇಟಿಂಗ್ ಹೊಂದಿದ್ದಾರೆ.

ಗ್ಲೆನ್ ಮೆಕ್‌ಗ್ರಾ
ಆಸ್ಟ್ರೇಲಿಯದ ಮಾಜಿ ಲೆಜೆಂಡರಿ ಕ್ರಿಕೆಟಿಗ ಗ್ಲೆನ್ ಮೆಕ್‌ಗ್ರಾ ಕೂಡ ಐಪಿಎಲ್ ಪಂದ್ಯಗಳಲ್ಲಿ ಅತ್ಯುತ್ತಮ ಎಕಾನಮಿ ರೇಟ್ ಹೊಂದಿರುವ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 14 ಐಪಿಎಲ್ ಪಂದ್ಯ ಆಡಿರುವ ಮೆಕ್‌ಗ್ರಾ 54 ಓವರ್‌ಗಳಲ್ಲಿ 357 ರನ್ ನೀಡಿ 12 ವಿಕೆಟ್ ಪಡೆಯುವುದರ ಜೊತೆ 6.61 ಎಕಾನಮಿ ರೇಟ್ ಹೊಂದುವುದರ ಮೂಲಕ ಅತ್ಯುತ್ತಮ ಎಕಾನಮಿ ರೇಟಿಂಗ್ ಹೊಂದಿರುವ ಐಪಿಎಲ್ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

2. ಅನಿಲ್ ಕುಂಬ್ಳೆ
ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅತ್ಯುತ್ತಮ ಎಕಾನಮಿ ರೇಟಿಂಗ್ ಹೊಂದಿರುವ ಐಪಿಎಲ್ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 42 ಐಪಿಎಲ್ ಪಂದ್ಯಗಳಲ್ಲಿ ಒಟ್ಟು 160.5 ಓವರ್‌ಗಳನ್ನು ಎಸೆದಿರುವ ಕುಂಬ್ಳೆ 1058 ರನ್ ನೀಡಿ 6.57 ಎಕಾನಮಿ ರೇಟ್ ಹೊಂದಿದ್ದಾರೆ.

1. ರಶೀದ್ ಖಾನ್
ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಎಕಾನಮಿ ರೇಟ್ ಹೊಂದಿರುವ ಬೌಲರ್ ರಶೀದ್ ಖಾನ್. ಅಫ್ಘಾನಿಸ್ತಾನದ ಈ ಸ್ಪಿನ್ನರ್ ಆಡಿರುವ 62 ಐಪಿಎಲ್ ಪಂದ್ಯಗಳಲ್ಲಿ 1537 ರನ್ ನೀಡಿ ಟೂರ್ನಿಯ ಅತ್ಯುತ್ತಮ 6.24 ಎಕಾನಮಿ ರೇಟ್ ಹೊಂದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 65 ವಿಕೆಟ್‍ಗಳನ್ನು ಪಡೆದಿರುವ ರಶೀದ್ ಖಾನ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications