For Quick Alerts
ALLOW NOTIFICATIONS  
For Daily Alerts
 

ಬಹುಶಃ ಯಾರೂ ಮುರಿಯಲಾಗದ 5 ಐಪಿಎಲ್ ದಾಖಲೆಗಳಿವು!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರತಿ ಆವೃತ್ತಿಯಲ್ಲಿಯೂ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿರುತ್ತವೆ. ಒಬ್ಬ ಆಟಗಾರ ಸೃಷ್ಟಿಸಿದ ದಾಖಲೆಯನ್ನು ಮತ್ತೊಬ್ಬ ಆಟಗಾರ ಸರಿಗಟ್ಟುವುದರ ಮೂಲಕ ನೂತನ ದಾಖಲೆಯನ್ನು ಸ್ಥಾಪಿಸುತ್ತಾರೆ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೃಷ್ಟಿಯಾಗಿರುವ ಈ 5 ದಾಖಲೆಗಳನ್ನು ಬೇರೆ ಆಟಗಾರರು ಮುರಿಯುವುದು ಅಷ್ಟು ಸುಲಭದ ಮಾತಲ್ಲ. ಒಂದು ವೇಳೆ ಈ ದಾಖಲೆಗಳನ್ನು ಸರಿಗಟ್ಟಿದರೆ ಅದೊಂದು ಮಹಾ ಸಾಧನೆಯೇ ಸರಿ ಎನ್ನಬಹುದು.

ಇಲ್ಲಿಯವರೆಗೂ ನಡೆದಿರುವ ಐಪಿಎಲ್ ಆವೃತ್ತಿಗಳಲ್ಲಿ ಈಗಾಗಲೇ ಹಲವಾರು ಮುರಿಯಲಾಗದಂತಹ ದಾಖಲೆಗಳನ್ನು ಆಟಗಾರರು ಮಾಡಿದ್ದು ಏಪ್ರಿಲ್ 9ರಿಂದ ಆರಂಭವಾಗಲಿರುವ 14ನೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೇರೆ ಯಾವುದಾದರೂ ಅಪರೂಪದ , ಸರಿಗಟ್ಟಲಾಗದಂತಹ ದಾಖಲೆಗಳನ್ನು ಆಟಗಾರರು ನಿರ್ಮಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿರುವ ರಾಬಿನ್ ಉತ್ತಪ್ಪ ಅವರು ಈಗಾಗಲೇ ಹೊಸ ದಾಖಲೆಯನ್ನು ಸೃಷ್ಟಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಈ ಆವೃತ್ತಿಯಲ್ಲಿ ಚೆನ್ನೈ ತಂಡದ ಪರ 1000 ರನ್ ಗಳಿಸುವ ಗುರಿಯನ್ನು ಹೊಂದಿದ್ದಾರೆ. ಉತ್ತಪ್ಪ ಅವರು ಈ ದಾಖಲೆಯನ್ನು ನಿರ್ಮಿಸುತ್ತಾರಾ ಎಂಬುದಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಈ ಬಾರಿಯ ಐಪಿಎಲ್ ಹಲವಾರು ಪ್ರತಿಭೆಗಳಿಂದ ಕೂಡಿದ್ದು ಮತ್ತಷ್ಟು ಸರಿಗಟ್ಟಲಾಗದಂತಹ ದಾಖಲೆಗಳನ್ನು ನಿರ್ಮಿಸಬಹುದು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸರಿಗಟ್ಟಲು ಅತೀ ಕಷ್ಟಕರವಾದಂತಹ ಆ 5 ದಾಖಲೆಗಳ ಪಟ್ಟಿ ಮುಂದೆ ಇದೆ ಓದಿ..

1. ಒಂದೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿಯವರ 4 ಶತಕಗಳು

1. ಒಂದೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿಯವರ 4 ಶತಕಗಳು

2016ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 16 ಇನ್ನಿಂಗ್ಸ್ ಗಳನ್ನು ಆಡಿದ್ದ ವಿರಾಟ್ ಕೊಹ್ಲಿ ಗಳಿಸಿದ್ದು ಬರೋಬ್ಬರಿ 973 ರನ್. ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 4 ಶತಕಗಳನ್ನು ಬಾರಿಸಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಬಲು ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಆವೃತ್ತಿಯೊಂದರಲ್ಲಿ ಒಂದೇ ಒಂದು ಶತಕವನ್ನು ಬಾರಿಸುವುದು ಕಷ್ಟ ಅಂತಹದರಲ್ಲಿ ವಿರಾಟ್ 4 ಶತಕಗಳನ್ನು ಸಿಡಿಸಿದ್ದಾರೆ. ವಿರಾಟ್ ಅವರ ಈ ಸಾಧನೆಯನ್ನು ಸರಿಗಟ್ಟುವುದು ಸುಲಭದ ಮಾತು ಅಲ್ಲವೇ ಅಲ್ಲ.

2. ಕ್ರಿಸ್ ಗೇಲ್ ಅವರ ಅಜೇಯ 175 ರನ್

2. ಕ್ರಿಸ್ ಗೇಲ್ ಅವರ ಅಜೇಯ 175 ರನ್

ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರು 2013ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪುಣೆ ವಾರಿಯರ್ಸ್ ವಿರುದ್ಧ 66 ಎಸೆತಗಳಲ್ಲಿ ಅಜೇಯ 175 ರನ್ ಸಿಡಿಸುವುದರ ಮೂಲಕ ಇನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಐಪಿಎಲ್ ಆಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. 13 ಬೌಂಡರಿ ಮತ್ತು 17 ದಾಖಲೆಯ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ 175* ರನ್ ಸಿಡಿಸಿ ಭವಿಷ್ಯದಲ್ಲಿ ಅಳಿಸಿ ಹಾಕಲು ಬಲು ಕಷ್ಟವಾದಂತಹ ದಾಖಲೆಯನ್ನು ನಿರ್ಮಿಸಿದ್ದಾರೆ. ಕ್ರಿಸ್ ಗೇಲ್ ಅವರ ಈ ದಾಖಲೆಯ ಆಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ ಪಂದ್ಯದಲ್ಲಿ 263 ರನ್ ಗಳಿಸಿತ್ತು.

3. ಒಂದೇ ಓವರ್‌ನಲ್ಲಿ 37 ರನ್

3. ಒಂದೇ ಓವರ್‌ನಲ್ಲಿ 37 ರನ್

ಟಿ ಟ್ವೆಂಟಿ ಪಂದ್ಯಗಳಲ್ಲಿ ಓವರ್‌ವೊಂದರಲ್ಲಿ 20-25 ರನ್ ಬಾರಿಸುವುದು ಸಾಮಾನ್ಯ ವಿಷಯ. ಯುವರಾಜ್ ಸಿಂಗ್, ಹರ್ಷಲ್ ಗಿಬ್ಸ್ ಮತ್ತು ಕಿರಾನ್ ಪೊಲಾರ್ಡ್ ಓವರ್‌ವೊಂದರಲ್ಲಿ 36 ರನ್ ಗಳಿಸಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಓವರ್‌ವೊಂದರಲ್ಲಿ ಒಬ್ಬ ಬ್ಯಾಟ್ಸ್‌ಮನ್‌ ಗಳಿಸಬಹುದಾದ ಗರಿಷ್ಠ ರನ್ 36. ಆದರೆ 2011ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ನಡುವಿನ ಪಂದ್ಯದ ಓವರ್‌ವೊಂದರಲ್ಲಿ 37 ರನ್ ದಾಖಲಾಗಿತ್ತು. ಕೊಚ್ಚಿ ತಂಡದ ಬೌಲರ್ ಪ್ರಶಾಂತ್ ಪರಮೇಶ್ವರನ್ ಮಾಡಿದ ಓವರ್‌ನಲ್ಲಿ ಕ್ರಿಸ್ ಗೇಲ್ 3 ಬೌಂಡರಿ & 4 ಸಿಕ್ಸರ್ ಸಿಡಿಸಿದರು. ಆ ಓವರ್‌ನಲ್ಲಿ ಬೌಲರ್ ಪ್ರಶಾಂತ್ ಪರಮೇಶ್ವರನ್ 1 ನೋಬಾಲ್ ಮಾಡಿದ್ದ ಪರಿಣಾಮ ಒಟ್ಟು 37 ರನ್ ಒಂದೇ ಓವರ್‌ನಲ್ಲಿ ಬಂತು ಮತ್ತು ಇದು ಬಲು ಅಪರೂಪದ ದಾಖಲೆಯಾಗಿದ್ದು ಇದನ್ನು ಮುಂದಿನ ದಿನಗಳಲ್ಲಿ ಮುರಿಯುವುದು ತೀರ ಕಷ್ಟದ ಕೆಲಸ.

4. ವಿರಾಟ್ - ಎಬಿ ಡಿ ವಿಲಿಯರ್ಸ್ 229 ರನ್ ಜೊತೆಯಾಟ :

4. ವಿರಾಟ್ - ಎಬಿ ಡಿ ವಿಲಿಯರ್ಸ್ 229 ರನ್ ಜೊತೆಯಾಟ :

2016ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಲಯನ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ ತಂಡ 4 ಓವರ್‌ಗಳ ಬಳಿಕ 1 ವಿಕೆಟ್ ನಷ್ಟಕ್ಕೆ 19 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆ ಸಮಯದಲ್ಲಿ ಒಂದಾದ ಕೊಹ್ಲಿ ಮತ್ತು ಎಬಿಡಿ ಜೋಡಿ ದಾಖಲೆಯ 229 ರನ್ ಜೊತೆಯಾಟವಾಡಿತು. ವಿರಾಟ್ ಕೊಹ್ಲಿ 109 ರನ್ ಗಳಿಸಿದರೆ, ಎಬಿ ಡಿ ವಿಲಿಯರ್ಸ್ 52 ಎಸೆತಗಳಲ್ಲಿ ಅಜೇಯ 129 ರನ್ ಬಾರಿಸಿದರು. ವಿರಾಟ್ ಮತ್ತು ಎಬಿ ಡಿ ವಿಲಿಯರ್ಸ್ ಅವರ 229 ರನ್‌ಗಳ ಜೊತೆಯಾಟವನ್ನು ಮುಂದಿನ ದಿನಗಳಲ್ಲಿ ಸರಿಗಟ್ಟುವುದು ಸುಲಭದ ಮಾತಲ್ಲ. ಹಾಗೆಯೇ ವಿರಾಟ್ ಮತ್ತು ಎಬಿಡಿ ಜೋಡಿ 215* ರನ್ ದಾಖಲಿಸುವುದರ ಮೂಲಕ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿನಲ್ಲಿಯೇ ಬರೆದುಕೊಂಡಿದ್ದು, ಇದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡನೇ ಅತಿ ಹೆಚ್ಚು ರನ್‌ಗಳ ಜೊತೆಯಾಟವಾಗಿದೆ.

5. ಕೇವಲ 12 ರನ್ ನೀಡಿ 6 ವಿಕೆಟ್ ಪಡೆದಿದ್ದ ಅಲ್ಜಾರಿ ಜೋಸೆಫ್

5. ಕೇವಲ 12 ರನ್ ನೀಡಿ 6 ವಿಕೆಟ್ ಪಡೆದಿದ್ದ ಅಲ್ಜಾರಿ ಜೋಸೆಫ್

ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಕೆರೆಬಿಯನ್ ಬೌಲರ್ ಅಲ್ಜಾರಿ ಜೋಸೆಫ್ ಆಡಿದ ಮೊದಲ ಐಪಿಎಲ್ ಪಂದ್ಯದಲ್ಲಿಯೇ ಅತ್ಯದ್ಭುತ ಪ್ರದರ್ಶನವನ್ನು ತೋರಿದ್ದರು. 2019ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅಲ್ಜಾರಿ ಜೋಸೆಫ್ ಕೇವಲ 12 ರನ್ ನೀಡಿ 6 ವಿಕೆಟ್ ಪಡೆದು ಕೊಳ್ಳುವುದರ ಮೂಲಕ ಸೊಹೇಲ್ ತನ್ವೀರ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಸೊಹೇಲ್ ತನ್ವೀರ್ 14 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಅಲ್ಜಾರಿ ಜೋಸೆಫ್ ಮಾಡಿರುವ ಈ ದಾಖಲೆಯನ್ನು ಸರಿಗಟ್ಟಿರುವುದು ತೀರಾ ಕಷ್ಟದ ಕೆಲಸ.

Story first published: Monday, March 29, 2021, 13:07 [IST]
Other articles published on Mar 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+