ಐಪಿಎಲ್: ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಅಪ್‌ಡೇಟ್ ಕೊಟ್ಟ ಕುಂಬ್ಳೆ

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ಭಾರತದ ಪ್ರಮುಖ ವೇಗಿ ಮೊಹಮ್ಮದ್ ಶಮಿಯ ಚೇತರಿಕೆ ಬಗ್ಗೆ ಅಧಿಕೃತ ಮಾಹಿತಿ ಬಂದಿರಲಿಲ್ಲ. ಶಮಿ ಕ್ರೀಡಾಂಗಣ, ಟೀಮ್ ಇಂಡಿಯಾದಿಂದ ದೂರವಿದ್ದು ಮೂರು ತಿಂಗಳು ಕಳೆದಿವೆ.
ಇಷ್ಟು ದಿನವಾದರೂ ಮೊಹಮ್ಮದ್ ಶಮಿ ಗಾಯ, ಚೇತರಿಕೆ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ದಿನಗಳು ಹತ್ತಿರವಾಗುತ್ತಿರುವುದರಿಂದ ಶಮಿ ಆರೋಗ್ಯ ಸ್ಥಿತಿಯ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡುತ್ತಿದೆ.
ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಕೊನೆಗೂ ಶಮಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಶಮಿ ಚೇತರಿಸಿಕೊಳ್ಳುತ್ತಿದ್ದಾರೆ. 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಲು ಸಿದ್ಧರಿದ್ದಾರೆ ಎಂದು ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 9ರಿಂದ ಐಪಿಎಲ್ ಆರಂಭವಾಗಲಿದೆ.
'ನನಗೆ ಗೊತ್ತಿರುವಂತೆ ಮೊಹಮ್ಮದ್ ಶಮಿ ಆರೋಗ್ಯವಾಗಿದ್ದಾರೆ. ಕೆಲ ದಿನಗಳಲ್ಲಿ ಶಮಿ ಕ್ವಾರಂಟೈನ್‌ಗಾಗಿ ಬಯೋಬಬಲ್‌ಗೆ ಬರಲಿದ್ದಾರೆ. ಗಾಯ ಆದಾಗಿನಿಂದ ಅವರು ಪಂದ್ಯ ಆಡಿಲ್ಲ ಅನ್ನೋದು ಗೊತ್ತು. ಆದರೆ ಆಡಲು ಶಮಿ ಈಗ ಸಿದ್ಧರಿದ್ದಾರೆ,' ಎಂದು ಕುಂಬ್ಳೆ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications