ಐಪಿಎಲ್ ಹರಾಜು 2021: ಪ್ರಮುಖ ಆಟಗಾರರ ಮೂಲಬೆಲೆ ಹೀಗಿದೆ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಗೆ ತಯಾರಿಗಳು ನಡೆಯುತ್ತಿವೆ. ಫೆಬ್ರವರಿ 18ಕ್ಕೆ ಚೆನ್ನೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಬಾರಿ ಅನೇಕ ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿರುವುದರಿಂದ ಹರಾಜು ಕುತೂಹಲ ಮೂಡಿಸಲಿದೆ. ಫೆಬ್ರವರಿ 4ರಂದು ಐಪಿಎಲ್ ಹರಾಜಿಗೆ ಆಟಗಾರರ ನೋಂದಾವಣೆ ಪ್ರಕ್ರಿಯೆ ಕೊನೆಗೊಂಡಿದೆ.
ಒಟ್ಟು 1097 ಮಂದಿ 2021ರ ಐಪಿಎಲ್ ಹರಾಜಿಗಾಗಿ ನೋಂದಾಯಿಸಿಕೊಂಡಿದ್ದಾರೆ. ಹರಾಜಿಗೆ ನೋಂದಾಯಿಸಿಕೊಂಡ 1097 ಮಂದಿಯಲ್ಲಿ 814 ಮಂದಿ ಭಾರತೀಯರು, 283 ಜನ ವಿದೇಶಿಯರು. ಫೆಬ್ರವರಿ 18ರಂದು ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ 3 pmಗೆ ಆರಂಭಗೊಳ್ಳಲಿದೆ.
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಕೆಲ ಪ್ರಮುಖ ಆಟಗಾರರ ಮೂಲಬೆಲೆ ಬಹಿರಂಗಗೊಂಡಿದೆ. ಅದು ಕೆಳಗಿನಂತಿದೆ.

ಶ್ರೀಶಾಂತ್ ಮೂಲಬೆಲೆ
* ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಬಿಸಿಸಿಐನಿಂದ ನಿಷೇಧಕ್ಕೀಡಾಗಿದ್ದ ಎಸ್ ಶ್ರೀಶಾಂತ್ ಈ ಬಾರಿಯ ಐಪಿಎಲ್‌ನಲ್ಲಿ ಮತ್ತೆ ಪಾಲ್ಗೊಳ್ಳಲಿದ್ದಾರೆ. ಐಪಿಎಲ್ ಹರಾಜು ಕಣದಲ್ಲಿರುವ ಶ್ರೀಶಾಂತ್ ಮೂಲಬೆಲೆ 57 ಲಕ್ಷ ರೂ.
* ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಮೂಲಬೆಲೆ 75 ಲಕ್ಷ ರೂ.
* ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಮೂಲಬೆಲೆ 20 ಲಕ್ಷ ರೂ.

ಫಿಂಚ್, ಕಾಟ್ರೆಲ್ ಬೆಲೆ
* 1 ಕೋಟಿ ರೂ.: ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಮಾರ್ನಸ್ ಲ್ಯಾಬುಶೇನ್, ಭಾರತದ ಹನುಮ ವಿಹಾರಿ, ಉಮೇಶ್ ಯಾದವ್, ವೆಸ್ಟ್ ಇಂಡೀಸ್‌ನ ಶೆಲ್ಡನ್ ಕಾಟ್ರೆಲ್ ಮೂಲಬೆಲೆ 1 ಕೋ.ರೂ.
* 1.5 ಕೋಟಿ ರೂ.: ಅಫ್ಘಾನಿಸ್ತಾನದ ಮುಜೀಬ್ ಉರ್ ರಹ್ಮಾನ್, ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿ, ನಾಥನ್ ಕೌಲ್ಟರ್-ನೈಲ್, ಮಿಚೆಲ್ ಸ್ವೆಪ್ಸನ್, ಇಂಗ್ಲೆಂಡ್‌ನ ಲೂಯಿಸ್ ಗ್ರೆಗೊರಿ, ಅಲೆಕ್ಸ್ ಹೇಲ್ಸ್, ಆ್ಯಡಮ್ ಲಿತ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಟಾಮ್ ಕರನ್, ಭಾರತದ ಆರ್ ಅಶ್ವಿನ್ ಮೂಲಬೆಲೆ 1.5 ಕೋಟಿ ರೂ.

ಶಕೀಬ್, ಮ್ಯಾಕ್ಸ್‌ವೆಲ್, ಸ್ಮಿತ್
* 2 ಕೋಟಿ ರೂ: ಇಂಗ್ಲೆಂಡ್‌ನ ಸ್ಯಾಮ್ ಬಿಲ್ಲಿಂಗ್ಸ್, ಜೇಸನ್ ರಾಯ್, ಲಿಯಾಮ್ ಪ್ಲಾಂಕೆಟ್, ಮಾರ್ಕ್ ವುಡ್, ದಕ್ಷಿಣ ಆಫ್ರಿಕಾದ ಕಾಲಿನ್ ಇಂಗ್ರಾಮ್, ಮೊಯೀನ್ ಅಲಿ, ಭಾರತದ ಕೇದಾರ್ ಜಾಧವ್, ಹರ್ಭಜನ್ ಸಿಂಗ್, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗ್ಲೆನ್ ಮ್ಯಾಕ್ಸ್‌ವೆಲ್ ಮೂಲಬೆಲೆ 2 ಕೋ.ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications