ಐಪಿಎಲ್: 4 ಓವರ್ ಮಾಡಿ 70 ರನ್ ನೀಡಿದ್ದ ಬೌಲರ್‌ನ ನೆನಪಿದೆಯೇ?

ಐಪಿಎಲ್ 14ನೇ ಆವೃತ್ತಿ ಇದೇ ಏಪ್ರಿಲ್ ತಿಂಗಳ 9ರಿಂದ ಆರಂಭವಾಗಲಿದ್ದು ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ.
ಐಪಿಎಲ್ ಎಂದಮೇಲೆ ರನ್ ಹೊಳೆ ಹರಿಯುವುದು ಸಾಮಾನ್ಯ. ಎಷ್ಟೇ ಪ್ರತಿಭಾವಂತ ಬೌಲರ್ ಆದರೂ ಸಹ ಐಪಿಎಲ್ ಟೂರ್ನಿಯಲ್ಲಿ ಸಿಕ್ಕಾಪಟ್ಟೆ ರನ್ ನೀಡುತ್ತಾರೆ. ಇದುವರೆಗೂ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ರನ್ ನೀಡಿ ಕಳಪೆ ಬೌಲಿಂಗ್ ಪ್ರದರ್ಶಿಸಿದ ಅನೇಕ ಬೌಲರ್‌ಗಳನ್ನು ನೀವು ನೋಡಿರುತ್ತೀರಿ. ಆದರೆ ಎಸೆದ 4 ಓವರ್‌ಗಳಲ್ಲಿ ಬರೋಬ್ಬರಿ 70 ರನ್ ನೀಡಿದ್ದ ಬೌಲರ್‌ನ ಹೆಸರು ತುಂಬಾ ಜನರಿಗೆ ನೆನಪಿರುವುದು ಕಡಿಮೆ.
ಹೌದು ಬಸಿಲ್ ಥಂಪಿ ಎಂಬ ಬೌಲರ್ ಐಪಿಎಲ್ ಟೂರ್ನಿಯ ಪಂದ್ಯವೊಂದರಲ್ಲಿ ಸಿಕ್ಕ 4 ಓವರ್ ಎಸೆದು ಬರೋಬ್ಬರಿ 70 ರನ್ ನೀಡಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಅದು 2018ರ ಐಪಿಎಲ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ. ಆರ್ ಸಿ ಬಿ 7 ಓವರ್‌ಗಳಲ್ಲಿ 51 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿತ್ತು. ಆ ಸಂದರ್ಭದಲ್ಲಿ ಎಂಟನೇ ಓವರ್ ಮಾಡಲು ಬಸಿಲ್ ಥಂಪಿ ಬಂದರು.
ಬಸಿಲ್ ಥಂಪಿ ಎಸೆದ ಮೊದಲ 2 ಎಸೆತಗಳಿಗೆ ಮೊಯಿನ್ ಅಲಿ ಸಿಕ್ಸರ್ ಬಾರಿಸಿದರು. ಅದೇ ಓವರ್‌ನಲ್ಲಿಯೇ ಎಬಿ ಡಿವಿಲಿಯರ್ಸ್ ಸಹ ಒಂದು ಬೌಂಡರಿ ಬಾರಿಸಿದ್ದರಿಂದ ಬಸಿಲ್ ಥಂಪಿ ಆ ಓವರ್‌ನಲ್ಲಿ 19 ರನ್ ನೀಡಿ ದುಬಾರಿಯಾದರು. ನಂತರ ಮತ್ತೆ 13ನೇ ಓವರ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದಾಗ ಎಬಿಡಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ಪರಿಣಾಮ ಆ ಓವರ್ ನಲ್ಲಿ ಬಸಿಲ್ ಥಂಪಿ ನೀಡಿದ್ದು 18 ರನ್.
ನಂತರ ಎಬಿಡಿ ಮತ್ತು ಮೋಯಿನ್ ಅಲಿ ಇಬ್ಬರು ಔಟಾದ ಬಳಿಕ 16ನೇ ಓವರ್ ಮಾಡುವ ಅವಕಾಶವನ್ನು ಥಂಪಿಗೆ ನೀಡಲಾಯಿತು. ಆದರೆ ಕಾಲಿನ್ ಡಿ ಗ್ರ್ಯಾಂಡ್ಹೋಮ್ ಆ ಓವರ್‌ನಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸ್ ಬಾರಿಸಿದ ಪರಿಣಾಮ ಥಂಪಿ 14 ರನ್ ನೀಡಿದಂತಾಯಿತು. ಆ ಪಂದ್ಯದಲ್ಲಿ ಥಂಪಿಗೆ ತನ್ನ ಕೊನೆಯ ಓವರ್ ಎಸೆಯಲು 19ನೇ ಓವರ್‌ನಲ್ಲಿ ಚೆಂಡನ್ನು ನೀಡಲಾಯಿತು. ಆ ಓವರ್‌ನಲ್ಲಿಯೂ ಸಹ ಗ್ರ್ಯಾಂಡ್ಹೋಮ್ ಒಂದು ಸಿಕ್ಸರ್ ಬಾರಿಸಿದರು ಮತ್ತು ಸರ್ಫರಾಜ್ ಖಾನ್ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ಕಾರಣ ಬಸಿಲ್ ಥಂಪಿ 19 ರನ್ ನೀಡಿದಂತಾಯಿತು.
ಹೀಗೆ ಬಸಿಲ್ ಥಂಪಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಆ ಪಂದ್ಯದಲ್ಲಿ ಎಸೆದ ಒಟ್ಟು 4 ಓವರ್‌ಗಳಲ್ಲಿ 70 ರನ್ ನೀಡಿದರು. ಇಂದಿಗೂ ಸಹ ಇದಕ್ಕಿಂತ ಹೆಚ್ಚು ರನ್ ನೀಡುವ ಕಳಪೆ ಪ್ರದರ್ಶನವನ್ನು ಯಾವ ಬೌಲರ್ ಕೂಡ ನೀಡಿಲ್ಲ. ಹೀಗಾಗಿ ಬಸಿಲ್ ಥಂಪಿ ಅವರೇ ಅತಿ ಹೆಚ್ಚು ರನ್ ನೀಡಿದ ಐಪಿಎಲ್ ಬೌಲರ್ ಎಂಬ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿನಲ್ಲಿಯೇ ಉಳಿಸಿಕೊಂಡಂತಾಗಿದೆ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications