ಕೆಕೆಆರ್ ಸೇರಿದ ಇಯಾನ್ ಮಾರ್ಗನ್, ಪ್ರಸಿದ್ಧ್ ಕೃಷ್ಣ, ಶುಬ್ಮನ್ ಗಿಲ್

ನವದೆಹಲಿ: 2021 ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ ಭಾರತದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್, ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ನಾಯಕ ಇಯಾನ್ ಮಾರ್ಗನ್ ಸೋಮವಾರ (ಮಾರ್ಚ್ 29) ಕೋಲ್ಕತ್ತಾ ನೈಟ್ ರೈಡರ್ಸ್ ಕ್ಯಾಂಪ್ ಸೇರಿಕೊಂಡಿದ್ದಾರೆ.
ಭಾರತದ ಆಟಗಾರರಾದ ಶುಬ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ ಮತ್ತು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಭಾರತ vs ಇಂಗ್ಲೆಂಡ್ ಏಕದಿನ ಸರಣಿಯ ವೇಳೆ ಅವರವರ ತಂಡ ಪ್ರತಿನಿಧಿಸಿದ್ದರು. ಭಾನುವಾರ ಇತ್ತಂಡಗಳ ನಡುವಿನ 3ನೇ ಏಕದಿನ ಪಂದ್ಯ ಮುಕ್ತಾಯಗೊಂಡ ಬಳಿಕ ಎಲ್ಲರೂ ಐಪಿಎಲ್‌ಗಾಗಿ ಸಿದ್ಧವಾಗಿದ್ದಾರೆ.
ಕೆಕೆಆರ್ ಆಟಗಾರರು ತಂಡಕ್ಕೆ ಸೇರಿಕೊಳ್ಳುತ್ತಿರುವ ಸಂಗತಿಯನ್ನು ಕೆಕೆಆರ್ ಟ್ವೀಟ್ ಮೂಲಕ ತಿಳಿಸಿದೆ. ತಂಡದ ಹೋಟೆಲ್‌ಗೆ ಸದಸ್ಯರು ಸೋಮವಾರ ಬಂದಿರುವ ಚಿತ್ರವನ್ನು ಕೆಕೆಆರ್ ಹಂಚಿಕೊಂಡಿದೆ. 'ಒಂದು ಬಯೋ ಬಬಲ್‌ನಿಂದ ಮತ್ತೊಂದು ಬಯೋ ಬಬಲ್‌ಗೆ. ವಿಶೇಷ ಡೆಲಿವರಿ ಪುಣೆಯಿಂದ ಮಧ್ಯಾಹ್ನ ಬಂದು ತಲುಪಿದೆ' ಎಂದು ಕೆಕೆಆರ್ ಬರೆದುಕೊಂಡಿದೆ.
ಮಾರ್ಚ್ 9ರಿಂದ ಮೇ 30ರ ವರೆಗೆ 14ನೇ ಆವೃತ್ತಿಯ ಐಪಿಎಲ್ ನಡೆಯಲಿದೆ. ಕೆಕೆಆರ್ ಮುಖ್ಯಕೋಚ್ ಬ್ರೆಂಡನ್ ಮೆಕಲಮ್ ಕೂಡ ಭಾನುವಾರ ಐಪಿಎಲ್ ಸಲುವಾಗಿ ಮುಂಬೈ ತಲುಪಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಆರಂಭಿಕ ಪಂದ್ಯ ಏಪ್ರಿಲ್ 11ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications