ಐಪಿಎಲ್ 2021: ಅಪರೂಪದ ದಾಖಲೆಗಳ ಬರೆದ ಚೆನ್ನೈ ಸೂಪರ್ ಕಿಂಗ್ಸ್!

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 10) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ವಾಲಿಫೈಯರ್ 1 ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಚೆನ್ನೈ ಈ ಸೀಸನ್‌ನಲ್ಲಿ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿದೆ.
ಐಪಿಎಲ್‌ನಲ್ಲಿ ಮೂರು ಬಾರಿ ಚಾಂಪಿಯನ್ಸ್ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್‌ಗೆ ಪ್ರವೇಶಿಸುತ್ತಿರುವುದು ಇದು 9ನೇ ಬಾರಿ. ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಮತ್ತು ಕನ್ನಡಿಗ ರಾಬಿನ್ ಉತ್ತಪ್ಪ ಸ್ಫೋಟಕ ಅರ್ಧ ಶತಕದೊಂದಿಗೆ ಸಿಎಸ್‌ಕೆ ಐಪಿಎಲ್‌ನಲ್ಲಿ ದಾಖಲೆ ಮಟ್ಟದಲ್ಲಿ ಫೈನಲ್ ಸಾಧನೆ ಮಾಡಿದೆ.

ಇತ್ತಂಡಗಳ ಸ್ಕೋರ್‌ಕಾರ್ಡ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಶಿಖರ್ ಧವನ್ 7, ಪೃಥ್ವಿ ಶಾ 60 (34), ರಿಷಭ್ ಪಂತ್ 51 (35), ಶ್ರೇಯಸ್ ಅಯ್ಯರ್ 1, ಶಿಮ್ರಾನ್ ಹೆಟ್ಮೈರ್ 37 (24), ಅಕ್ಸರ್ ಪಟೇಲ್ 10 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 172 ರನ್ ಗಳಿಸಿತು. ಜೋಶ್ ಹ್ಯಾಝಲ್ವುಡ್ 2, ರವಿಂದ್ರ ಜಡೇಜಾ 1, ಮೊಯೀನ್ ಅಲಿ 1, ಡ್ವೇನ್ ಬ್ರಾವೋ 1 ವಿಕೆಟ್ ಪಡೆದರು. ಗುರಿ ಬೆನ್ನಟ್ಟದ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್ ಗಾಯಕವಾಡ್ 70, ಫಾಫ್ ಡು ಪ್ಲೆಸಿಸ್ 1, ಮೊಯೀನ್ ಅಲಿ 16, ರಾಬಿನ್ ಉತ್ತಪ್ಪ 63, ಅಂಬಟಿ ರಾಯುಡು 1, ಎಂಎಸ್ ಧೋನಿ 18, ಶಾರ್ದೂಲ್ ಠಾಕೂರ್ 0 ರನ್‌ನೊಂದಿಗೆ 19.4 ಓವರ್‌ಗಳಲ್ಲಿ 6 ವಿಕೆಟ್ ಕಳೆದು 173 ರನ್ ಗಳಿಸಿ ಗೆಲುವನ್ನಾಚರಿಸಿತು.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿಶೇಷ ದಾಖಲೆಗಳು
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪ್ರವೇಶಿಸಿದ ವರ್ಷಗಳು
* ಐಪಿಎಲ್‌ನಲ್ಲಿ ಯಶಸ್ವಿ ತಂಡ ಎನಿಸಿಕೊಂಡಿರುವ ಸಿಎಸ್‌ಕೆ ಒಟ್ಟು 9 ಬಾರಿ ಫೈನಲ್‌ಗೆ ಪ್ರವೇಶಿಸಿದೆ. ಆ ವರ್ಷಗಳೆಂದರೆ 2008, 2010, 2011, 2012, 2013, 2015, 2018, 2019, 2021.
ಐಪಿಎಲ್ ಕ್ವಾಲಿಫೈಯರ್‌ಗಳಲ್ಲಿ ಚೆನ್ನೈ-ಡೆಲ್ಲಿ ಮುಖಾಮುಖಿ
* ಕ್ವಾಲಿಫೈಯರ್ 2: ಚೆನ್ನೈ, 2012 - ಚೆನ್ನೈ ಸೂಪರ್ ಕಿಂಗ್ಸ್‌ಗೆ 86 ರನ್ ಜಯ
* ಕ್ವಾಲಿಫೈಯರ್ 2: ವಿಶಾಖಪಟ್ಟಣ, 2019 - ಚೆನ್ನೈ ಸೂಪರ್ ಕಿಂಗ್ಸ್‌ಗೆ 6 ವಿಕೆಟ್ ಗೆಲುವು
* ಕ್ವಾಲಿಫೈಯರ್ 1: ದುಬೈ, 2021 - ಚೆನ್ನೈ ಸೂಪರ್ ಕಿಂಗ್ಸ್‌ಗೆ 4 ವಿಕೆಟ್ ಜಯ
ಐಪಿಎಲ್‌ನಲ್ಲಿ ಅತೀ ಹೆಚ್ಚಿನ ಸಾರಿ ಅಜೇಯ ಯಶಸ್ವಿ ರನ್ ಚೇಸ್
* 25 ಸಾರಿ, ಎಂಎಸ್ ಧೋನಿ
* 25 ಸಾರಿ, ರವೀಂದ್ರ ಜಡೇಜಾ
* 22 ಸಾರಿ, ಯೂಸುಫ್ ಪಠಾಣ್

ಇತ್ತಂಡಗಳ ಪ್ಲೇಯಿಂಗ್ XI
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI
ಋತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಎಂಎಸ್ ಧೋನಿ (ಡಬ್ಲ್ಯೂ/ಸಿ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹೇಝಲ್ವುಡ್.
ಬೆಂಚ್: ಸುರೇಶ್ ರೈನಾ, ಇಮ್ರಾನ್ ತಾಹಿರ್, ಜೇಸನ್ ಬೆಹ್ರೆಂಡೋರ್ಫ್, ಕೃಷ್ಣಪ್ಪ ಗೌತಮ್, ಲುಂಗಿ ಎನ್ಗಿಡಿ, ಮಿಚೆಲ್ ಸ್ಯಾಂಟ್ನರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಹರಿ ನಿಶಾಂತ್, ಎನ್ ಜಗದೀಶನ್, ಕೆಎಂ ಆಸಿಫ್, ಹರಿಶಂಕರ್ ರೆಡ್ಡಿ, ಡೊಮಿನಿಕ್ ಡ್ರೇಕ್ಸ್, ಭಗತ್ ವರ್ಮ, ಕರ್ತನ್ ಶರ್ಮ, ಚೇತೇಶ್ವರ ಪೂಜಾರ
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI
ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ (w/c), ಶ್ರೇಯಸ್ ಅಯ್ಯರ್, ಶಿಮ್ರಾನ್ ಹೆಟ್ಮೈರ್, ಟಾಮ್ ಕರನ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಚ್ ನಾರ್ಟ್ಜೆ
ಬೆಂಚ್: ವಿಷ್ಣು ವಿನೋದ್, ಕುಲ್ವಂತ್ ಖೆಜ್ರೋಲಿಯಾ, ಲಲಿತ್ ಯಾದವ್, ಪ್ರವೀಣ್ ದೂಬೆ, ಬೆನ್ ದ್ವಾರಶುಯಿಸ್, ಲುಕ್ಮಾನ್ ಮೇರಿವಾಲಾ, ಮಾರ್ಕಸ್ ಸ್ಟೊಯಿನಿಸ್, ಸ್ಯಾಮ್ ಬಿಲ್ಲಿಂಗ್ಸ್, ಸ್ಟೀವನ್ ಸ್ಮಿತ್, ಉಮೇಶ್ ಯಾದವ್, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ರಿಪಾಲ್ ಪಟೇಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications