ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಬಿನ್ ಉತ್ತಪ್ಪ ಪುತ್ರನ ಮುದ್ದಾದ ಚಿತ್ರ ಶೇರ್ ಮಾಡಿದ ಚೆನ್ನೈ

IPL 2021: Chennai Super Kings shares adorable picture of Robin Uthappas Son

ಚೆನ್ನೈ: ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಸೀಸನ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದಡಿಯಲ್ಲಿರುವ ಸಿಎಸ್‌ಕೆ ಈವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಜಯ ಕಂಡಿದೆ.

ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಡ್ತಾರಾ ಎಬಿ ಡಿ ವಿಲಿಯರ್ಸ್?!ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಡ್ತಾರಾ ಎಬಿ ಡಿ ವಿಲಿಯರ್ಸ್?!

ಕಳೆದ ಬಾರಿ ಸಿಎಸ್‌ಕೆ ತಂಡದಲ್ಲಿ ಆಲ್ ರೌಂಡರ್ ಸುರೇಶ್ ರೈನಾ ಆಡಿರಲಿಲ್ಲ. ಈ ಬಾರಿ ಚೆನ್ನೈಗೆ ಬಲ ತುಂಬಲು ರೈನಾ ತಂಡ ಸೇರಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಸೀಸನ್‌ನಲ್ಲಿ ಸಿಎಸ್‌ಕೆ ತಂಡದಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ, ಕೆ ಗೌತಮ್, ಚೇತೇಶ್ವರ ಪೂಜಾರ, ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಕೂಡ ಇದ್ದಾರೆ.

ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಫ್ರಾಂಚೈಸಿ ಒಂದು ಮುದ್ದಾದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿತ್ತು. ರಾಬಿನ್ ಉತ್ತಪ್ಪ ಅವರ ಪುಟಾಣಿ ಪುತ್ರ ನೀಲ್ ನೋಲನ್ ಯೆಲ್ಲೋ ಆರ್ಮಿಯ ಜೆರ್ಸಿ ಹಾಕಿ ಬ್ಯಾಟ್ ಹಿಡಿದುಕೊಂಡಿದ್ದ ಚಿತ್ರವದು.

ಗ್ಲೆನ್ ಮ್ಯಾಕ್ಸ್‌ವೆಲ್ ಕೈಯಿಂದ ಆರೆಂಜ್ ಕ್ಯಾಪ್ ಕಸಿದುಕೊಂಡ ಧವನ್ಗ್ಲೆನ್ ಮ್ಯಾಕ್ಸ್‌ವೆಲ್ ಕೈಯಿಂದ ಆರೆಂಜ್ ಕ್ಯಾಪ್ ಕಸಿದುಕೊಂಡ ಧವನ್

ಟ್ವಿಟರ್‌ನಲ್ಲಿ ಫೋಟೋ ಜೊತೆ 'ಸಿಂಹದ ಮರಿ ನೋಲನ್‌ಗೆ ವಿಶಿಲ್ ಹೊಡೆಯಿರಿ' ಎಂದು ಬರೆದುಕೊಳ್ಳಲಾಗಿತ್ತು. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರವನ್ನು ಉತ್ತಪ್ಪ ಕೂಡ ತನ್ನ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹಾಕಿಕೊಂಡಿದ್ದಾರೆ. 'ಮಗನಿಗೆ ಜೆರ್ಸಿ ಇಷ್ಟವಾಗಿದೆ. ಆತ ಹೋದಲ್ಲೆಲ್ಲಾ ಇದನ್ನು ಕೊಂಡೊಯ್ಯುತ್ತಾನೆ' ಎಂದು ಉತ್ತಪ್ಪ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Story first published: Monday, April 19, 2021, 17:12 [IST]
Other articles published on Apr 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X