IPL 2021: ಚೆನ್ನೈ ಸೂಪರ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಪಂದ್ಯದ ಹೈಲೈಟ್ಸ್‌

ಮುಂಬೈ: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಮತ್ತು ಪೃಥ್ವಿ ಶಾ ಸ್ಫೋಟಕ ಅರ್ಧ ಶತಕದೊಂದಿಗೆ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 10) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಸುಲಭ ಜಯ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್, 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 188 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌, 18.4 ಓವರ್‌ಗೆ ವಿಕೆಟ್ 3 ನಷ್ಟದಲ್ಲಿ 190 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಐಪಿಎಲ್ 2021: ಚೆನ್ನೈ vs ಡೆಲ್ಲಿ, ಸ್ಕೋರ್‌ಕಾರ್ಡ್

ಪಂದ್ಯದ ಪ್ರಮುಖ ಹೈಲೈಟ್ಸ್‌ ಇಲ್ಲಿದೆ
* ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಆಲ್ ರೌಂಡರ್ ಸುರೇಶ್ ರೈನಾ ಸ್ಫೋಟಕ ಅರ್ಧ ಶತಕ 54 ರನ್ (36)
* ಸಿಎಸ್‌ಕೆಯಿಂದ ರನ್ ಕೊಡುಗೆ: ಮೊಯೀನ್ ಅಲಿ 36, ಸುರೇಶ್ ರೈನಾ 54 (36), ಅಂಬಾಟಿ ರಾಯುಡು 23, ರವೀಂದ್ರ ಜಡೇಜಾ ಅಜೇಯ 26, ಸ್ಯಾಮ್ ಕರನ್ 34 (15) ರನ್
* ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಶಿಖರ್ ಧವನ್ 85 (54), ಪೃಥ್ವಿ ಶಾ 72 (38) ರನ್ ಸೇರ್ಪಡೆ
* ಡೆಲ್ಲಿಯಿಂದ ರನ್ ಕೊಡುಗೆ: ಶಿಖರ್ ಧವನ್ 85 (54), ಪೃಥ್ವಿ ಶಾ 72 (38), ರಿಷಭ್ ಪಂತ್ 15, ಮಾರ್ಕಸ್ ಸ್ಟೋಯ್ನಿಸ್ 14
* ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಿದ್ದ ಅಣ್ಣ ಟಾಮ್ ಅವರ ಓವರೊಂದರಲ್ಲಿ ಸಿಎಸ್‌ಕೆಯಲ್ಲಿ ಆಡಿದ್ದ ತಮ್ಮ ಸ್ಯಾಮ್ ಭರ್ಜರಿ 21 ರನ್ ಚಚ್ಚಿದ್ದು ಗಮನ ಸೆಳೆಯಿತು.
* ಚೆನ್ನೈ ಸೂಪರ್ ಕಿಂಗ್ಸ್‌ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಸ್ ವೋಕ್ಸ್ 2, ಆವೇಶ್ ಖಾನ್ 2, ರವಿಚಂದ್ರನ್ ಅಶ್ವಿನ್ 1, ಟಾಮ್ ಕರನ್ 1 ವಿಕೆಟ್ ಪಡೆದರೆ, ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನಲ್ಲಿ ಚೆನ್ನೈಯ ಶಾರ್ದೂಲ್ ಠಾಕೂರ್ 1, ಡ್ವೇನ್ ಬ್ರಾವೋ 1 ವಿಕೆಟ್‌ನಿಂದ ಗಮನ ಸೆಳೆದರು.

For Quick Alerts
ALLOW NOTIFICATIONS
For Daily Alerts
Story first published: Saturday, April 10, 2021, 23:39 [IST]
Other articles published on Apr 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X