For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಚೆನ್ನೈ vs ರಾಜಸ್ಥಾನ್ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು

IPL 2021: Chennai Super Kings vs Rajasthan Royals, Match 12 - Head-to-head record

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳ ನಾಯಕರು ವಿಕೆಟ್ ಕೀಪರ್. ಚೆನ್ನೈಗೆ ಅನುಭವಿ ಎಂಎಸ್ ಧೋನಿ ನಾಯಕರಾಗಿದ್ದರೆ, ರಾಜಸ್ಥಾನ್‌ಗೆ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ನಾಯಕ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ 7.30 PMಗೆ ಪಂದ್ಯ ಆರಂಭವಾಗಲಿದೆ. ಈವರೆಗೆ ನಡೆದಿರುವ ಪಂದ್ಯಗಳಲ್ಲಿ ಎರಡೂ ತಂಡಗಳು ಎರಡು ಪಂದ್ಯಗಳನ್ನಾಡಿದ್ದು, ಎರಡೂ ಕೂಡ ಒಂದೊಂದು ಗೆಲುವು ಕಂಡಿದೆ. ಸದ್ಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಚೆನ್ನೈ ತಂಡ 4ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್ ಐದನೇ ಸ್ಥಾನದಲ್ಲಿದೆ.

ಎರಡೂ ತಂಡಗಳ ಹಿಂದಿನ ಮುಖಾಮುಖಿ ಗಮನಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ಕೊಂಚ ಬಲಶಾಲಿ ತಂಡವಾಗಿ ಕಾಣಿಸಿದೆ. ಇತ್ತಂಡಗಳು ಒಟ್ಟಾರೆ 24 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 14 ಪಂದ್ಯಗಳಲ್ಲಿ ಸಿಎಸ್‌ಕೆ ಗೆದ್ದಿದ್ದರೆ, 10ರಲ್ಲಿ ಆರ್ಆರ್ ಮೇಲುಗೈ ಸಾಧಿಸಿದೆ.

2020 ಐಪಿಎಲ್‌ನಲ್ಲಿ ರಾಜಸ್ಥಾನ್ ಮತ್ತು ಚೆನ್ನೈ ಕಡೇಯ ಸಾರಿ ಮುಖಾಮುಖಿಯಾಗಿದ್ದ ಪಂದ್ಯದಲ್ಲಿ ಚೆನ್ನೈ 20 ಓವರ್‌ಗೆ 5 ವಿಕೆಟ್‌ ಕಳೆದು 125 ರನ್ ಗಳಿಸಿತ್ತು. ರಾಜಸ್ಥಾನ್ 17.3 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 126 ರನ್ ಬಾರಿಸಿ ಗೆದ್ದಿತ್ತು. ಈ ಬಾರಿ ಎರಡೂ ತಂಡಗಳಲ್ಲಿ ಪ್ರತಿಭಾನ್ವಿತ ಆಟಗಾರರಿರುವುದರಿಂದ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

Story first published: Monday, April 19, 2021, 13:03 [IST]
Other articles published on Apr 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+