Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಚೆನ್ನೈ vs ರಾಜಸ್ಥಾನ್, ಆಗಲಿರುವ ದಾಖಲೆಗಳ ಇಣುಕು ನೋಟ

IPL 2021: Chennai Super Kings vs Rajasthan Royals, Stats and Records Preview

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್ 19ರ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕಾದಾಡಲಿವೆ. ಈವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳೂ ತಲಾ ಒಂದೊಂದು ಪಂದ್ಯ ಗೆದ್ದಿದೆ.

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಯುವ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್‌ ನಡುವಿನ ಇಂದಿನ ಕದನದಲ್ಲಿ ಒಂದಿಷ್ಟು ದಾಖಲೆಗಳು ನಿರ್ಮಾಣವಾಗಲಿವೆ. ಆ ದಾಖಲೆಗಳ ಇಣುಕುನೋಟ ಇಲ್ಲಿದೆ.

ಚೆನ್ನೈ vs ರಾಜಸ್ಥಾನ್ ನಡುವಿನ ಪಂದ್ಯದಲ್ಲಿ ಆಗಲಿರುವ ದಾಖಲೆಗಳು
* ಚೆನ್ನೈ ನಾಯಕ ಧೋನಿ ಈವರೆಗೆ ಒಟ್ಟು 200 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಒಟ್ಟು 199 ಪಂದ್ಯಗಳಿಗೆ ತಂಡದ ನಾಯಕರಾಗಿದ್ದರು. ಇಂದಿನ ಪಂದ್ಯದೊಂದಿಗೆ ಧೋನಿ ಭರ್ತಿ 200 ಪಂದ್ಯಗಳಲ್ಲಿ ಸಿಎಸ್‌ಕೆ ನಾಯಕತ್ವ ವಹಿಸಿಕೊಂಡಾಗುತ್ತದೆ. 1 ಪಂದ್ಯದಲ್ಲಿ ಸುರೇಶ್ ರೈನಾ ನಾಯಕತ್ವ ವಹಿಸಿಕೊಂಡಿದ್ದರು.
* ಸುರೇಶ್ ರೈನಾ ಇನ್ನು 2 ಸಿಕ್ಸರ್‌ಗಳನ್ನು ಬಾರಿಸಿದರೆ 200 ಸಿಕ್ಸರ್‌ಗಳ ದಾಖಲೆ ಪೂರ್ಣಗೊಳ್ಳಲಿದೆ.
* ಇನ್ನು ಕೇವಲ ಎರಡು ಔಟ್‌ಗಳಿಗೆ ಕಾರಣರಾದರೆ, ಐಪಿಎಲ್‌ನಲ್ಲಿ ಒಟ್ಟು 150 ಔಟ್‌ಗಳಿಗೆ ಕಾರಣವಾದ ವಿಶೇಷ ದಾಖಲೆ ಧೋನಿ ಹೆಸರಿಗೆ ಸೇರ್ಪಡೆಯಾಗಲಿದೆ (39 ಸ್ಟಂಪಿಂಗ್, 109 ಕ್ಯಾಚ್‌ಗಳು).
* ಸಿಎಸ್‌ಕೆ ವೇಗಿ ಶಾರ್ದೂಲ್ ಠಾಕೂರ್‌ ಇನ್ನು ಎರಡು ವಿಕೆಟ್‌ಗಳನ್ನು ಪಡೆದರೆ ಐಪಿಎಲ್‌ನಲ್ಲಿ 50 ವಿಕೆಟ್‌ಗಳ ದಾಖಲೆ ನಿರ್ಮಿಸಲಿದ್ದಾರೆ.

Story first published: Monday, April 19, 2021, 15:04 [IST]
Other articles published on Apr 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+