ಎರಡನೇ ವರದಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸದಸ್ಯರ ವರದಿ ನೆಗೆಟಿವ್

ಕೊಲ್ಕತ್ತಾ ನೈಟ್ ರೈಡರ್ಸ್‌ನ ಇಬ್ಬರು ಆಟಗಾರರು ಕೊರೊನಾ ವೈರಸ್ ಸೋಂಕಿಗೆ ತುತ್ತಾದ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ಕಡೆಯಿಂದಲೂ ಆತಂಕಕಾರಿ ಸುದ್ದಿ ಹೊರ ಬಿದ್ದಿತ್ತು. ತಂಡದ ಮೂವರು ನಾನ್ ಪ್ಲೆಯಿಂಗ್ ಸ್ಟಾಫ್‌ಗಳ ಕೊರೊನಾ ಸೋಂಕಿನ ವರದಿ ಪಾಸಿಟಿವ್ ಬಂದಿತ್ತು. ಆದರೆ ಇದು ಎರಡನೇ ವರದಿಯಲ್ಲಿ ನೆಗೆಟಿವ್ ಎಂದು ಬಂದಿದ್ದು ವರದಿಯಲ್ಲಿ ತಪ್ಪಾಗಿರಬಹುದು ಎಂದು ಹೇಳಲಾಗುತ್ತಿದೆ.
ಭಾನುವಾರ ನಡೆದ ಕೊರೊನಾ ಪರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್, ಬೌಲಿಂಗ್ ಕೋಚ್ ಎಲ್ ಬಾಲಾಜಿ ಹಾಗೂ ತಂಡದ ಬಸ್ ಕ್ಲೀನರ್‌ಗೆ ಕೊರೊನಾ ವೈರಸ್ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ ಈ ಮೂವರು ಪ್ರತ್ಯೇಕಗೊಂಡು ಸೋಮವಾರ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಿದ್ದರು.
ಆದರೆ ಸೋಮವಾರದ ಪರೀಕ್ಷೆಯಲ್ಲಿ ಈ ಮೂವರ ವರದಿ ಕೂಡ ನೆಗೆಟಿವ್ ಬಂದಿದೆ. ಹೀಗಾಗಿ ಬಿಸಿಸಿಐನ ಉನ್ನತ ಮೂಲಗಳು ಭಾನುವಾರದ ವರದಿ "ಫಾಲ್ಸ್ ಪಾಸಿಟಿವ್" ಎಂದು ಘೋಷಿಸಿದೆ.
ಇನ್ನು ಮತ್ತೊಂದೆಡೆ ಕೆಕೆಆರ್ ತಂಡದಲ್ಲಿ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಕೊರೊನಾ ವೈರಸ್‌ಗೆ ತುತ್ತಾದ ಬಳಿಕ ಎಲ್ಲಾ ಸದಸ್ಯರ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದೆ. ಈ ವರದಿಯಲ್ಲಿ ಕೆಕೆಆರ್ ತಂಡದ ಉಳಿದ ಎಲ್ಲಾ ಸದಸ್ಯರು ಕೂಡ ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಆಶಾವಾದ ಮೂಡುವಂತೆ ಮಾಡಿದೆ.
ಕೆಕೆಆರ್‌ನ ಇಬ್ಬರು ಆಟಗಾರರು ಕೊರೊನಾ ವೈರಸ್‌ಗೆ ತುತ್ತಾದ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ಐಪಿಎಲ್ ಪಂದ್ಯವನ್ನು ಮುಂದೂಡಲಾಗಿದೆ. ಕೆಕೆಆರ್ ರಾಹೂ ಆರ್‌ಸಿಬಿ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಬೇಕಿತ್ತು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications