ಸಿಎಸ್‌ಕೆ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ವರದಿ ಕೊರೊನಾ ಪಾಸಿಟಿವ್

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮೂವರು ನಾನ್ ಪ್ಲೇಯಿಂಗ್ ಸ್ಟಾಫ್‌ಗಳ ಕೊರೊನಾ ಪರೀಕ್ಷೆ ಮೊದಲಿಗೆ ಪಾಸಿಟಿವ್ ಬಂದಿತ್ತು. ಮರುದಿನ ನಡೆಸಿದ ಪರೀಕ್ಷೆಯಲ್ಲಿ ಇದು ನೆಗೆಟಿವ್ ಎಂದಾಗಿತ್ತು. ಇದಾದ ನಂತರ ಈಗ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಅವರ ಕೊರೊನಾ ಪರೀಕ್ಷೆಯ ವರದಿಪಾಸಿಟಿವ್ ಎಂದು ಬಂದಿದೆ.
ಭಾನುವಾರ ಕೊರೊನಾ ಪರೀಕ್ಷೆಯನ್ನು ನಡೆಸಿದ್ದ ನಂತರ ತಂಡದ ಮೂವರು ನಾನ್ ಪ್ಲೇಯಿಂಗ್ ಸ್ಟಾಫ್‌ಗಳಾದ ಸಿಇಒ ಕಾಸಿ ವಿಶ್ವನಾಥ್, ಬೌಲಿಂಗ್ ಕೋಚ್ ಎಲ್ ಬಾಲಾಜಿ ಹಾಗೂ ತಂಡದ ಬಸ್‌ನ ಕ್ಲೀನರ್ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಆದರೆ ಸೋಮವಾರ ನಡೆಸಿದ ಪರೀಕ್ಷೆಯಲ್ಲಿ ಇದು ನೆಗೆಟಿವ್ ಎಂದಾಗಿತ್ತು.
ಈ ವರದಿಯ ಬಗ್ಗೆ ಮಾಧ್ಯಮಗಳ ಬಳಿ ಮಾಹಿತಿಯನ್ನು ಹಂಚಿಕೊಂಡಿದ್ದ ಬಿಸಿಸಿಐನ ಸಿಬ್ಬಂದಿಯಿಬ್ಬರು ಇದೊಂದು ಫಾಲ್ಸ್ ಪಾಸಿಟಿವ್ ರಿಪೋರ್ಟ್ ಎಂದು ಹೇಳಿದ್ದರು. ಈಗ ಮತ್ತೊಂದು ಇದೇ ರೀತಿಯ ವರದಿ ಬಂದಿದ್ದು ತಂಡದಲ್ಲಿ ಗೊಂದಲವುಂಟಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಅವರ ಕೊರೊನಾ ಪರೀಕ್ಷೆಯ ವರದಿ ಮಂಗಳವಾರ ಪಾಸಿಟಿವ್ ಎಂದು ಬಂದಿದೆ. ಆದರೆ ಎರಡನೇ ಪರೀಕ್ಷೆಯಲ್ಲಿ ಇದು ನೆಗೆಟಿವ್ ಬರುವ ನಿರೀಕ್ಷೆಯನ್ನು ತಂಡ ವ್ಯಕ್ತಪಡಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications