Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜೆರ್ಸಿಯಿಂದ ಲೋಗೋ ತೆಗಿಸಲು ಅಲಿ ಕೋರಿಕೊಂಡಿಲ್ಲ: ಸಿಎಸ್‌ಕೆ

IPL 2021: CSK confirm Moeen Ali made no request for removal of logo

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (ಐಪಿಎಲ್) ಪರ ಆಡುವ ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿ ಇತ್ತೀಚೆಗೆ ಜೆರ್ಸಿಯ ಲೋಗೋ ವಿಚಾರಕ್ಕಾಗಿ ಗಮನ ಸೆಳೆದಿದ್ದರು. ಸಿಎಸ್‌ಕೆಯ ತಮ್ಮ ಜೆರ್ಸಿಯಿಂದ ಆಲ್ಕೋಹಾಲ್ ಬ್ರ್ಯಾಂಡ್‌ನ ಲೋಗೋ ತೆಗೆಯುವಂತೆ ಅಲಿ ಸಿಎಸ್‌ಕೆಯನ್ನು ಕೋರಿಕೊಂಡಿದ್ದಾರೆ ಎಂದು ಕೆಲವು ವರದಿಗಳು ಪ್ರಕಟವಾಗಿದ್ದವು.

ಚೆನ್ನೈ ಸೂಪರ್ ಕಿಂಗ್ಸ್‌ ಜೆರ್ಸಿ ಮೇಲೆ SNJ 10000 ಬ್ರ್ಯಾಂಡ್ ಜೊತೆಗೆ ಇನ್ನೊಂದಿಷ್ಟು ಬ್ರ್ಯಾಂಡ್‌ಗಳ ಲೋಗೋಗಳಿವೆ. SNJ 10000 ಅನ್ನೋದು ಚೆನ್ನೈ ಮೂಲದ ಎಸ್‌ಎನ್‌ಜೆ ಡಿಸ್ಟಿಲರೀಸ್ ಕಂಪನಿಯ ಮದ್ಯದ ಬ್ರ್ಯಾಂಡ್‌. ಈ ಕಂಪನಿಯ ಲೋಗೋವನ್ನು ತಮ್ಮ ಜೆರ್ಸಿಯಿಂದ ತೆಗೆಯುವಂತೆ ಮೊಯೀನ್ ಅಲಿ ಕೋರಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು.

ಆದರೆ ಸಿಎಸ್‌ಕೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಜೆರ್ಸಿಯಿಂದ ಆಲ್ಕೋಹಾಲ್ ಬ್ರ್ಯಾಂಡ್‌ನ ಲೋಗೋ ತೆಗೆಯುವಂತೆ ಮೊಯೀನ್ ಅಲಿಯಿಂದ ತಮಗೆ ಯಾವುದೇ ರೀತಿಯ ವಿನಂತಿ ಬಂದಿಲ್ಲ ಎಂದು ನ್ಯೂಸ್ ಏಜೆನ್ಸಿ ಐಎಎನ್‌ಎಸ್ ಜೊತೆ ಸಿಎಸ್‌ಕೆ ಫ್ರಾಂಚೈಸಿ ಹೇಳಿದೆ.

ಐಎಎನ್‌ಎಸ್ ಜೊತೆ ಮಾತನಾಡಿದ ಸಿಎಸ್‌ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಸಿ ವಿಶ್ವನಾಥನ್, 'ಯಾವುದೇ ಲೋಗೋವನ್ನು ಸಿಎಸ್‌ಕೆ ಜೆರ್ಸಿಯಿಂದ ತೆಗೆದು ಹಾಕುವಂತೆ ಮೊಯೀನ್ ಅಲಿಯಿಂದ ಅಂಥ ಯಾವುದೇ ವಿನಂತಿ ಬಂದಿಲ್ಲ,' ಎಂದಿದ್ದಾರೆ.

ಕಳೆದ ವಾರವಷ್ಟೇ ಅಲಿ, ಧೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಧೋನಿಯ ಶಾಂತ ಸ್ವಭಾವ ಇತರ ಆಟಗಾರರಿಗೂ ಶಾಂತತೆಯ ಪಾಠ ಹೇಳಿಕೊಡುತ್ತಿದೆ, ಅದರಿಂದ ತಂಡದ ಆಟಗಾರರಿಗೆ ಅನುಕೂಲವಾಗುತ್ತಿದೆ ಎಂದಿದ್ದರು.

Story first published: Tuesday, April 6, 2021, 17:10 [IST]
Other articles published on Apr 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+