ಐಪಿಎಲ್ 2021: ಸಿಎಸ್‌ಕೆ ಉಳಿಸಿಕೊಂಡಿರುವ, ಕೈ ಬಿಟ್ಟಿರುವ ಆಟಗಾರರ ಪಟ್ಟಿ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮೂರು ಬಾರಿಯ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ (ಸಿಎಸ್‌ಕೆ) 2021ರ ಐಪಿಎಲ್ ಸೀಸನ್‌ಗೆ ಸಂಬಂಧಿಸಿ ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡಲಿರುವ ಆಟಗಾರರ ಸಂಪೂರ್ಣ ಪಟ್ಟಿ ಪ್ರಕಟಿಸಿದೆ.
ಸಿಎಸ್‌ಕೆ ಬಿಟ್ಟುಕೊಟ್ಟಿರುವ ಆಟಗಾರರ ಪಟ್ಟಿಯಲ್ಲಿ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್, ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರಿ ಒಟ್ಟು ಆರು ಹೆಸರುಗಳಿವೆ. ನಾಯಕ ಎಂಎಸ್ ಧೋನಿ ಸೇರಿ ಇಮ್ರಾನ್ ತಾಹಿರ್, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಫಾಫ್ ಡು ಪ್ಲೆಸಿಸ್ ಇಂಥ ಪ್ರಮುಖ ಆಟಗಾರರನ್ನು ಸಿಎಸ್‌ಕೆ ಉಳಿಸಿಕೊಂಡಿದೆ.
ಸಿಎಸ್‌ಕೆ ಕೈಬಿಟ್ಟಿರುವ ಆಟಗಾರರು
ಪೀಯೂಷ್ ಚಾವ್ಲಾ, ಕೇದಾರ್ ಜಾಧವ್, ಹರ್ಭಜನ್ ಸಿಂಗ್, ಮುರಳಿ ವಿಜಯ್, ಮೋನು ಕುಮಾರ್ ಸಿಂಗ್, ಶೇನ್ ವಾಟ್ಸನ್ (ನಿವೃತ್ತಿ).
ಸಿಎಸ್‌ಕೆ ಉಳಿಸಿಕೊಂಡಿರುವ ಆಟಗಾರರು
ಎಂಎಸ್ ಧೋನಿ, ರವೀಂದ್ರ ಜಡೇಜಾ, ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್, ಸ್ಯಾಮ್ ಕರನ್, ಡ್ವೇನ್ ಬ್ರಾವೋ, ಜೋಶ್ ಹ್ಯಾಝಲ್ವುಡ್, ಲುಂಗಿ ಎನ್‌ಗಿಡಿ, ಅಂಬಾಟಿ ರಾಯುಡು, ಕರ್ಣ್ ಶರ್ಮಾ, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ಋತುರಾಜ್ ಗಾಯಕ್ವಾಡ್, ಎನ್ ಜಗದೀಶನ್, ಇಮ್ರಾನ್ ತಾಹಿರ್, ದೀಪಕ್ ಚಾಹರ್, ಕೆಎಂ ಆಸಿಫ್, ಆರ್ ಸಾಯ್‌ಕಿಶೋರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications