For Quick Alerts
ALLOW NOTIFICATIONS  
For Daily Alerts
 

ಅಣ್ಣ ಟಾಮ್‌ನ ಓವರ್‌ನಲ್ಲಿ ತಮ್ಮ ಸ್ಯಾಮ್ ಕರನ್ ಸ್ಫೋಟಕ ಬ್ಯಾಟಿಂಗ್!

IPL 2021, CSK vs DC: Sam Curran Scored 21 Runs Of His Brother Tom Curran Over

ಮುಂಬೈ: ಕ್ರಿಕೆಟ್‌ನಲ್ಲಿ ಅಣ್ಣ, ತಮ್ಮಂದಿರು ಒಂದೇ ತಂಡದಲ್ಲಿ ಅಥವಾ ಎದುರು ಬದುರು ತಂಡದಲ್ಲಿ ಆಡೋದು ಕಾಣಸಿಗೋದು ಅಪರೂಪ. ಆದರೆ ಶನಿವಾರ (ಏಪ್ರಿಲ್ 10) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಪಂದ್ಯದಲ್ಲಿ ಅಣ್ಣ-ತಮ್ಮಂದಿರು ಮುಖಾಮುಖಿಯಾಗಿ ಆಡಿದ ಅಪರೂದ ದೃಶ್ಯ ಕಾಣಸಿಕ್ಕಿತು.

ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್‌ ಸಹೋದರರ ಜೋಡಿ ಸ್ಯಾಮ್ ಕರನ್ ಮತ್ತು ಟಾಮ್ ಕರಣ್ ಪರಸ್ಪರ ವಿರುದ್ಧ ತಂಡಗಳಲ್ಲಿ ಆಡಿದ್ದು ಕಾಣಿಸಿತ್ತು. ಅಣ್ಣ ಟಾಮ್ ಡೆಲ್ಲಿ ಪರ ಆಡಿದ್ದರೆ, ತಮ್ಮ ಸ್ಯಾಮ್ ಚೆನ್ನೈ ಪರ ಕಣಕ್ಕಿಳಿದಿದ್ದರು.

ಅದರಲ್ಲೂ ಅಣ್ಣ ಟಾಮ್ ಅವರ ಓವರೊಂದರಲ್ಲಿ ತಮ್ಮ ಸ್ಯಾಮ್ ಭರ್ಜರಿ 21 ರನ್ ಚಚ್ಚಿದ್ದು ಗಮನ ಸೆಳೆಯಿತು. ಸಿಎಸ್‌ಕೆ ಪರ 8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಸ್ಯಾಮ್ 15 ಎಸೆತಗಳಲ್ಲಿ 34 ರನ್ ಬಾರಿಸಿದ್ದರು. ಇದರಲ್ಲಿ ಫೋರ್ಸ್, 2 ಸಿಕ್ಸರ್ ಸೇರಿತ್ತು.

22ರ ಹರೆಯದ ಸ್ಯಾಮ್ ಕಳೆದ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲೇ ಇದ್ದರೆ, 26ರ ಹರೆಯದ ಟಾಮ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಸಿಎಸ್‌ಕೆ 20 ಓವರ್‌ಗೆ 188 ರನ್ ಬಾರಿಸಿತ್ತು.

Story first published: Saturday, April 10, 2021, 22:32 [IST]
Other articles published on Apr 10, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+