
ಐಪಿಎಲ್‌ನಲ್ಲಿ ಇಂದು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇಆಫ್‌ಗೆ ಪ್ರವೇಶ ಪಡೆದಿದ್ದು ಟಾಪ್ 2ನಲ್ಲಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ. ಪ್ಲೇಆಫ್‌ಗೂ ಮುನ್ನ ಗೆಲುವಿನೊಂದಿಗೆ ಲೀಗ್ ಹಂತವನ್ನು ಮುಗಿಸುವ ಗುರಿಯಿಟ್ಟುಕೊಂಡಿದೆ ಧೋನಿ ಪಡೆ. ಮತ್ತೊಂದೆಡೆ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಕೂಡ ಈ ಬಾರಿಯ ಆವೃತ್ತಿಯನ್ನು ಗೆಲುವನೊಂದಿಗೆ ಅಂತ್ಯಗೊಳಿಸುವ ಲೆಕ್ಕಾಚಾರ ಮಾಡಿಟ್ಟುಕೊಂಡಿದೆ.
ಇಂದು ಮಧ್ಯಾಹ್ನ 3:30ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಎರಡು ತಮಡಗಳು ಮುಖಾಮುಖಿಯಾಗಲಿದೆ. ಪಂಜಾಬ್ ಕಿಂಗ್ಸ್ ತಂಡ 10 ಅಂಕಗಳೊಂದಿಗೆ ಈಗ 6ನೇ ಸ್ಥಾನದಲ್ಲಿದೆ. ಈವರೆಗೆ ಪಂಜಾಬ್ 13 ಪಂದ್ಯಗಳನ್ನು ಆಡಿದ್ದು 5 ಗೆಲುವು ಹಾಗೂ 8 ಸೋಲನ್ನು ಕಂಡಿದೆ. ಪ್ಲೇಆಫ್‌ಗೇರುವ ಅವಕಾಶ ಪಂಜಾಬ್ ಕಿಂಗ್ಸ್‌ಗೆ ಬಹಳ ಕಡಿಮೆಯಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಗೆಲುವು ಕಂಡು ಟೂರ್ನಿ ಅಂತ್ಯಗೊಳಿಸಲು ಪಂಜಾಬ್ ಬಯಸುತ್ತಿದೆ.
ಮತ್ತೊಂದೆಡೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ 18 ಅಂಕಗಳೊಂದಿಗೆ 2ನೇ ಸ್ಥಾನವನ್ನು ಪಡೆದುಕೊಂಡಿದೆ. ತಂಡ ಈವರೆಗೆ 13 ಪಂದ್ಯಗಳನ್ನು ಆಡಿದ್ದು 9 ಗೆಲುವು ಹಾಗೂ 4 ಸೋಲು ಕಂಡಿದೆ. ಹೀಗಾಗಿ ಸಿಎಸ್‌ಕೆ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ನಡುವಿನ ಈ ಪಂದ್ಯ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದೇ ಹೇಳಬಹುದು. ಬೌಂಡರಿ ಲೈನ್ ಕೂಡ ಹತ್ತಿರದಲ್ಲಿರುವುದರಿಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಬೌಂಡರಿ, ಸಿಕ್ಸ್ ಮತ್ತು ರನ್ ಸಿಡಿಸಲು ಸಹಕಾರಿಯಾಗಲಿದೆ. ಇನ್ನು ಈ ಪಿಚ್‌ನಲ್ಲಿ ಬೌಲರ್‌ಗಳು ತುಸು ಹೆಚ್ಚಿನ ಶ್ರಮವಹಿಸಿ ಬೌಲಿಂಗ್ ಮಾಡಬೇಕಾದ ಅಗತ್ಯತೆಯಿದೆ, ಬೌಲರ್‌ಗಳಿಗೆ ವಿಕೆಟ್ ಬೀಳುವುದು ಕಷ್ಟಕರವಾಗಿರಲಿದೆ, ಅದರಲ್ಲೂ ವೇಗಿಗಳಿಗೆ ಈ ಪಿಚ್ ಹೆಚ್ಚಾಗಿ ಕಾಡಲಿದೆ.
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಸುತ್ತಿನ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದಾಗ ಚೆನ್ನೈ ಭರ್ಜರಿ 6 ವಿಕೆಟ್‌ಗಳ ಅಂತರದಿಂದ ಪಂಜಾಬ್ ಕಿಂಗ್ಸ್‌ಗೆ ಸೋಲಿನ ರುಚಿ ತೋರಿಸಿತ್ತು. ಇನ್ನು ಈ ಪಂದ್ಯಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಸಂಭಾವ್ಯ ಆಡುವ ಬಳಗವನ್ನು ನೋಡೋಣ
ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್(ನಾಯಕ/ ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ಪ್ರಬ್ಸಿಮ್ರಾನ್ ಸಿಂಗ್, ನಿಕೋಲಸ್ ಪೂರನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಹರ್ ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ಫಾಫ್ ಡು ಪ್ಲೆಸಿಸ್, ಋತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ/ಸುರೇಶ್ ರೈನಾ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಜಲ್‌ವುಡ್