Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಿಎಸ್‌ಕೆ ಜೆರ್ಸಿಯೊಂದಿಗೆ ಫೋಟೋ ಶೇರ್ ಮಾಡಿದ ಡೇವಿಡ್ ವಾರ್ನರ್

IPL 2021: David Warner shares photo in CSK jersey and deletes it later

ಅಬುಧಾಬಿ: ಅಕ್ಟೋಬರ್ 15ರಂದು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದೆ. ಪ್ರಶಸ್ತಿ ಸುತ್ತಿನ ಕದನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸಜ್ಜಾಗಿವೆ. ಈ ಪಂದ್ಯಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಸಿಎಸ್‌ಕೆ ಜೆರ್ಸಿ ಧರಿಸಿರುವ ಫೋಟೋ ಶೇರ್ ಮಾಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಈ ಸೀಸನ್‌ನಲ್ಲಿ ಕೊನೇ ಪಂದ್ಯ ಆಡಿರುವ ಡೇವಿಡ್ ವಾರ್ನರ್, ಮುಂದಿನ ಸೀಸನ್‌ನಲ್ಲಿ ಎಸ್‌ಆರ್‌ಎಚ್‌ ಪರ ಆಡುವ ಸಾಧ್ಯತೆಯಿಲ್ಲ. ಹೀಗಾಗಿ ವಾರ್ನರ್ ಬೇರೆ ಫ್ರಾಂಚೈಸಿ ಪಾಲಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇದರ ಬೆನ್ನಲ್ಲೇ ವಾರ್ನರ್ ಪೋಸ್ಟ್ ಕುತೂಹಲ ಮೂಡಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಾರ್ನರ್ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಇದರಲ್ಲಿ ವಾರ್ನರ್ ತನ್ನ ಪುತ್ರಿಯನ್ನು ಭುಜದ ಮೇಲೆ ಕೂರಿಸಿಕೊಂಡಿರುವ ಚಿತ್ರವಿದೆ. ಈ ಚಿತ್ರಕ್ಕೆ ಸಿಎಸ್‌ಕೆ ಜೆರ್ಸಿ ಎಡಿಟ್ ಮಾಡಲಾಗಿದೆ. ವಾರ್ನರ್ ಹೇಳುವ ಪ್ರಕಾರ ಈ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡುವಂತೆ ಸಿಎಸ್‌ಕೆ ಅಭಿಮಾನಿಯೊಬ್ಬರು ಕೋರಿಕೊಂಡಿದ್ದರಂತೆ.

ವಾರ್ನರ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, "ಇವತ್ತಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ, ಯಾರಿಗೆ ಬೆಂಬಲಿಸಬೇಕೋ ಗೊತ್ತಿಲ್ಲ, ಆದರೆ ಈ ಚಿತ್ರವನ್ನು ಪೋಸ್ಟ್ ಮಾಡಲು ಕೇಳಿದ ಅಭಿಮಾನಿಗೆ ನಾನು ಇಲ್ಲ ಎನ್ನಲಾಗಲಿಲ್ಲ," ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಕೂಡ ಲೈಕ್ ಕೊಟ್ಟಿದ್ದರು. ಆದರೆ ವಾರ್ನರ್ ಈ ಪೋಸ್ಟ್‌ ಅನ್ನು ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಿದ್ದಾರೆ.

ಎಸ್‌ಆರ್‌ಎಚ್ ಪರ ಹೆಚ್ಚು ರನ್ ಬಾರಿಸಿದ ದಾಖಲೆ ಡೇವಿಡ್ ವಾರ್ನರ್ ಅವರದ್ದು. ಆದರೆ ಈ ಸೀಸನ್‌ನಲ್ಲಿ ವಾರ್ನರ್ ಫಾರ್ಮ್ ಕಳೆದುಕೊಂಡಿದ್ದರು. ಹೀಗಾಗಿ ಕೆಲವು ಪಂದ್ಯಗಳಿಂದ ವಾರ್ನರ್ ಅವರನ್ನು ಹೊರಗಿಡಲಾಗಿತ್ತು. ನಾಯಕತ್ವದಿಂದಲೂ ಕೆಳಗಿಳಿಸಲಾಗಿತ್ತು. ಇದರಿಂದ ಬೇಸತ್ತ ವಾರ್ನರ್ ತಾನೇ ತಂಡದಿಂದ ದೂರ ಉಳಿಯುವ ಯೋಚನೆ ತೋರಿಕೊಂಡಿದ್ದರು.

Story first published: Friday, October 15, 2021, 17:19 [IST]
Other articles published on Oct 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+