For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಪಂದ್ಯದಲ್ಲೇ ಗೆಳತಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್: ವಿಡಿಯೋ

IPL 2021: Deepak Chahar proposes to his girlfriend during CSK vs PBKS Match
ಚಹರ್ ತನ್ನ ಹುಡುಗಿಗೆ ಸ್ಟೇಡಿಯಂನಲ್ಲೇ ಲವ್ ಪ್ರಪೋಸ್ ಮಾಡಿದ್ದನ್ನ ನೋಡಿ ಎಲ್ರೂ ಶಾಕ್ | Oneindia Kannada

ದುಬೈ: ಚೆನ್ನೈ ಸೂಪರ್ ಕಿಂಗ್ಸ್‌ ವೇಗಿ ದೀಪಕ್ ಚಾಹರ್ ಶೀಘ್ರ ಒಂಟಿ ಜೀವನದಿಂದ ಜಂಟಿ ಜೀವನಕ್ಕೆ ಕಾಲಿರಿಸುವುದರಲ್ಲಿದ್ದಾರೆ. ಗುರುವಾರ (ಅಕ್ಟೋಬರ್ 7) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯದ ವೇಳೆ ಚಾಹರ್ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಚಾಹರ್ ಪ್ರಪೋಸ್‌ಗೆ ಅವರ ಗೆಳತಿ ಒಪ್ಪಿಗೆ ಕೂಡ ನೀಡಿದ್ದಾರೆ. ದೀಪಕ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದು ಈ ಮೊದಲೇ ಸುದ್ದಿಯಾಗಿತ್ತು. ಆದರೆ ಚಾಹಲರ್ ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿರಲಿಲ್ಲ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಐಪಿಎಲ್ 53ನೇ ಪಂದ್ಯಕ್ಕಾಗಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಪಂಜಾಬ್ 6 ವಿಕೆಟ್ ಸುಲಭ ಜಯ ಗಳಿಸಿತು. ಪಂದ್ಯದಲ್ಲಿ ಚೆನ್ನೈ ಸೋತರೂ ಕೂಡ ಪ್ರೇಮ ನಿವಾದನೆಯಲ್ಲಿ ಮಾಡಿ ಗೆಳತಿಯಿಂದ ಗ್ರೀನ್‌ ಸಿಗ್ನಲ್ ಪಡೆದ ದೀಪಕ್ ಚಾಹರ್ ಪ್ರೀತಿ ಗೆದ್ದರು.

ಪಂಜಾಬ್‌ ಕಿಂಗ್ಸ್‌ಗೆ ಸುಲಭ ಜಯ

ಚೆನ್ನೈ ಸೂಪರ್ ಕಿಂಗ್ಸ್ ಪರ ಫಾಫ್ ಡು ಪ್ಲೆಸಿಸ್ 55 ಎಸೆತಗಳಲ್ಲಿ 76 ರನ್ ರನ್ ಬಾರಿಸಿ ತಂಡಕ್ಕೆ ಬೆಂಬಲಿಸಿದರಾದರೂ, ಕೆಎಲ್ ರಾಹುಲ್ 42 ಎಸೆತಗಳಲ್ಲಿ 98 ರನ್ ಬಾರಿಸಿದ್ದರಿಂದ ಪಂದ್ಯವನ್ನು ಪಂಜಾಬ್ ಸುಲಭವಾಗಿ ಗೆದ್ದಿತು. ಇತ್ತ ದೀಪಕ್-ಅವರ ಗೆಳತಿಯ ಪ್ರೇಮದ ದೃಶ್ಯ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತು. ಅಂದ್ಹಾಗೆ ತನ್ನ ಗೆಳತಿಯ ಹೆಸರೇನೆಂದು ದೀಪಕ್ ಎಲ್ಲೂ ಹೇಳಿಲ್ಲ. ಆದರೆ ಚಾಹರ್ ಗೆಳತಿ ಹೆಸರು ಜಯ ಭಾರದ್ವಾಜ್ ಎಂದು ಹೇಳಲಾಗುತ್ತಿದೆ. ಚೆನ್ನೈ vs ಪಂಜಾಬ್ ಮುಗಿಯುತ್ತಲೇ ಇತ್ತ ದೀಪಚ್ ಚಾಹರ್ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ತನ್ನ ಗೆಳತಿಯ ಬಳಿಗೆ ಬಂದು ಮಂಡಿಯೂರಿ ಪ್ರಪೋಸ್ ಮಾಡಿದರು. ಇದಕ್ಕೆ ಆಕೆ ಖುಷಿಯಿಂದ ಒಪ್ಪಿಗೆಯೂ ನೀಡಿದ್ದಾರೆ. ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಾಹರ್ ಗೆಳತಿ ಬಿಗ್‌ಬಾಸ್ ಸ್ಪರ್ಧಿಯ ತಂಗಿ!

ಚಾಹರ್ ಗೆಳತಿ ಬಿಗ್‌ಬಾಸ್ ಸ್ಪರ್ಧಿಯ ತಂಗಿ!

ದೀಪಕ್ ಚಾಹರ್ ಈ ಮೊದಲೇ ಡೇಟಿಂಗ್ ವಿಚಾರಕ್ಕಾಗಿ ಸುದ್ದಿಯಾಗಿದ್ದರು. ಬಿಗ್‌ ಬಾಸ್ ಸ್ಪರ್ಧಿ ಸಿದ್ಧಾರ್ಥ್ ಭಾರದ್ವಾಜ್ ಅವರ ತಂಗಿ ಜಯ ಭಾರದ್ವಾಜ್ ಜೊತೆಗೆ ಚಾಹರ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗಾಳಿ ಸುದ್ದಿಯಾಗಿತ್ತು. ದೀಪಕ್ ಮತ್ತು ಜಯ ಶೀಘ್ರವೇ ಮದುವೆ ಕೂಡ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅದೇ ಜಯ ಅವರಿಗೆ ಚಾಹರ್ ಈಗ ಪ್ರಪೋಸ್ ಮಾಡಿದ್ದಾರೆ. ಜಯ ಭಾರದ್ವಾಜ್ ಅವರು ಟಿವಿ ಸರಣಿಗಳಲ್ಲಿ ಒಂದಿಷ್ಟು ಸಾರಿ ಕಾಣಿಸಿಕೊಂಡಿದ್ದರು. ಬಿಗ್‌ ಬಾಸ್ 5, ಸ್ಪ್ಲಿಟ್ಸ್‌ವಿಲ್ಲಾ-2 ಮೊದಲಾದ ಕಾರ್ಯಕ್ರಮಗಳಲ್ಲಿ ಜಯ ಕಾಣಿಸಿಕೊಂಡದ್ದರು. ಕೆಲವೊಂದು ಮೂಲಗಳ ಪ್ರಕಾರ, ದೀಪಕ್ ಮತ್ತು ಜಯ ತಮ್ಮ ಬದುಕಿನ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರ ನಿಶ್ಚಿತಾರ್ಥ ಶೀಘ್ರವೇ ನಡೆಯುವುದರಲ್ಲಿದೆ ಎಂದು ಹೇಳಲಾಗುತ್ತಿದೆ.

ಪಂಜಾಬ್ vs ಚೆನ್ನೈ ಸ್ಕೋರ್‌ ಪಟ್ಟಿ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್‌, ಋತುರಾಜ್ ಗಾಯಕ್ವಾಡ್‌ 12, ಫಾಫ್ ಡು ಪ್ಲೆಸಿಸ್ 76, ರಾಬಿನ್ ಉತ್ತಪ್ಪ 2, ಮೊಯೀನ್ ಅಲಿ 0, ಅಂಬಟಿ ರಾಯುಡು 4, ಎಂಎಸ್ ಧೋನಿ 12, ರವೀಂದ್ರ ಜಡೇಜಾ 15, ಡ್ವೇನ್ ಬ್ರಾವೋ 4 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 134 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಕೆಎಲ್ ರಾಹುಲ್ 98 (42 ಎಸೆತ), ಮಯಾಂಕ್ ಅಗರ್ವಾಲ್ 12, ಐಡೆನ್ ಮಾರ್ಕ್ರಮ್ 13, ಸರ್ಫರಾಜ್ ಖಾನ್ 0, ಶಾರುಖ್ ಖಾನ್ 8, ಮೊಯಿಸ್ ಹೆನ್ರಿಕ್ಸ್ 3 ರನ್‌ನೊಂದಿಗೆ 13 ಓವರ್‌ಗೆ 4 ವಿಕೆಟ್‌ ಕಳೆದು 139 ರನ್ ಗಳಿಸಿ ಗೆಲುವನ್ನಾಚರಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ ಕಿಂಗ್ಸ್‌ನ ಮೊಹಮ್ಮದ್ ಶಮಿ 1, ಅರ್ಷದೀಪ್ ಸಿಂಗ್ 2, ಕ್ರಿಸ್ ಜೋರ್ಡನ್ 2, ರವಿ ಬಿಷ್ಣೋಯ್ 1 ವಿಕೆಟ್ ಪಡೆದರೆ, ಪಂಜಾಬ್ ಕಿಂಗ್ಸ್‌ ಇನ್ನಿಂಗ್ಸ್‌ನಲ್ಲಿ ಚೆನ್ನೈಯ ದೀಪಕ್ ಚಾಹರ್ 1, ಶಾರ್ದೂಲ್ ಠಾಕೂರ್ 3 ವಿಕೆಟ್‌ನಿಂದ ಗಮನ ಸೆಳೆದರು.

Story first published: Friday, October 8, 2021, 9:59 [IST]
Other articles published on Oct 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+