Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ತಲುಪಿದ ಡಿಸಿ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್

IPL 2021: Delhi Capitals opener Shikhar Dhawan arrives at team hotel

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್‌ನ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್, 14ನೇ ಆವೃತ್ತಿಯ ಇಂಡಿಯನ ಪ್ರೀಮಿಯರ್ ಲೀಗ್‌ ಸಲುವಾಗಿ ಮುಂಬೈಗೆ ತಲುಪಿದ್ದಾರೆ. ಇಂದು ಮುಂಬೈಗೆ ಬಂದಿಳಿದಿರುವ ಗಬ್ಬರ್ ಧವನ್ ಇಂದಿನಿಂದ 7 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಲಿದ್ದಾರೆ.

ಮುಂಬೈಯಲ್ಲಿರುವ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಂಗಳವಾರದಿಂದ (ಮಾರ್ಚ್ 30) ಅಭ್ಯಾಸ ನಡೆಸುತ್ತಿದೆ. ಈ ಬಾರಿಯ ಡಿಸಿಯಲ್ಲಿರುವ ವೇಗಿ ಉಮೇಶ್ ಯಾದವ್, ತಂಡದ ಜೊತೆಗಿದ್ದು ಅಭ್ಯಾಸ ನಡೆಸಲು ಖುಷಿಯಾಗುತ್ತಿದೆ ಎಂದಿದ್ದಾರೆ.

'ಗಬ್ಬರ್ ಬಂದು ತಲುಪಿದ್ದನ್ನು ನೋಡಿ. ವೆಲ್‌ಕಪ್ ಧವನ್' ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಟ್ವಿಟರ್ ವಿಡಿಯೋದಲ್ಲಿ ಬರೆದುಕೊಂಡಿದೆ. ವಿಡಿಯೋದಲ್ಲಿ ಧವನ್ ತಂಗಲು ವ್ಯವಸ್ಥೆ ಮಾಡಲಾಗಿದ್ದ ಹೋಟೆಲ್ ರೂಮ್‌ನೊಳಗೆ ಪ್ರವೇಶಿಸುತ್ತಿರುವ ಚಿತ್ರಣವಿದೆ.

ಏಪ್ರಿಲ್ 9ರಂದು ಆರಂಭಗೊಳ್ಳುವ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಡಲಿವೆ. ಏಪ್ರಿಲ್ 10ರಂದು ನಡೆಯುವ ಐಪಿಎಲ್ ದ್ವಿತೀಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿವೆ.

Story first published: Friday, April 2, 2021, 9:56 [IST]
Other articles published on Apr 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+