Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಗಬ್ಬರ್ ಘರ್ಜನೆ, ಪಂಜಾಬ್‌ ವಿರುದ್ಧ ಡೆಲ್ಲಿಗೆ ಭರ್ಜರಿ ಗೆಲುವು

IPL 2021: Delhi Capitals vs Punjab Kings, 11th Match, Report

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 11ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಭರ್ಜರಿ ಜಯ ಗಳಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್‌ ನೆರವಿನೊಂದಿಗೆ ಡೆಲ್ಲಿ ತಂಡ ಟೂರ್ನಿಯ ಎರಡನೇ ಜಯ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ 61 (51), ಮಯಾಂಕ್ ಅಗರ್ವಾಲ್ 69 (36), ಕ್ರಿಸ್ ಗೇಲ್ 11, ದೀಪಕ್ ಹೂಡ ಅಜೇಯ 22, ನಿಕೋಲಸ್ ಪೂರನ್ 9, ಶಾರುಖ್ ಖಾನ್ 15 ರನ್‌ ಸೇರಿಸಿದರು. ಪಂಜಾಬ್ 20 ಓವರ್‌ಗೆ 4 ವಿಕೆಟ್ ಕಳೆದು 195 ರನ್ ಬಾರಿಸಿತು.

ಪಂಜಾಬ್‌ ನೀಡಿದ್ದ 196 ರನ್ ಗುರಿ ಬೆನ್ನಟ್ಟಿದ ಡೆಲ್ಲಿ, ಪೃಥ್ವಿ ಶಾ 32 (17), ಶಿಖರ್ ಧವನ್ 92 (49), ರಿಷಭ್ ಪಂತ್ 15, ಸ್ಟೀವ್ ಸ್ಮಿತ್ 9, ಮಾರ್ಕಸ್ ಸ್ಟೋಯ್ನಿಸ್ 27, ಲಲಿತ್ ಯಾದವ್ 12 ರನ್‌ ಕೊಡುಗೆಯೊಂದಿಗೆ 18.2ನೇ ಓವರ್‌ಗೆ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.

ಪಂಜಾಬ್ ಕಿಂಗ್ಸ್‌ ಇನ್ನಿಂಗ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಸ್ ವೋಕ್ಸ್‌ 1, ಲಕ್ಮನ್ ಮೇರಿವಾಲ 1, ಕಾಗಿಸೊ ರಬಾಡ 1, ಆವೇಶ್‌ ಖಾನ್ 1 ವಿಕೆಟ್‌ ಪಡೆದರೆ, ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ನ ಅರ್ಷ್‌ದೀಪ್ ಸಿಂಗ್ 1, ಜಾಯೆ ರಿಚರ್ಡ್ಸನ್ 2, ರಿಲೆ ಮೆರಿಡಿತ್ 1 ವಿಕೆಟ್‌ ಪಡೆದರು.

Story first published: Sunday, April 18, 2021, 23:28 [IST]
Other articles published on Apr 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+