Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಹುದಿನಗಳ ಬಳಿಕ ಧೋನಿ, ರೈನಾ ಜೊತೆಯಾಗಿ ಅಭ್ಯಾಸ: ವಿಡಿಯೋ

IPL 2021: Dhoni, Raina Hit Net Session Together After A Long Time

ನವದೆಹಲಿ: ಸುದೀರ್ಘ ಸಮಯದ ಬಳಿಕ ಅಂದರೆ ಸುಮಾರು ಎರಡು ವರ್ಷಗಳ ನಂತರ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಮಾಜಿ ಆಲ್ ರೌಂಡರ್ ಸುರೇಶ್ ರೈನಾ ಜೊತೆಯಾಗಿ ಅಭ್ಯಾಸ ನಡೆಸಿದ್ದಾರೆ. ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ ಗಾಗಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಇಬ್ಬರೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರ ಆಡುತ್ತಾರೆ. ಒಟ್ಟು ಮೂರು ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿರುವ ಸಿಎಸ್‌ಕೆ ಐಪಿಎಲ್ ಇತಿಹಾಸದಲ್ಲೇ ಎರಡನೇ ಅತೀ ಯಶಸ್ವಿ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ ಸೀಸನ್‌ನಲ್ಲಿ ಸುರೇಶ್‌ ರೈನಾ ಸಿಎಸ್‌ಕೆ ತಂಡದಲ್ಲಿ ಆಡಿರಲಿಲ್ಲ. ವೈಯಕ್ತಿಕ ಕಾರಣ ನೀಡಿ ರೈನಾ ಕಳೆದ ಸಾರಿ ಐಪಿಎಲ್‌ನಿಂದ ಹೂರ ಉಳಿದಿದ್ದರು. ಈ ಬಾರಿ ಮತ್ತೆ ಸಿಎಸ್‌ಕೆ ತಂಡದಲ್ಲಿ ರೈನಾ ಆಡುತ್ತಿದ್ದು, ಉತ್ತಮ ಪ್ರದರ್ಶನದ ನಿರೀಕ್ಷೆ ಮೂಡಿಸಿದೆ.

ಹಿಂದಿನ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಸಿಎಸ್‌ಕೆ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಈ ಬಾರಿ ಸಿಎಸ್‌ಕೆಯಲ್ಲಿ ಕನ್ನಡಿಗ ರಾಬಿನ್ ಉತ್ತಮ ಕೂಡ ಆಡುತ್ತಿರುವುದರಿಂದ ಕುತೂಹಲ ಮೂಡಿಸಿದೆ. ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಸಿಎಸ್‌ಕೆಯ ಮುಖ್ಯ ಕೋಚ್ ಆಗಿದ್ದಾರೆ.

Story first published: Thursday, April 1, 2021, 17:03 [IST]
Other articles published on Apr 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+