For Quick Alerts
ALLOW NOTIFICATIONS  
For Daily Alerts
 

ಫೈನಲ್‌ಗಾಗಿ ಸಿಎಸ್‌ಕೆ ಬೆಸ್ಟ್ ಪ್ಲೇಯಿಂಗ್ XI, ಸುರೇಶ್ ರೈನಾ ಆಡ್ತಾರಾ?

IPL 2021 Final: CSK Best Playing 11 Against KKR; Will Suresh Raina Play in IPL Final?

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಅಕ್ಟೋಬರ್ 15ರ ಶುಕ್ರವಾರ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫೈನಲ್‌ ಪಂದ್ಯದೊಂದಿಗೆ ಐಪಿಎಲ್ 14ನೇ ಆವೃತ್ತಿಗೆ ತೆರೆ ಬೀಳಲಿದೆ. ಫೈನಲ್‌ನಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಡಲಿವೆ.

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ. ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ ಟ್ರೋಫಿ ಗೆದ್ದಿದೆ. ಈ ಬಾರಿ ಮತ್ತೊಂದು ಪ್ರಶಸ್ತಿ ಗೆದ್ದು ಟ್ರೋಫಿ ಗೆಲುವಿನ ಸಂಖ್ಯೆ ಹೆಚ್ಚಿಸಿಕೊಳ್ಳಲು ಎರಡೂ ತಂಡಗಳೂ ಕಣ್ಣಿಟ್ಟಿವೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ತಂಡ ಲೀಗ್‌ ಹಂತದಲ್ಲೇ ಹೊರ ಬಿದ್ದಿತ್ತು. ಐಪಿಎಲ್ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಸಿಎಸ್‌ಕೆ ಲೀಗ್ ಹಂತದಲ್ಲಿ ಪ್ಲೇ ಆಫ್ಸ್‌ಗೆ ಪ್ರವೇಶಿಸದೆ ಹೊರ ಬಿದ್ದಿದ್ದು. ಆ ಸೀಸನ್‌ನಲ್ಲಿ ಆಲ್ ರೌಂಡರ್ ಸುರೇಶ್ ರೈನಾ ಆಡಿರಲಿಲ್ಲ. ಕಳೆದ ಸೀಸನ್‌ನಲ್ಲಿ ಮುಖಭಂಗ ಅನುಭವಿಸಿದ್ದ ಸಿಎಸ್‌ಕೆ ಈ ಬಾರಿ ಬಲಿಷ್ಠ ಕಮ್‌ಬ್ಯಾಕ್ ಮಾಡಿದೆ. ಫೈನಲ್‌ಗೆ ಪ್ರವೇಶಿಸಿದೆ.

ಈ ಬಾರಿ ಸುರೇಶ್ ರೈನಾ ಅಂಥ ಫಾರ್ಮ್‌ನಲ್ಲಿ ಇಲ್ಲ. ಮಿಸ್ಟರ್ ಐಪಿಎಲ್ ಎಂದು ಕರೆಯಲ್ಪಡುವ ರೈನಾ ಈ ಬಾರಿ ನೀರಸ ಫಾರ್ಮ್‌ಗಾಗಿಯೇ ಕೆಲವೊಂದಿಷ್ಟು ಪಂದ್ಯಗಳಲ್ಲಿ ಸಿಎಸ್‌ಕೆ ತಂಡದಿಂದ ಹೊರಗಿದ್ದರು. ಫೈನಲ್‌ ಪಂದ್ಯದಲ್ಲೂ ರೈನಾ ಆಡೋದು ಅನುಮಾನವೆನಿಸಿದೆ. ರೈನಾ ಬದಲು ಕನ್ನಡಿಗ ರಾಬಿನ್ ಉತ್ತಪ್ಪ ಕಣಕ್ಕಿಳಿಯುವ ನಿರೀಕ್ಷೆಯಿದೆ.

ಕೆಕೆಆರ್ ವಿರುದ್ಧದ ಫೈನಲ್‌ ಪಂದ್ಯಕ್ಕೆ ಸಿಎಸ್‌ಕೆ ಸಂಭಾವ್ಯ ತಂಡ ಹೀಗಿರಲಿದೆ
ಫಾಫ್ ಡು ಪ್ಲೆಸಿಸ್, ಋತುರಾಜ್ ಗಾಯಕವಾಡ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ & ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಮತ್ತು ಜೋಶ್ ಹೇಝಲ್ವುಡ್.

Story first published: Thursday, October 14, 2021, 17:52 [IST]
Other articles published on Oct 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+