Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ : ಫೈನಲ್ ಪಂದ್ಯಗಳಲ್ಲಿ ಡೇಂಜರಸ್ ಬ್ಯಾಟ್ಸ್‌ಮನ್‌ ಯಾರು ಗೊತ್ತಾ?

IPL 2021 : Here is the list of batsmen who scored most runs in IPL finals

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಧ್ಯದಲ್ಲಿಯೇ ಮೊಟಕುಗೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 29 ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದು ಕೆಲ ಆಟಗಾರರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಮುಂದೂಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಉಳಿದ 31 ಪಂದ್ಯಗಳು ಇಂಗ್ಲೆಂಡ್ ಅಥವಾ ಯುಎಇಯಲ್ಲಿ ನಡೆಯಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.

ಇಲ್ಲಿಯವರೆಗೂ 13 ಐಪಿಎಲ್ ಆವೃತ್ತಿಗಳು ಯಶಸ್ವಿಯಾಗಿ ಮುಗಿದಿದ್ದು ಹಲವಾರು ದಾಖಲೆಗಳು ನಿರ್ಮಾಣವಾಗಿವೆ ಹಾಗೂ ಅವುಗಳಲ್ಲಿ ಹಲವಾರು ವಿಶೇಷ ಮತ್ತು ಅಪರೂಪದ ದಾಖಲೆಗಳೂ ಸೇರಿವೆ. ಅಂತಹ ಅಪರೂಪದ ದಾಖಲೆಗಳ ಸಾಲಿಗೆ ಐಪಿಎಲ್ ಫೈನಲ್ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್‌ ದಾಖಲೆಯೂ ಸೇರುತ್ತದೆ. ಐಪಿಎಲ್ ಫೈನಲ್ ಪಂದ್ಯಗಳ ದಾಖಲೆಗಳ ಕುರಿತು ಮಾತನಾಡುವಾಗ ಖಂಡಿತವಾಗಿಯೂ ಅಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಆಟಗಾರರ ಹೆಸರುಗಳು ಮಾತ್ರ ಹೆಚ್ಚಾಗಿ ಕೇಳಿಬರುತ್ತವೆ.

ಚೆನ್ನೈ ಮತ್ತು ಮುಂಬೈ ತಂಡಗಳು ಅತಿಹೆಚ್ಚು ಬಾರಿ ಫೈನಲ್ ಪ್ರವೇಶಿಸಿರುವ ಕಾರಣ ಫೈನಲ್ ಪಂದ್ಯಗಳಲ್ಲಿ ಆ ತಂಡಗಳ ಆಟಗಾರರ ದಾಖಲೆಗಳೇ ಹೆಚ್ಚಿರುತ್ತವೆ. ಇನ್ನು ಐಪಿಎಲ್ ಫೈನಲ್ ಪಂದ್ಯಗಳಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಆಟಗಾರರ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ 249 ರನ್ ಬಾರಿಸುವುದರ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಉಳಿದಂತೆ ಶೇನ್ ವಾಟ್ಸನ್ 236, ರೋಹಿತ್ ಶರ್ಮಾ 183, ಮುರಳಿ ವಿಜಯ್ 181, ಕೀರನ್ ಪೊಲಾರ್ಡ್ 180 ಹಾಗೂ ಎಂಎಸ್ ಧೋನಿ 180 ರನ್‌ಗಳನ್ನು ಐಪಿಎಲ್ ಫೈನಲ್ ಪಂದ್ಯಗಳಲ್ಲಿ ಗಳಿಸಿದ್ದಾರೆ.

Story first published: Wednesday, May 12, 2021, 20:44 [IST]
Other articles published on May 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+