ಐಪಿಎಲ್ 2021 : ಎರಡನೇ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿ

ಏಪ್ರಿಲ್ 16ರಿಂದ ಎಪ್ರಿಲ್ 22ರವರೆಗೆ ಅಂದರೆ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ವಾರದಲ್ಲಿ ಹಲವಾರು ಅದ್ಭುತ ಪ್ರದರ್ಶನಗಳು ಆಟಗಾರರಿಂದ ಬಂದಿವೆ. ಎರಡನೇ ವಾರದಲ್ಲಿ ಒಟ್ಟು 9 ಪಂದ್ಯಗಳು ನಡೆದಿದ್ದು ಕಳೆದ ವಾರಕ್ಕೆ ಹೋಲಿಸಿದರೆ ಅಂಕಪಟ್ಟಿಯಲ್ಲಿ ತೀವ್ರ ಬದಲಾವಣೆಗಳುಂಟಾಗಿವೆ. ಎರಡನೇ ವಾರದಲ್ಲಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದು ಸದ್ಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಮೊದಲನೇ ವಾರದಲ್ಲಿ ಮುಗ್ಗರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ವಾರದಲ್ಲಿ ಒಟ್ಟು 3 ಪಂದ್ಯಗಳನ್ನು ಆಡುವುದರ ಮೂಲಕ ಮೂರರಲ್ಲಿಯೂ ಜಯಗಳಿಸಿ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಎರಡನೇ ವಾರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅದ್ಬುತ ಪ್ರದರ್ಶನ ನೀಡಿದ ತಂಡಗಳಾಗಿವೆ. ತಂಡಗಳನ್ನು ಹೊರತುಪಡಿಸಿ ವೈಯಕ್ತಿಕವಾಗಿ ಯಾವ ಯಾವ ಆಟಗಾರರು ಎರಡನೇ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂಬ ಮಾಹಿತಿ ಮುಂದೆ ಇದೆ ಓದಿ.

1. ಅತ್ಯಧಿಕ ರನ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಾಫ್ ಡು ಪ್ಲೆಸಿಸ್ 164 ರನ್ ಬಾರಿಸುವುದರ ಮೂಲಕ ಎರಡನೇ ವಾರದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದಾರೆ.

2. ಅತ್ಯಧಿಕ ವಿಕೆಟ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೀಪಕ್ ಚಹರ್ ಎರಡನೇ ವಾರದಲ್ಲಿ 8 ವಿಕೆಟ್‍ಗಳನ್ನು ಪಡೆಯುವುದರ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದಾರೆ.

3. ಹೆಚ್ಚು ಸಿಕ್ಸರ್
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಫೋಟಕ ಆಟಗಾರ ಆ್ಯಂಡ್ರೆ ರಸೆಲ್ ಎರಡನೇ ವಾರ 8 ಸಿಕ್ಸರ್ ಬಾರಿಸುವ ಮೂಲಕ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರಾಗಿದ್ದಾರೆ.

4. ಅತ್ಯಧಿಕ ಬೌಂಡರಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶಿಖರ್ ಧವನ್ ಎರಡನೇ ವಾರದಲ್ಲಿ 18 ಬೌಂಡರಿಗಳನ್ನು ಬಾರಿಸುವುದರ ಮೂಲಕ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

5. ಅತ್ಯಧಿಕ ಡಾಟ್ ಬಾಲ್
ಎರಡನೇ ವಾರದಲ್ಲಿ ಅತ್ಯಧಿಕ ವಿಕೆಟ್ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೀಪಕ್ ಚಹರ್ ಎರಡನೇ ವಾರದಲ್ಲಿ ಅತ್ಯಧಿಕ ಡಾಟ್ ಬಾಲ್ ಹಾಕಿರುವ ಬೌಲರ್ ಕೂಡ ಆಗಿದ್ದಾರೆ.

6. ಅತ್ಯುತ್ತಮ ಬ್ಯಾಟ್ಸ್‌ಮನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಅನ್ ಕ್ಯಾಪ್ಡ್ ಆಟಾಗಾರನಾಗಿ ಅತಿವೇಗದ ಶತಕ ಬಾರಿಸುವ ಮೂಲಕ ಎರಡನೇ ವಾರದ ಅತ್ಯುತ್ತಮ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 52 ಎಸೆತಗಳಿಗೆ ಅಜೇಯ 101 ರನ್ ಬಾರಿಸಿದ ದೇವದತ್ ಪಡಿಕ್ಕಲ್ ಅವರ ಬ್ಯಾಟಿಂಗ್ ಎರಡನೇ ವಾರದ ಅತ್ಯುತ್ತಮ ಬ್ಯಾಟಿಂಗ್ ಆಗಿದೆ.

7. ಅತ್ಯುತ್ತಮ ಬೌಲರ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ದೀಪಕ್ ಚಹರ್ ಎರಡನೇ ವಾರದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಮಾಡಿ, 1 ಮೇಡನ್ ಓವರ್ ಮಾಡುವುದರ ಜೊತೆಗೆ ಕೇವಲ 13 ರನ್ ನೀಡಿ 4 ವಿಕೆಟ್‍ಗಳನ್ನು ಪಡೆದಿದ್ದರು. ದೀಪಕ್ ಚಹರ್ ಅವರ ಈ ಬೌಲಿಂಗ್ ಎರಡನೇ ವಾರದ ಅತ್ಯುತ್ತಮ ಬೌಲಿಂಗ್ ಆಗಿದೆ.

8. ಅತಿ ಉದ್ದದ ಸಿಕ್ಸರ್
ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 105 ಮೀಟರ್‌ಗಳ ಸಿಕ್ಸರ್ ಸಿಡಿಸಿದ್ದರು. ಇದು ಎರಡನೇ ವಾರದ ಮತ್ತು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿಯೂ ಅತಿ ಉದ್ದದ ಸಿಕ್ಸ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications