Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶಾರುಖ್ ಖಾನ್ ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ ಎಂದ ಕೆಕೆಆರ್ ಆಟಗಾರ!

IPL 2021: I had no idea who Shah Rukh Khan was says Pat Cummins
ಪ್ಯಾಟ್ ಕಮ್ಮಿನ್ಸ್ ಗೆ 15 ಕೋಟಿ ಕೊಟ್ಟ ಓನರ್ ಯಾತು ಅಂತನೇ ಗೊತ್ತಿರ್ಲಿಲ್ವಂತೆ | Pat Cummins | Oneindia Kannada

ಆಸ್ಟ್ರೇಲಿಯದ ವೇಗಿ ಪ್ಯಾಟ್ ಕಮಿನ್ಸ್ ಸದ್ಯದ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ವೇಗಿಗಳ ಸಾಲಿನಲ್ಲಿ ನಿಲ್ಲುವಂತಹ ಆಟಗಾರ. ಕಳೆದ ಕೆಲವು ವರ್ಷಗಳಿಂದ ಆಸ್ಟ್ರೇಲಿಯಾ ತಂಡದ ಪರ ಪ್ಯಾಟ್ ಕಮಿನ್ಸ್ ಅತ್ಯದ್ಭುತ ಆಟವನ್ನು ಆಡಿದ್ದಾರೆ. ಹೀಗಾಗಿಯೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಪ್ಯಾಟ್ ಕಮಿನ್ಸ್ ಬೇಡಿಕೆಯನ್ನು ಹುಟ್ಟುಹಾಕಿದ್ದರು.

2020ರ ಐಪಿಎಲ್ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಯಾಟ್ ಕಮಿನ್ಸ್‌ನ್ನು 15.5 ಕೋಟಿ ರೂಪಾಯಿಗೆ ಖರೀದಿಸಿತು. ಆಗಿನ ಸಮಯಕ್ಕೆ ಐಪಿಎಲ್ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮೊತ್ತಕ್ಕೆ ಯಾವ ಆಟಗಾರನನ್ನು ಸಹ ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಹೀಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ದಾಖಲೆಯ ಮೊತ್ತಕ್ಕೆ ಮಾರಾಟವಾದ ಪ್ಯಾಟ್ ಕಮಿನ್ಸ್ ಇದೀಗ ತಮ್ಮ ತಂಡದ ಸಹ ಮಾಲೀಕರಾದ ಬಾಲಿವುಡ್ ನಟ ಶಾರುಖ್ ಖಾನ್ ಕುರಿತು ಮಾತನಾಡಿದ್ದಾರೆ.

ನ್ಯೂಜಿಲೆಂಡ್‌ನ ಈ ಬೌಲರ್‌ಗೆ ಕೊಹ್ಲಿ ಹೆದರುತ್ತಾರೆ; ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್!

'ಮೊದಲನೇ ಬಾರಿ ನಾನು ಶಾರುಖ್ ಖಾನ್‌ನ್ನು ಭೇಟಿಯಾದಾಗ ಆತ ಯಾರು ಎಂಬುದೇ ನನಗೆ ತಿಳಿದಿರಲಿಲ್ಲ, ಆಗ ನನ್ನ ವಯಸ್ಸು 18 ಅಥವಾ 19 ಆಗಿತ್ತು. ನಾನು ಹೆಚ್ಚಾಗಿ ಬಾಲಿವುಡ್ ಚಿತ್ರಗಳನ್ನು ವೀಕ್ಷಿಸುತ್ತಿರಲಿಲ್ಲ, ಹೀಗಾಗಿ ಆತನ ಬಗ್ಗೆ ನನಗೆ ಕೊಂಚವೂ ತಿಳಿದಿರಲಿಲ್ಲ' ಎಂದು ಪ್ಯಾಟ್ ಕಮಿನ್ಸ್ ಶಾರುಖ್ ಖಾನ್ ಕುರಿತಾಗಿ ಹೇಳಿಕೊಂಡಿದ್ದಾರೆ.

Story first published: Wednesday, June 9, 2021, 16:22 [IST]
Other articles published on Jun 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+