ಐಪಿಎಲ್: ಸೆಂಚುರಿ ಹೊಸ್ತಿಲಲ್ಲಿರುವ ಚಾಹಲ್ ಭಾವನಾತ್ಮಕ ಪ್ರತಿಕ್ರಿಯೆ

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ 100ನೇ ಇನ್ನಿಂಗ್ಸ್ ಆಡುವುದರಲ್ಲಿದ್ದಾರೆ. ಬುಧವಾರ (ಏಪ್ರಿಲ್ 10) ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 6ನೇ ಪಂದ್ಯದಲ್ಲಿ ಚಾಹಲ್ ಆರ್‌ಸಿಬಿ ಪರ ಐಪಿಎಲ್‌ನ 100ನೇ ಪಂದ್ಯಕ್ಕಾಗಿ ಕಣಕ್ಕಿಳಿಯಲಿದ್ದಾರೆ. ಚೆನ್ನೈಯಲ್ಲಿ ನಡೆಯುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯ ವೇಳೆ ಚಾಹಲ್ 100ನೇ ಪಂದ್ಯ ಆಡಲಿದ್ದಾರೆ.
ಬುಧವಾರದ ಪಂದ್ಯ ಎಸ್‌ಆರ್‌ಎಚ್ ಮತ್ತು ಆರ್‌ಸಿಬಿ ಎರಡೂ ತಂಡಗಳಿಗೂ ಟೂರ್ನಿಯ ಎರಡನೇ ಪಂದ್ಯ ಆಗಿರಲಿದೆ. ಅಸಲಿಗೆ ಈ ಐಪಿಎಲ್‌ನಲ್ಲಿ ಉದ್ಘಾಟನಾ ಪಂದ್ಯವಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ್ದ ಚಾಹಲ್ ಅಂದೇ 100ನೇ ಪಂದ್ಯ ಆಡಿದ್ದರು. ಆದರೆ ಚಾಹಲ್ ಆರ್‌ಸಿಬಿ ಪರ 100ನೇ ಪಂದ್ಯಕ್ಕಾಗಿ ಮೈದಾನಕ್ಕಿಳಿಯುತ್ತಿರುವುದು ಹೈದರಾಬಾದ್ ವಿರುದ್ಧವೆ.

ಆರ್‌ಸಿಬಿ ಪರ 100ನೇ ಪಂದ್ಯ
ಚಾಹಲ್ ಅವರ ಐಪಿಎಲ್ ವೃತ್ತಿ ಬದುಕು ಆರಂಭವಾಗಿದ್ದು ಮುಂಬೈ ಇಂಡಿಯನ್ಸ್ ಮೂಲಕ. ಆದರೆ ಮುಂಬೈ ಇಂಡಿಯನ್ಸ್ ಪರ ಚಾಹಲ್ ಹೆಚ್ಚು ಪಂದ್ಯಗಳನ್ನಾಡಿರಲಿಲ್ಲ. ಇಂದಿಗೆ ಆರ್‌ಸಿಬಿ ಪ್ರತಿನಿಧಿಸಿ ಚಾಹಲ್ 100ನೇ ಐಪಿಎಲ್ ಪಂದ್ಯ ಆಡಿದಂತಾಗುತ್ತದೆ. 2014ರಲ್ಲಿ ಚಾಹಲ್ ಆರ್‌ಸಿಬಿ ತಂಡ ಸೇರಿಕೊಂಡಿದ್ದರು. ಐಪಿಎಲ್‌ನಲ್ಲಿ 99 ಇನ್ನಿಂಗ್ಸ್ ಆಡಿರುವ ಚಾಹಲ್ 121 ವಿಕೆಟ್ ದಾಖಲೆ ಹೊಂದಿದ್ದಾರೆ.

ಇದು ತುಂಬಾ ಭಾವನಾತ್ಮಕ ಪಯಣ
100ನೇ ಪಂದ್ಯದ ಬಗ್ಗೆ ಮಾತನಾಡಿದ ಚಾಹಲ್, 'ನಾನು 2014ರಲ್ಲಿ ಐಪಿಎಲ್ ವೃತ್ತಿ ಬದುಕು ಆರಂಭಿಸಿದೆ. ನಾನು ಮುಂಬೈ ಇಂಡಿಯನ್ಸ್‌ನಿಂದ ಬಂದೆ. ಆ ಹೊತ್ತು ನಾನು ಆರ್‌ಸಿಬಿ ಪರ 100 ಪಂದ್ಯಗಳನ್ನಾಡುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ. ಹೌದು, ಇದು ತುಂಬಾ ಭಾವನಾತ್ಮಕ ಪಯಣ,' ಎಂದಿದ್ದಾರೆ.

ಗೆಲ್ಲಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ
ಮಾತು ಮುಂದುವರೆಸಿದ ಯುಜುವೇಂದ್ರ, 'ನಾನು ಇದು 100ನೇ ಪಂದ್ಯವನ್ನು ಆರ್‌ಸಿಬಿ ಪರವಾಗಿ ಆಡುತ್ತಿದ್ದೇನೆ. ಇಂದಿನ ಪಂದ್ಯದಲ್ಲಿ ನಾನು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಇದು ನನ್ನ ಪಾಲಿಗೆ ಬಹಳ ಭಾವನಾತ್ಮಕ ವಿಚಾರ. ನಾನು ಒಂದೇ ಫ್ರಾಂಚೈಸಿಗೆ 100 ಪಂದ್ಯಗಳನ್ನು ಆಡುತ್ತೇನೆಂದು ಎಂದಿಗೂ ಎಣಿಸಿರಲಿಲ್ಲ,' ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications