
ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಸೆಪ್ಟೆಂಬರ್ 28) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 41ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ನಾಯಕ ರಿಷಭ್ ಪಂತ್, ಕೆಕೆಆರ್ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಮುಖಕ್ಕೆ ಬ್ಯಾಟ್ ಬೀಸಿರುವ ಘಟನೆ ನಡೆದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ಡೈಡರ್ಸ್ ನಡುವಿನ ಪಂದ್ಯದಲ್ಲಿ ರಿಷಭ್ ಪಂತ್ ಅವರು ವಿಕೆಟ್ ಕೀಪಿಂಗ್ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ಅವರ ಮುಖದತ್ತ ಬ್ಯಾಟ್ ಬೀಸಿದ್ದಾರೆ. ಆದರೆ ಬ್ಯಾಟ್ ಕಾರ್ತಿಕ್ ಅವರ ಮುಖಕ್ಕೆ ಬಡಿದಿಲ್ಲ. ಬದಲಿಗೆ ಸ್ವಲ್ಪದರಲ್ಲಿ ಆಗಬಹುದಾಗಿದ್ದ ಅನಾಹುತ ತಪ್ಪಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ vs ಡೆಲ್ಲಿ ಕ್ಯಾಪಿಟಲ್ಸ್, Live ಸ್ಕೋರ್
ಬ್ಯಾಟಿಂಗ್ ಮಾಡುತ್ತಿದ್ದ ಪಂತ್ ಅವರ ಬ್ಯಾಟ್ ತಪ್ಪಿಸಿ ಚೆಂಡು ವಿಕೆಟ್‌ಗೆ ಬಡಿಯುವುದರಲ್ಲಿತ್ತು. ಆಗ ಚೆಂಡು ನೆಲಕ್ಕೆ ಬೀಳುವ ಮುನ್ನ ಪಂತ್ ಇನ್ನೊಮ್ಮೆ ಬ್ಯಾಟ್ ಬೀಸಿ ಚೆಂಡನ್ನು ದೂರ ಕಳುಹಿಸಲು ಯತ್ನಿಸಿದರು. ಅದೇ ವೇಳೆ ಚೆಂಡು ಹಿಡಿದುಕೊಳ್ಳಲು ಬಳಿ ಬಂದ ದಿನೇಶ್ ಕಾರ್ತಿಕ್‌ಗೆ ಪಂತ್ ಎರಡನೇ ಸಾರಿ ಬೀಸಿದ ಬ್ಯಾಟ್ ಮುಖಕ್ಕೆ ಬಡಿಯುವುದರಲ್ಲಿತ್ತು.
ಆದರೆ ಅದೃಷ್ಟವಶಾತ್ ಸ್ವಲ್ಪದರಲ್ಲಿ ಬ್ಯಾಟ್ ಡಿಕೆ ಮುಖದ ಬಳಿಯಿಂದ ಸರಿದು ಹೋಯ್ತು. ಅಪಾಯಕಾರಿ ರೀತಿಯಲ್ಲಿ ಬ್ಯಾಟ್ ಮುಖದ ಸಮೀಪದಿಂದ ಹಾದು ಹೋಗಿದ್ದು ನೋಡಿ ಒಮ್ಮೆ ಡಿಕೆ ಕೂಡ ಹೌಹಾರಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಶಿಖರ್ ಧವನ್ 24, ಸ್ಟೀವನ್ ಸ್ಮಿತ್ 39, ಶ್ರೇಯಸ್ ಅಯ್ಯರ್ 1, ರಿಷಭ್ ಪಂತ್ 39, ಶಿಮ್ರಾನ್ ಹೆಟ್ಮೈಯರ್ 4, ಲಲಿತ್ ಯಾದವ್ 0, ಅಕ್ಸರ್ ಪಟೇಲ್ 0, ರವಿಚಂದ್ರನ್ ಅಶ್ವಿನ್ 9, ಕಗಿಸೊ ರಬಾಡಾ 0, ಅವೇಶ್ ಖಾನ್ 5 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 127 ರನ್ ಗಳಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI
ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯೋನ್ ಮಾರ್ಗನ್ (ಸಿ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆ), ಸುನಿಲ್ ನರೈನ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಸಂದೀಪ್ ವಾರಿಯರ್, ವರುಣ್ ಚಕರವರ್ತಿ.
ಬೆಂಚ್: ಹರ್ಭಜನ್ ಸಿಂಗ್, ಶಕೀಬ್ ಅಲ್ ಹಸನ್, ಬೆನ್ ಕಟ್ಟಿಂಗ್, ಕರುಣ್ ನಾಯರ್, ಪವನ್ ನೇಗಿ, ಕುಲದೀಪ್ ಯಾದವ್, ಗುರ್ಕೀರತ್ ಸಿಂಗ್ ಮಾನ್, ಶೆಲ್ಡನ್ ಜಾಕ್ಸನ್, ಟಿಮ್ ಸೀಫರ್ಟ್, ರಿಂಕು ಸಿಂಗ್, ಕಮಲೇಶ್ ನಾಗರಕೋಟಿ, ಶಿವಂ ಮಾವಿ, ವೈಭವ್ ಅರೋರಾ, ಪ್ರಸಿದ್ ಕೃಷ್ಣ, ಆಂಡ್ರೆ ರಸೆಲ್.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI
ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (c & wk), ಶಿಮ್ರಾನ್ ಹೆಟ್ಮೈಯರ್, ಲಲಿತ್ ಯಾದವ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಚ್ ನಾರ್ತ್ಜೆ, ಆವೇಶ್ ಖಾನ್.
ಬೆಂಚ್: ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ಅಮಿತ್ ಮಿಶ್ರಾ, ಉಮೇಶ್ ಯಾದವ್, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕಸ್ ಸ್ಟೋಯಿನಿಸ್, ಲುಕ್ಮಾನ್ ಮೇರಿವಾಲಾ, ಟಾಮ್ ಕುರ್ರನ್, ಬೆನ್ ದ್ವಾರಶುಯಿಸ್, ಪ್ರವೀಣ್ ದುಬೆ, ವಿಷ್ಣು ವಿನೋದ್, ಕುಲ್ವಂತ್ ಖೇಜ್ರೋಲಿಯಾ, ರಿಪಾಲ್ ಪಟೇಲ್, ಪೃಥ್ವಿ ಶಾ.