ಐಪಿಎಲ್ 2021: ಫಾಪ್ ಡು ಪ್ಲೆಸಿಸ್ ಅಬ್ಬರ, ಕೊಲ್ಕತ್ತಾಗೆ 221 ರನ್‌ಗಳ ಗುರಿ ನೀಡಿದ ಚೆನ್ನೈ

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳು ಅಕ್ಷರಶಃ ಅಬ್ಬರಿಸಿದ್ದಾರೆ. ನಿಗದಿತ 20 ಓವರ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 220 ರನ್‌ಗಳಿಸಿದ್ದು ಕೊಲ್ಕತ್ತಾ ನೈಟ್ ರೈಡರ್ಸ್‌ಗೆ ಅತ್ಯಂತ ಕಠಿಣ ಸವಾಲನ್ನು ನೀಡಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆರಂಭಿಕರಿಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಆವೃತ್ತಿಯಲ್ಲಿ ಸತತ ವೈಫಲ್ಯ ಅನುಭವಿಸಿದ ಋತುರಾಜ್ ಗಾಯಕ್ವಾಡ್ ಭರ್ಜರಿ 64 ರನ್‌ಗಳ ಕೊಡುಗೆಯನ್ನು ನೀಡಿದರು. ಇನ್ನೋರ್ವ ಆರಂಭಿಕ ಆಟಗಾರ ಫಾಪ್ ಡು ಪ್ಲೆಸಿಸ್ ಸ್ಪೋಟಕ ಪ್ರದರ್ಶನ ನೀಡಿ 95 ರನ್‌ಗಳನ್ನು ಗಳಿಸಿ ಅಜೇಯವಾಗುಳಿದರು.
ಆಲ್‌ರೌಂಡರ್ ಮೊಯೀನ್ ಅಲಿ ಕೂಡ 12 ಎಸೆತಗಳಲ್ಲಿ 25 ರನ್ ಬಾರಿಸಿ ಮಿಂಚಿದರು. ಇನ್ನು ಈ ಪಂದ್ಯದಲ್ಲಿ ನಾಯಕ ಎಂಎಸ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಳಿದು ಎರಡು ಸಿಕ್ಸರ್ ಒಂದು ಬೌಂಡರಿ ಸಿಡಿಸಿರು. 8 ಎಸೆತಗಳನ್ನು ಎದುರಿಸಿದ ಧೋನಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ 17 ರನ್‌ಗಳ ಕೊಡುಗೆ ನೀಡಿದ್ದಾರೆ. ಈ ಎಲ್ಲಾ ಆಟಗಾರರ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 220 ರನ್‌ಗಳನ್ನು ಗಳಿಸಿದೆ.
ಇನ್ನು ಚೆನ್ನೈ ತಂಡದ ಈ ಬೃಹತ್ ರನ್ ಮಧ್ಯೆಯೂ ವರುಣ್ ಚಕ್ರವರ್ತಿ ನಾಲ್ಕು ಓವರ್‌ಗಳಲ್ಲಿ ಕೇವಲ 27 ರನ್‌ಗಳನ್ನು ನೀಡಿ ಮಿಂಚಿದರು. ಒಂದು ವಿಕೆಟ್ ಕೂಡ ವರುಣ್ ಪಾಲಾಯಿತು. ಆದರೆ ಪ್ಯಾಟ್ ಕಮ್ಮಿನ್ಸ್ 4 ಓವರ್‌ಗಳಲ್ಲಿ 14.50 ಸರಾಸರಿಯಲ್ಲಿ 58 ರನ್ ನೀಡಿ ದುಬಾರಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications