2021ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಹತ್ತಲ್ಲ, ಎಂಟೇ ತಂಡಗಳು!

ಬೆಂಗಳೂರು: 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಈಗಿರುವ 8 ತಂಡಗಳಿಗೆ ಬದಲಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 9 ಅಥವಾ 10 ತಂಡಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿತ್ತು. ಆದರೆ ಬಿಸಿಸಿಐಯ ಈ ಯೋಜನೆಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತದೆ.
ಮುಂದಿನ ವರ್ಷ ಅಂದರೆ 2021ಕ್ಕೆ ಐಪಿಎಲ್‌ನಲ್ಲಿ 10 ತಂಡಗಳು ಆಡುತ್ತಿಲ್ಲ. ಬದಲಿಗೆ ಈಗಿರುವ 8 ತಂಡಗಳ ಮಧ್ಯೆ ಕದನ ನಡೆಯಲಿದೆ. ಆದರೆ 2022ಕ್ಕೆ ಎರಡು ಹೆಚ್ಚುವರಿ ತಂಡಗಳು ಸೇರಿ ಒಟ್ಟು 10 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸುವುದನ್ನು ನಿರೀಕ್ಷಿಸಲಾಗಿದೆ.
10 ತಂಡಗಳನ್ನು ಮುಂದಿನ ವರ್ಷ ಆಡಿಸುವ ನಿರ್ಧಾರದಿಂದ ಬಿಸಿಸಿಐ ಹಿಂದೆ ಸರಿದಿದ್ದೇಕೆ ಎಂದು ಸ್ಪಷ್ಟಗೊಂಡಿಲ್ಲ. ಆದರೆ ನೂತನ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೇವಲ 3-4 ತಿಂಗಳು ಬಾಕಿಯಿರುವಾಗ ಹೆಚ್ಚುವರಿ ತಂಡಗಳ ಸೇರ್ಪಡೆ ಸವಾಲಿನ ಸಂಗತಿ ಅನ್ನಿಸಿತೋ ಏನೋ ಬಿಸಿಸಿಐಗೆ. ಹೀಗಾಗಿ ಹೊಸ ತಂಡಗಳ ಸೇರ್ಪಡೆಯ ನಿರ್ಧಾರದಿಂದ ಬಿಸಿಸಿಐ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.
ಡಿಸೆಂಬರ್ 24ರಂದು ಬಿಸಿಸಿಐ ವಾರ್ಷಿಕ ಸಭೆ ನಡೆಯಲಿದೆ. ಈ ಸಭೆಯ ಬಳಿಕವೇ 2021ಕ್ಕೆ ಹೊಸ ತಂಡಗಳ ಸೇರ್ಪಡೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದರೆ ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಮುಂದಿನ ವರ್ಷ ಬಿಸಿಸಿಐ ಐಪಿಎಲ್ ತಂಡಗಳನ್ನು ಸಂಖ್ಯೆ ಹೆಚ್ಚಿಸುತ್ತಿಲ್ಲ. 2022ಕ್ಕೆ ತಂಡಗಳನ್ನು ಹೆಚ್ಚಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications