For Quick Alerts
ALLOW NOTIFICATIONS  
For Daily Alerts
 

ಈ ದಾಖಲೆಯಲ್ಲಿ ಎಬಿಡಿಗಿಂತಲೂ ಎಂಎಸ್ ಧೋನಿಯೇ ಟಾಪ್

IPL 2021 : List of players with highest partnership runs in IPL

ಎಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಜ್ವರ ಮತ್ತೆ ಆರಂಭವಾಗಿದೆ. ಮೊದಲನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡುತ್ತಿವೆ. ಈ ಬಾರಿಯ ಐಪಿಎಲ್ ಶುರುವಾಗುತ್ತಿರುವ ವೇಳೆಯಲ್ಲಿ ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ದಾಖಲಾದ ಹಲವಾರು ದಾಖಲೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಈ ರೀತಿ ಚರ್ಚೆಯಾಗುತ್ತಿರುವ ದಾಖಲೆಗಳಲ್ಲಿ ವಿಶಿಷ್ಟವಾದ ದಾಖಲೆಯೊಂದು ಕೂಡ ಇದೆ.

ಅಜೇಯನಾಗಿ ಉಳಿದ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ದಾಖಲೆ ಬಹಳ ವಿಶಿಷ್ಟವಾಗಿದ್ದು, ಈ ದಾಖಲೆ ಮಾಡಿದ ಆಟಗಾರರ ಪಟ್ಟಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಅಜೇಯರಾಗಿ ಉಳಿದ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ದಾಖಲೆಯನ್ನು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಧೋನಿ ಅಜೇಯರಾಗಿ ಉಳಿದ ಐಪಿಎಲ್ ಪಂದ್ಯಗಳಲ್ಲಿ ಇದುವರೆಗೂ ಒಟ್ಟು 2565 ರನ್ ಗಳಿಸುವುದರ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

IPL 2021 : List of players with highest partnership runs in IPL

ಎಬಿ ಡಿವಿಲಿಯರ್ಸ್ 2054 ರನ್ ಬಾರಿಸುವುದರ ಮೂಲಕ ಅಜೇಯರಾಗಿ ಉಳಿದ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸುರೇಶ್ ರೈನಾ 1601 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದು , 1553 ರನ್ ಬಾರಿಸಿರುವ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ ಹಾಗೂ 1468 ರನ್ ಬಾರಿಸಿರುವ ಶಿಖರ್ ಧವನ್ ಅಜೇಯರಾಗಿ ಉಳಿದ ಐಪಿಎಲ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

Story first published: Friday, April 9, 2021, 23:18 [IST]
Other articles published on Apr 9, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+