ಐಪಿಎಲ್: 2020ರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿ
2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಕಳೆದ ಬಾರಿಯ ಐಪಿಎಲ್ ದುಬೈನಲ್ಲಿ ಆಯೋಜನೆಯಾಗಿತ್ತು. ಕೊರೊನಾ ವೈರಸ್ ಹಾವಳಿಯಿಂದ ದುಬೈಗೆ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರ ಮಾಡಿದರೂ ಸಹ ಅಲ್ಲಿನ ಪಿಚ್‌ಗಳಲ್ಲಿಯೂ ಬ್ಯಾಟ್ಸ್‌ಮನ್‌ಗಳು ರನ್ ಹೊಳೆ ಹರಿಸಿದ್ದರು.
ಅದರಲ್ಲಿಯೂ ವಿಶೇಷವಾಗಿ ಟೀಮ್ ಇಂಡಿಯಾಗೆ ಆಯ್ಕೆಯಾಗದೇ ಇದ್ದ ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್ ಮತ್ತು ದೇವದತ್ ಪಡಿಕ್ಕಲ್ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡಿದರು. ದೇವದತ್ ಪಡಿಕ್ಕಲ್ 473 ರನ್ , ಸೂರ್ಯಕುಮಾರ್ ಯಾದವ್ 480 ರನ್ ಮತ್ತು ಇಶಾನ್ ಕಿಶನ್ 516 ರನ್‌ಗಳನ್ನು ಬಾರಿಸುವುದರ ಮೂಲಕ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 10 ಆಟಗಾರರ ಪಟ್ಟಿಯಲ್ಲಿ ಈ ಮೂವರು ಸ್ಥಾನವನ್ನು ಪಡೆದುಕೊಂಡಿದ್ದರು.
2020ರ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 5 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

5. ಇಶಾನ್ ಕಿಶನ್ : 516 ರನ್
ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಇಶಾನ್ ಕಿಶನ್ 13 ಇನ್ನಿಂಗ್ಸ್‌ಗಳಲ್ಲಿ ಆಡಿ 516 ರನ್ ಬಾರಿಸುವ ಮೂಲಕ ಆ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

4. ಶ್ರೇಯಸ್ ಐಯ್ಯರ್ : 519 ರನ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ಶ್ರೇಯಸ್ ಐಯ್ಯರ್ 17 ಇನ್ನಿಂಗ್ಸ್‌ನಲ್ಲಿ 519 ರನ್ ಬಾರಿಸುವುದರ ಮೂಲಕ 2020ರ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

3. ಡೇವಿಡ್ ವಾರ್ನರ್ : 548 ರನ್
ಸನ್ ರೈಸರ್ ಹೈದರಾಬಾದ್ ತಂಡದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 548 ಬಾರಿಸುವ ಮೂಲಕ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

2. ಶಿಖರ್ ಧವನ್ : 618 ರನ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶಿಖರ್ ಧವನ್ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 17 ಇನ್ನಿಂಗ್ಸ್‌ಗಳಲ್ಲಿ ಆಡಿದ್ದ ಶಿಖರ್ ಧವನ್ ಗಳಿಸಿದ್ದು 618 ರನ್.

1. ಕೆಎಲ್ ರಾಹುಲ್ : 670 ರನ್
ಕಿಂಗ್ಸ್ ಇಲೆವೆನ್ ಪಂಜಾಬ್ ( ಈಗಿನ ಪಂಜಾಬ್ ಕಿಂಗ್ಸ್ ) ತಂಡದ ಕೆ ಎಲ್ ರಾಹುಲ್ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 14 ಇನ್ನಿಂಗ್ಸ್ ಆಡಿ 670 ರನ್ ಬಾರಿಸುವುದರ ಮೂಲಕ ಆ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications