CSK vs RR: ಐಪಿಎಲ್: ಚೆನ್ನೈ vs ರಾಜಸ್ಥಾನ್, ಸಂಭಾವ್ಯ ತಂಡಗಳು, ಪ್ರಮುಖ ಮಾಹಿತಿ

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಏಪ್ರಿಲ್ 19) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳೂ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ದಾಖಲಿಸಿವೆ. ಇಂದು ಇತ್ತಂಡಗಳ ಕದನ ಕುತೂಹಲ ಮೂಡಿಸಿದೆ.
ಸದ್ಯದ ಐಪಿಎಲ್ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 4ನೇ ಸ್ಥಾನದಲ್ಲಿದ್ದರೆ, 5ನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವಿದೆ. ಇಂದಿನ ಪಂದ್ಯಕ್ಕೂ ಮುನ್ನ ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್, ಹವಾಮಾನ ವರದಿ ಇತ್ಯಾದಿ ಪಂದ್ಯಕ್ಕೆ ಸಂಬಂಧಿಸಿ ಪ್ರಮುಖ ಸಂಗತಿಗಳು ಇಲ್ಲಿವೆ.

ಚೆನ್ನೈ-ರಾಜಸ್ಥಾನ್ ಪಂದ್ಯದ ಆರಂಭ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಏಪ್ರಿಲ್ 19ರ ಸೋಮವಾರ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. 7.30 PMಗೆ ಪಂದ್ಯ ಆರಂಭಗೊಳ್ಳಲಿದೆ. ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಪಿಚ್ ಮತ್ತು ವೆದರ್ ರಿಪೋರ್ಟ್
ಮುಂಬೈಯ ವಾಂಖೆಡೆ ಸ್ಟೇಡಿಯಂ ಸ್ವಲ್ಪ ಮಟ್ಟಿಗೆ ವೇಗಿಗಳಿಗೆ ಅನುಕೂಲ ಮಾಡಿಕೊಡುವ ಪಿಚ್. ಇದು ಬ್ಯಾಟಿಂಗ್ ವಿಕೆಟ್ ಆಗಿರುವುದರಿಂದ ವಿಕೆಟ್ ಪಡೆಯುವ ಬೌಲರ್‌ಗಳು ತಂಡಕ್ಕೆ ಪ್ರಮುಖ ಕೊಡುಗೆ ನೀಡುತ್ತಾರೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ 180-190 ರನ್ ಬಂದರೆ ಅದು ಉತ್ತಮ ಮೊತ್ತವೆನಿಸಲಿದೆ.

ರಾಜಸ್ಥಾನ್ ಸಂಭಾವ್ಯ ತಂಡ
ಮನನ್ ವೊಹ್ರಾ / ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ಸಿ / ಡಬ್ಲ್ಯೂಕೆ), ಲಿಯಾಮ್ ಲಿವಿಂಗ್ಸ್ಟೋನ್ / ಡೇವಿಡ್ ಮಿಲ್ಲರ್, ಶಿವಮ್ ದೂಬೆ, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್, ಕ್ರಿಸ್ ಮೋರಿಸ್, ಶ್ರೇಯಾಸ್ ಗೋಪಾಲ್, ಮುಸ್ತಾಫಿಜುರ್ ರಹಮಾನ್, ಚೇತನ್ ಸಕರಿಯಾ.

ಚೆನ್ನೈ ಸಂಭಾವ್ಯ ತಂಡ
ಋತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ಸಿ / ಡಬ್ಲ್ಯೂಕೆ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡಿಜೆ ಬ್ರಾವೋ, ಶಾರ್ದೂಲ್ ಠಾಕೂರ್, ಮತ್ತು ದೀಪಕ್ ಚಾಹರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications