ಐಪಿಎಲ್ 2021: ರಾಜಸ್ಥಾನ್‌ಗೆ 189 ರನ್‌ಗಳ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್‌ನ 12ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸವಾಲಿನ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಗಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಧೋನಿ ಬಳಗ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 188 ರನ್‌ಗಳಿಸಲು ಶಕ್ತವಾಯಿತು.
ಫಾಪ್ ಡು ಪ್ಲೆಸಿಸ್ ಜೊತೆಗೆ ಇನ್ನಿಂಗ್ಸ ಆರಂಭಿಸಲು ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಮತ್ತೊಂದು ನಿರಾಶಾದಾಯಕ ಇನ್ನಿಂಗ್ಸ್ ಆಡಿದರು. ಕೇವಲ 10 ರನ್‌ಗಳಿಸಿ ಋತುರಾಜ್ ವಿಕೆಟ್ ಒಪ್ಪಿಸಿದರು. ಬಳಿಕ ಫಾಪ್ ಡು ಪ್ಲೆಸಿಸ್ 17 ಎಸೆತಗಳಲ್ಲಿ 33 ರನ್‌ಗಳಿಸಿದರೆ ಮೊಯೀನ್ ಅಲಿ 26 ರನ್‌ಗಳಿಸಿದರು.
ಸುರೇಶ್ ರೈನಾ 18, ಅಂಬಾಟಿ ರಾಯುಡು 27, ಎಂಎಸ್ ಧೋನಿ 18, ರವೀಂದ್ರ ಜಡೇಜಾ 8, ಸ್ಯಾನ್ ಕರನ್ 13, ಶಾರ್ದೂಲ್ ಠಾಕೂರ್ 1 ರನ್‌ಗಳಿಸಿ ಔಟಾದರು. ಅಂತಿಮವಾಗಿ ಡ್ವೇಯ್ನ್ ಬ್ರಾವೋ 8 ಎಸೆತಗಳಲ್ಲಿ 20 ರನ್ ಬಾರಿಸಿ ತಂಡದ ಮೊತ್ತ 188ಕ್ಕೆ ಏರಿಕೆಯಾಗಲು ಕಾರಣರಾದರು.
ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ದೊಡ್ಡ ಜೊತೆಯಾಟ ಬಾರದಿದ್ದರೂ ಬಹುತೇಕ ಆಟಗಾರರು ಸರಾಸರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಆದ ಕಾರಣ ತಂಡ ಸವಾಲಿನ ಗುರಿಯನ್ನು ಎದುರಾಳಿಗೆ ನೀಡಲು ಶಕ್ತವಾಗಿದೆ.
ರಾಜಸ್ಥಾನ್ ರಾಯಕ್ಸ್ ಪರವಾಗಿ ಚೇತನ್ ಸಕಾರಿಯಾ ಉತ್ತಮ ಯಶಸ್ಸು ಪಡೆದರು. ನಾಲ್ಕು ಓವರ್‌ಗಳಲ್ಲಿ 36 ರನ್ ನೀಡಿ 3 ವಿಕೆಟ್ ಕಿತ್ತಿದ್ದಾರೆ. ಉಳಿದಂತೆ ಕ್ರಿಸ್ ಮೋಡಿಸ್ ಎರಡು ವಿಕೆಟ್ ಪಡೆದರೆ ಮುಸ್ಫಿಜುರ್ ರಹ್ಮಾನ್ ಹಾಗೂ ರಾಹುಲ್ ತೆವಾಟಿಯಾ ತಲಾ 1 ವಿಕೆಟ್ ಪಡೆದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications